ಶಿವಮೊಗ್ಗ,
ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಎನ್.ಯು. ಆಸ್ಪತ್ರೆಯಲ್ಲಿ ಅಪರೂಪದ ಕಿಡ್ನಿ ಕಸಿ ಚಿಕಿತ್ಸೆಯ ಯಶಸ್ವಿ ಪ್ರಯೋಗವಾಗಿದೆ ಎಂದು ಎನ್.ಯು. ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ. ಪ್ರದೀಪ್ ಹೇಳಿದರು.
ಅವರು ಇಂದು ಮಾಚೇನಹಳ್ಳಿಯಲ್ಲಿರುವ ಎನ್.ಯು. ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋ ಷ್ಠಿಯಲ್ಲಿ

ಮಾತನಾಡಿ, ಇದುವರೆಗೂ ಮೂತ್ರಪಿಂಡ ಕಸಿ ಒಂದೇ ರಕ್ತದ ಗುಂಪುಗ ಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರಕ್ತದ ಗುಂಪುಗಳು ಹೊಂದಾಣಿಕೆಯಾಗದಿದ್ದರೂ ವಿಶೇಷ ಚಿಕಿತ್ಸೆಗಳ ಮೂಲಕ ಮೂತ್ರಪಿಂಡ ಕಸಿ ಪ್ರಯೋಗ ಮಾಡಲಾಗಿದೆ, ಇದು ನಮ್ಮ ಆಸ್ಪತ್ರೆಯ ಹೆಮ್ಮೆಯಾಗಿದೆ ಎಂದರು.


ಬೀರೂರಿನ ಗಿರೀಶ್ ಎಂಬುವವರಿಗೆ ಮೂತ್ರಪಿಂಡ ಕಸಿ ಆಗಬೇಕಿತ್ತು. ಆದರೆ, ದಾನಿಗಳು ಸಿಕ್ಕಿರಲಿಲ್ಲ. ಅವರ ಪತ್ನಿಯೇ ಕಿಡ್ನಿ ದಾನ ಮಾಡಲು ಸಿದ್ಧರಾಗಿದ್ದರು. ರೋಗಿಯ ರಕ್ತ ಬಿ ಪಾಸಿಟಿವ್ ಇತ್ತು. ಪತ್ನಿಯ ರಕ್ತದ ಗುಂಪು ಎ ಪಾಸಿಟಿವ್ ಇತ್ತು. ಹಾಗಾಗಿ ಕಸಿ ಮಾಡುವುದು ಕಷ್ಟವಾಗಿತ್ತು. ಆದರೆ,

ನಮ್ಮ ಆಸ್ಪತ್ರೆಯಲ್ಲಿ ಅವರು ದಾಖಲಾದಾಗ ಮೂತ್ರ ಪಿಂಡವನ್ನು ರಕ್ಷಿಸುವ ಔಷಧಿಗಳ ಮೂಲಕ (ಪ್ಲಾಸ್ಮಾಫೆರೆಸಿಸ್ ವಿಧಾನ) ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರ ಪತ್ನಿ ಹರ್ಷಿತಾ ಕೂಡ ಕಿಡ್ನಿ ದಾನ ಮಾಡಿದ್ದರೂ ಆರೋಗ್ಯವಾಗಿ ದ್ದಾರೆ. ಹಾಗಾಗಿ ಇದೊಂದು ಅಪರೂಪದ ಕಿಡ್ನಿ ಕಸಿ ಚಿಕಿತ್ಸೆಯ ಯಶಸ್ವಿ ಪ್ರಯೋಗವಾಗಿದೆ. ಇದಲ್ಲದೇ, ನಮ್ಮ ಆಸ್ಪತ್ರೆಯಲ್ಲಿ ಸುಮಾರು ೫ ಕ್ಕೂ ಹೆಚ್ಚು ಮೂತ್ರಪಿಂಡ ಜೋಡಣೆ ಮಾಡಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರವೀಣ್ ಮಾಳವಧೆ, ಡಾ. ಕಾರ್ತಿಕ್, ಪಿ.ಆರ್.ಒ. ಶ್ರುತಿ ರಾವ್ ಇದ್ದರು
.

By admin

ನಿಮ್ಮದೊಂದು ಉತ್ತರ

error: Content is protected !!