ಮಂಗಳೂರು ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸುಳ್ಯ ಗ್ರಾಮದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರುರವರ ಹತ್ಯೆಯನ್ನು ಖಂಡಿಸಿ ಹೊಸನಗರದ ಹಿಂದೂಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್,ಹಿಂದೂ ಜಾಗರಣ ವೇದಿಕೆ, ಭಜರಂಗದಳ, ವಿದ್ಯಾರ್ಥಿ ಪರಿಷತ್ ಇನ್ನೂ ಮುಂತಾದ ಸಂಘಟನೆಗಳ ಆಶ್ರಯದಲ್ಲಿ ಗಣಪತಿ ದೇವಸ್ತಾನದಿಂದ ತಹಶೀಲ್ದಾರ್ ಕಛೇರಿಯವರೆವಿಗೆ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಪತ್ರ ಅರ್ಪಿಸಿ ಹತ್ಯೆ ಮಾಡಿರುವ ಹಂತಕರನ್ನು ತಕ್ಷಣ ಬಂಧಿಸಬೇಕು ಹಾಗೂ ಉಗ್ರ ಶಿಕ್ಷೆಯನ್ನು ನೀಡಬೇಕೆಂದು ತಹಶೀಲ್ದಾರ್ ರಾಜೀವ್‌ರವರ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.


ಮನವಿ ಪತ್ರ ಸಲ್ಲಿಸಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡುರವರು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ರವರ ಹತ್ಯೆಯನ್ನು ಕರ್ನಾಟಕ ರಾಜ್ಯದ ಎಲ್ಲ ಧರ್ಮ ವರ್ಗದವರು ಹಾಗೂ ಎಲ್ಲ ರಾಜಕೀಯ ಪಕ್ಷದವರು ಖಂಡಿಸಬೇಕು ಹತ್ತಯೆ ಮಾಡುವ ವ್ಯಕ್ತಿ ಯಾವುದೇ ಜಾತಿ ಧರ್ಮವೆನ್ನದೇ ಕಠಿಣ ಶಿಕ್ಷಯಾದರೇ ಮಾತ್ರ ಈ ದೇಶದಲ್ಲಿ ರಾಜ್ಯದಲ್ಲಿ ಶಾಂತಿಯಿಂದ ಜೀವನ ಸಾಗಿಸಲು ಸಾದ್ಯ ಇಲ್ಲವಾದರೇ ಮುಂದಿನ ದಿನದಲ್ಲಿ ಬದುಕುವುದೇ ಕಷ್ಟಕರವಾಗುತ್ತದೆ ರಾಜಕೀಯ ಪಕ್ಷಗಳು ಯಾವುದೇ ಕಾರಣಕ್ಕೂ ಕೊಲೆಗಾರನಿಗೆ ಬೆಂಬಲ ನೀಡದೇ ಖಂಡಿಸಿದರೆ ನಮ್ಮ ರಾಜ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯ ಕೊಲೆಗಡುಕರನ್ನು ಬಂಧಿಸಿ ಎಂದರು.


ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್. ದೇವಾನಂದ್ ಮಾತನಾಡಿ ಅಪರಾಧಿಗಳನ್ನು ತಕ್ಷಣ ಬಂಧಿಸುತ್ತೇವೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ ಸರ್ಕಾರ ಬಲಹೀನ ದೌರ್ಬಲ್ಯ ಎಂದು ತಿಳಿಯುವುದು ತಪ್ಪು ರಾಜ್ಯದಲ್ಲಿ ಶಾಂತಿ ಕಾಪಾಡಲು ಹಿಂದುಗಳು ಸಂಯಮದಿಂದ ಎಲ್ಲವನ್ನು ಸಹಿಸಿಕೊಂಡು ಹೋಗ ಬೇಕಾಗಿದೆ ಆದರೆ ಹಿಂದುಗಳು ಎಷ್ಟು ದಿನಗಳ ಕಾಲ ಶಾಂತಿಯಿಂದ ಇರಲು ಸಾದ್ಯ? ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕಾದರೆ ಕೊಲೆಗಾರರಿಗೆ ಕಠಿಣವಾದ ಶಿಕ್ಷೆಯಾಗಬೇಕು ಅದನ್ನು ಬಿಜೆಪಿ ಸರ್ಕಾರ ಮಾಡೇ ಮಾಡುತ್ತದೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜೀ ಸದಸ್ಯ ಸುರೇಶ್ ಸ್ವಾಮಿರಾವ್, ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್. ದೇವಾನಂದ್, ಇಟಾಚಿ ಶ್ರೀದರ, ಎ.ವಿ ಮಲ್ಲಿಕಾರ್ಜುನ, ಬಿ.ಯುವರಾಜ್, ಹನಿಯರವಿ, ಎಂ.ಎನ್ ಸುದಾಕರ್, ಸುದೀಂದ್ರ ಪಂಡಿತ್, ಗುರುರಾಜ್ ಆರ್, ಮಂಡಾಣಿ ಮೋಹನ, ಗುಲಾಬಿ ಮರಿಯಪ್ಪ, ಗಣಪತಿ ಬಿಳಗೋಡು, ಶಿವಾನಂದ, ಓಂಕಾರ, ಕೆ.ಜಿ. ನಾಗೇಶ್, ಧರ್ಮಣ್ಣ, ಮಾವಿನಕಟ್ಟೆ ಶಿವಾನಂದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!