ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ
2022-23 ನೇ ಶೈಕ್ಷಣಿಕ ಸಾಲಿಗೆ ಯುಜಿಸಿಯ ಮಾನ್ಯತೆಯೊಂದಿಗೆ ಜೂನ್20 ರಿಂದ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎಂ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ, ಪದವಿ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಲಿಬ್.ಐ.ಎಸ್ಸಿ, ಸ್ನಾತಕೋತ್ತರ ಪದವಿ ಹಾಗೂ ಪಿಜಿ ಡಿಪೊ?ಲಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣಕ್ರಮಗಳ ಪ್ರವೇಶಾತಿ ಆರಂಭವಾಗಿದೆ.


ವಿದ್ಯಾರ್ಥಿಗಳು ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ಅಂತರ್ಜಾಲ  www.ksoumysuru.ac.in  ದಲ್ಲಿ ಭರ್ತಿ ಮಾಡಿ ಆಲ್ಕೊಳ ಸರ್ಕಲ್ ಹತ್ತಿರ ಇರುವ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.


ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಡಿಫೆನ್ಸ್/ಎಕ್ಸ್‌ಸರ್ವಿಸ್ ಮನ್ ವಿದ್ಯಾರ್ಥಿಗಳು, ಆಟೋ/ಕ್ಯಾಬ್ ವಾಹನ ಚಾಲಕರ ಮತ್ತು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ. ಹಾಗೂ ಕೋವಿಡ್‌ನಿಂದಾಗಿ ಮೃತರಾದ ಪೊ?ಷಕರ ಮಕ್ಕಳಿಗೆ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣಶುಲ್ಕ ವಿನಾಯಿತಿ ಇದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಶಿವಮೊಗ್ಗ ನಗರದಲ್ಲಿರುವ ವಿವಿ ಯ ಕಲಿಕಾರ್ಥ ಸಹಾಯ ಕೇಂದ್ರಗಳಾದ ಡಿವಿಎಸ್ ಮತ್ತು ಹೊಯ್ಸಳ ಕಾಲೇಜುಗಳಲ್ಲಿ ಕೂಡ ಪ್ರವೇಶಾತಿ ಪಡೆಯಬಹುದು.


ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ www.ksoumysuru.ac.inದೂರವಾಣಿ ಸಂಖ್ಯೆ: 08182-250367, 9739803295, 9480765905, 9164467131 ನ್ನು ಸಂಪರ್ಕಿಸಬಹುದೆಂದು ಕರಾಮುವಿ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!