ತೆಲಂಗಾಣ:
ಗಂಡ ಹೆಂಡತಿ ಸಂಬಂಧ ಗ್ರೇಟ್ ಅಂತಾರೆ., ಹಾಗೇ ತುಂಬಾ ಜನ ಬದುಕಿದ್ದಾರೆ. ಕಳೆದುಕೊಂಡ ಗಂಡ ಅಥವಾ ಹೆಂಡತಿ ಸದಾ ಅವರ ನೆನಪಲ್ಲೇ ಜೀವನ ಕಳೆಯುತ್ತಾರೆ. ಆದರೆ, ಇಲ್ಲೊಬ್ಬರ ಇಬ್ಬರು ಹೆಂಡತಿಯರು ಗಂಡ ಸತ್ತಾಗ ಅವರ ಅಂತ್ಯಕ್ರಿಯೆ ಮಾಡದೇ ತಮ್ಮ ಪಾಲಿನ ಆಸ್ತಿ ನೊಂದಣಿಗೆ ಕಿತ್ತಾಡಿದ ಘಟನೆ ವರದಿಯಾಗಿದೆ.
ಪತಿಯ ಮೃತದೇಹವನ್ನು ಇಟ್ಟು ಇಬ್ಬರು ಪತ್ನಿಯರು ಆಸ್ತಿಗಾಗಿ ಜಗಳ ಮಾಡಿ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಆಸ್ತಿ ನೋಂದಣಿಗೆ ತಹಶೀಲ್ದಾರ್ ಕಚೇರಿಗೆ ಹೋಗಿದ್ದಾರೆ.
ಕೋರುಟ್ಲ ತಾಲೂಕಿನ ಐಲಾಪೂರ್ ಗ್ರಾಮದಲ್ಲಿ ಪತಿಯ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪತ್ನಿಯರಿಬ್ಬರು ಆಸ್ತಿ ಹಂಚಿಕೆಗೋಸ್ಕರ ಅಡ್ಡಿಪಡಿಸಿ, ಆಸ್ತಿ ಹಂಚಿಕೆ ಆಗುವವರೆಗೆ ಅಂತ್ಯಸಂಸ್ಕಾರಕ್ಕೆ ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು.
ಗ್ರಾಮದ ನಿವಾಸಿ ನರಸಿಂಹುಲು ಕೋರುಟ್ಲದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಹೆಂಡತಿಯರು. ನರಸಿಂಹುಲು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳನ್ನು ಪತ್ನಿಯರಿಬ್ಬರು ಒಂದಾಗಿ ನೆರವೇರಿಸಬೇಕಾಗಿತ್ತು.
ಆದರೆ, ಆಸ್ತಿಯಲ್ಲಿ ಪಾಲಿಗಾಗಿ ಇಬ್ಬರು ಹೆಂಡತಿಯರು ಮೃತದೇಹದ ಮುಂದೆ ಜಗಳವಾಡಿದ್ದಾರೆ. 3 ಎಕರೆ ಕೃಷಿ ಭೂಮಿ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದರು.
ಜಮೀನು ನೋಂದಣಿಯಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಪತ್ನಿಯರು ಹಠ ಹಿಡಿದರು.
ಹೀಗಾಗಿ ಅವರಿಬ್ಬರು ತಮ್ಮ ಗಂಡನ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಆಸ್ತಿ ನೋಂದಣಿಗಾಗಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಮೊದಲ ಪತ್ನಿ ಹೆಸರಲ್ಲಿದ್ದ ಮೂರು ಎಕರೆ ಕೃಷಿ ಜಮೀನು ಎರಡನೇ ಪತ್ನಿ ಹೆಸರಿಗೆ ವರ್ಗಾವಣೆಯಾದ ಬಳಿಕ ಮನೆಗೆ ಬಂದು ಪತಿಯ ಅಂತ್ಯಕ್ರಿಯೆ ನೆರವೇರಿಸಿದರು.
- ಕನ್ನಡ ದೈನಿಕ ಅಂತರ್ಜಾಲ ಮಾಹಿತಿ ಕೃಪೆ