ಶಿವಮೊಗ್ಗ,
ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಅಗ್ನಿಪತ ಯೋಜನೆ ಸಹಕಾರಿ, ಸರ್ಕಾರವು ಈಗಾಗಲೆ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಟ್ಟು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಸಂಸದ ಬಿ. ವೈ ರಾಘವೇಂದ್ರ ಹೇಳಿದರು.
ಅವರು ಡಿ.ವಿ.ಎಸ್ ಸಿಂಗಾರ ಸಭಾಂಗಣ ದಲ್ಲಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮತ್ತು ಡಿ.ವಿ.ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಕೌಶಲ್ಯಾ ಭಿವೃದ್ದಿ ಇಲಾಖೆಯ ವತಿಯಿಂದ ಹಮ್ಮಿಕೊ ಳ್ಳಲಾದ ಬೃಹತ ಉದ್ಯೋಗ ಮೇಳದ ಸಮಾರೋಪ ಸಮಾರಂಬದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಭ್ಯರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಗಳನ್ನು ಬೆಲೆಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉದ್ಯೋಗಕ್ಕೆ ವಿಫುಲ ವಾದ ಅವಕಾಶಗಳಿವೆ. ನಾವು ಎಷ್ಟೇ ಪದವಿ ಪಡೆದರು ಕೌಶಲ್ಯ ಅತಿ ಮುಖ್ಯವಾದುದು ಎಂದು ನುಡಿದರು. ಅಗ್ನಿಪತ್ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬೇಡ ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳಿಗೆ, ಸಂಸ್ಥೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆ ಪತ್ರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊ ಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾ ಡುತ್ತಾ, ಉದ್ಯೋಗ ಮೇಳದಲ್ಲಿ ೧೮೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು
ಭಾಗಿಯಾಗಿರುವುದು ನಿಜಕ್ಕೂ ಸಂತೋಷ ಮುಂದಿನ ದಿನಗಳಲ್ಲಿ ಆಯ್ಕೆಯಾಗದೆ ಇರುವ ಅಭ್ಯರ್ಥಿಗಳಿಗೆ ಡಿ.ವಿ.ಎಸ್ ಕಾಲೇಜಿನ ಸಹಕಾರದೊಂದಿಗೆ ಕೌಶಲ್ಯ ತರಬೇತಿ ನೀಡುವುದರ ಮೂಖಾಂ ತರ ಪರಿಣಿತರನ್ನಾಗಿ ಮಾಡಿ ಉದ್ಯೋಗಾ ವಕಾಶ ಕಲ್ಪಿಸಲಾಗುವುದು ಎಂದರು.
ಡಿ.ವಿ.ಎಸ್ ಕಾಲೇಜಿನ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಬರುವ ದಿನಗಳಲ್ಲಿ ಇಂತಹ ಕಾರ್ಯಗಳಿಗೆ ನಮ್ಮ ಸಂಸ್ಥೆ ಸದಾ ಜೊತೆಯಲ್ಲಿದ್ದು ಸಹಕಾರಿ ಯಾಗುವುದಾಗಿ ಎಂದರು.
ಡಿ.ವಿ.ಎಸ್ ಸಂಸ್ಥೆಯ ಸಹ-ಕಾರ್ಯದರ್ಶಿ ಸತೀಶ್‌ಕುಮಾರ್ ಶೆಟ್ಟಿರವರು ಮಾತನಾಡಿ ಶಿವಮೊಗ್ಗ ವಾಣಿಜ್ಯ ಸಂಘದ ಈ ಕಾರ್ಯ ಪ್ರಶಂಶನೀಯ ಎಂದರು.
ಡಿ.ವಿ.ಎಸ್ ಸಂಸ್ಥೆಯ ಅಧ್ಯಕ್ಷ ಕೊಳಲೆ ಶ್ರೀ ರುದ್ರಪ್ಪರವರು ಮಾತನಾಡಿ ಉದ್ಯೋಗ ಮೇಳದಿಂದ ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾ ಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ ೨೬ ಕ್ಕೂ ಹೆಚ್ಚು ಕಂಪನಿಗಳು ಸಂಸ್ಥೆಗಳು, ಬೆಂಗಳೂರು, ಶಿವಮೊಗ್ಗ, ತುಮ ಕೂರುಗಳಿಂದ ಬಂದು ಭಾಗವಹಿಸಿರುವುದು ವಿಶೇಷವಾಗಿದೆ.
ವೇದಿಕೆಯಲ್ಲಿ ಡಿ.ವಿ.ಎಸ್ ವಿದ್ಯಾ ಸಂಸ್ಥೆಯ ಖಜಾಂಚಿ ಬಿ. ಗೋಪಿನಾಥ್, ವಾಣಿಜ್ಯ ಸಂಘದ ಕೌಶಲ್ಯಾಭಿವೃದ್ದಿ ಸಮಿತಿ ಛೇರ‍್ಮನ್ ಗಣೇಶ ಎಂ. ಅಂಗಡಿ, ಸಹಕಾ ರ್ಯದರ್ಶಿ ಜಿ. ವಿಜಯಕುಮಾರ್, ಪ್ರದೀಪ್ ವಿ. ಯಲಿ, ಎಂ.ಎ. ರಮೇಶ್ ಹೆಗಡೆ, ಡಿ.ವಿ.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಂಶುಪಾಲರಾದ ವೆಂಕಟೇಶ್, ಉಪನ್ಯಾಸಕರುಗಳು ಉಪಸ್ಥಿತರಿದ್ದರು.