ಶಿವಮೊಗ್ಗ, ಆ.24:
ಈ ಪೊಲೀಸಪ್ಪನ ಬಗ್ಗೆ ತುಂಬಾ ನೀವು ತಿಳಿದುಕೊಳ್ಳಲೇಬೇಕು. ಕುಡಿದ ಮತ್ತಿನಲ್ಲಿ ಏನು ಬೇಕಾದರೂ ಆಗುತ್ತೆ ಎಂಬುದಕ್ಕೆ ಪೊಲೀಸಪ್ಪ ಒಂದು ಸಾಕ್ಷಿಯಾಗಿ ನಿಂತಿರುವುದು ದುರಂತವೇ ಹೌದು.
ತೀರ್ಥಹಳ್ಳಿ ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸಪ್ಪ ಎಲ್ಲರಿಗಿಂತ ಭಿನ್ನ-ವಿಭಿನ್ನವಾಗಿ ವರ್ತಿಸುವ ಪೊಲೀಸಪ್ಪನ ಬಗ್ಗೆ ಕಾಳಜಿ ಕಳಕಳಿ ಎಂದುಕೊಳ್ಳಬೇಡಿ.
ಕಳೆದ 3 ದಿನಗಳ ಹಿಂದೆ ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ಕುಡಿದ ಮತ್ತಿನಲ್ಲಿ ಈ ಪೊಲೀಸಪ್ಪ ಓರ್ವನಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಚಿತ್ರಣವನ್ನು ವಿಡಿಯೋ ಮಾಡಲಾಗಿದೆ.
ಇದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಆ ವ್ಯಕ್ತಿಯ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುವಂತೆ ಮಾಡದೆ.
ಈ ಪೊಲೀಸ್ ನೌಕರರ ಹೆಸರು ಪೂರ್ಣೇಶ್. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕಳೆದ 5ದಿನಗಳಿಂದ ಠಾಣೆಗೆ ರಜೆ ಹಾಕಿ ಹೊರಗಿದ್ದಾರೆ. ಹಾಗೆಯೇ ಮೊನ್ನೆ ಗೆಳೆಯರ ಜೊತೆ ಕುಡಿದಿದ್ದಾರಂತೆ. ಅದೂ ಹಾಡುಹಗಲು ಹಾಗೂ ಮಿತಿಮೀರಿದ್ದು ಈ ಅವಾಂತರಕ್ಕೆ ಕಾರಣವಾಗಿದೆ. ಕುಡಿಯುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ಎಷ್ಟರಮಟ್ಟಿಗೆ ಎಂದರೆ ಬಸ್ ನಿಲ್ದಾಣದಲ್ಲಿ ಅತ್ಯಂತ ಅಸಂಬದ್ಧವಾಗಿ ಜನರ ಸಮ್ಮುಖದಲ್ಲಿ ಕಾಲಿನಿಂದ ಒಂದಿಷ್ಟು ಯೋಚಿಸದೆ ಹೊದ್ದಿದ್ದಾರೆ. ದುರಂತ ಗೊತ್ತೆ ಮತ್ತೆ ಇದೇ ಗೆಳೆಯರು ರಾತ್ರಿ ಬಾರ್ ನಲ್ಲಿ ಚಂದ ಕುಡಿದಿದ್ದಾರಂತೆ.
ಎಲ್ಲರಿಗೂ ಅವರವರ ಕೆಲಸದ ನಡುವೆ ಸಾಮಾಜಿಕ ಗೌರವ ಇರುತ್ತದೆ.ಕುಡಿದವರು ಶಿಸ್ತಾಗಿ ಮನೆಗೆ ಹೋಗಿದ್ದರೆ ಇದೊಂದು ವಿಷಯ ವಾಗುತ್ತಿರಲಿಲ್ಲ. ಆದರೆ ಒಂದಿಷ್ಟು ಯೋಚಿಸದೆ ಜನರ ಸಮ್ಮುಖದಲ್ಲಿ ಹೀಗೆ ಅಸಂಬದ್ಧವಾಗಿ ಹಲ್ಲೆ ನಡೆಸಿರುವುದು ಈಗ ಪ್ರಶ್ನೆಗೆ ಕಾರಣವಾಗಿದೆ.
ಪೂರ್ಣೇಶ್ ಹಿಂದೆ ಸಹ ಇಂತಹ ಆರೋಪ ಹೊತ್ತಿದ್ದ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಅಸಂಬದ್ಧವಾಗಿ ವರ್ತಿಸಿ ಪೊಲೀಸರೇ ತಲೆತಗ್ಗಿಸುವಂತೆ ಮಾಡಿರುವುದು ದುರಂತ. ವಿಡಿಯೋ ಚಿತ್ರೀಕರಣ ಮಾಡಿದ್ದು ಸಹ ಗೊತ್ತಿಲ್ಲದಷ್ಟು ಅಸಂಬದ್ಧವಾಗಿ ವರ್ತಿಸುತ್ತಾರೆ ಎಂದರೆ ಅವರ ಮನೋಸ್ಥಿತಿಯನ್ನು ಇಲ್ಲಿ ಪ್ರಶ್ನಿಸಲೇಬೇಕು. ಯಾರೂ ದೂರು ನೀಡದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಆತನನ್ನು ಸರಿಪಡಿಸುವ ನಿಟ್ಟಿನಲ್ಲಿ ಚಿಂತಿಸುವ ಜೊತೆಗೆ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬೇಕಿತ್ತಾ ಎಣ್ಣೆ ಪೊಲೀಸಪ್ಪ ಎಂದು ಜನ ಹಾದಿ ಬೀದಿಯಲ್ಲಿ ಮಾತನಾಡುವ ಅಗತ್ಯವಿತ್ತಾ…?