ಶಿವಮೊಗ್ಗ,
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ ವಾದ್ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಾಸ್ ತೆಗೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ, ಪ್ರಜಾಪ್ರಭುತ್ವವನ್ನು ಕಾಪಾಡ ಬೇಕೆಂದು ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿಕೊಂಡಿದೆ.
ಗುಜರಾತ್ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್ ಕೊಟ್ಟ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರವು ಸೇಡಿನ ರಾಜಕಾರಣ ಆರಂಭಿಸಿದೆ. ಸುಳ್ಳು ಆರೋಪದ ಮೇಲೆ ತೀಸ್ತಾ ಸೆಟಲ್‌ವಾದ್ ಅವರನ್ನು ವಿಚಾರಣೆ ಹೆಸರಿನಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಘೋರ ಅನ್ಯಾಯ ಹಾಗೂ ಸರ್ವಾಧಿಕಾರಿ ದಬ್ಬಾಳಿಕೆಯಾ ಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಾಗಿದೆ.
ಗುಜರಾತ್ ಹತ್ಯಾಕಾಂಡದ ಬಲಿಪಶುಗಳ ಪರವಾಗಿ ನಿರಂತರ ಕಾನೂನು ಹೋರಾಟ ನಡೆಸುತ್ತಾ ಬಂದಿರುವ ತೀಸ್ತಾ ಸೆಟಲ್‌ವಾದ್, ಭಾರತದ ನ್ಯಾಯಪರತೆಯ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಮಾನವ ಹಕ್ಕುಗಳ ಧಮನದ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ್ದಾರೆ. ಇಂತಹ ಮಾನವ ಹಕ್ಕು ಹೋರಾಟಗಾರ್ತಿ, ನೊಂದವರ ಪರವಾಗಿ ಧ್ವನಿ ಎತ್ತುವ ತೀಸ್ತಾ ಮೇಲೆ ಸುಳ್ಳುಕೇಸುಗಳನ್ನು ದಾಖಲಿಸಿ ಹೋರಾಟವನ್ನು ಹತ್ತಿಕ್ಕಲು ಹೊರಟಿರು ವುದನ್ನು ಒಕ್ಕೂಟ ಖಂಡಿಸಿದೆ.
ಆದ್ದರಿಂದ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ತೀಸ್ತಾ ಹಾಗೂ ಇತರರ ಮೇಲೆ ದಾಖಲಾಗಿರುವ ಸುಳ್ಳುಕೇಸುಗಳನ್ನು ವಾಪಾಸ್ ಪಡೆದು ಅವರನ್ನು ಬಿಡುಗಡೆಗೊಳಿಸು ವಂತೆ ಗುಜರಾತ್ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಮೂಲಕ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ಹಕ್ಕು ವೇದಿಕೆಯ ಕೆ.ಪಿ. ಶ್ರೀಪಾಲ್, ಚಿಂತಕ ಪ್ರೊ. ರಾಜೇಂದ್ರಚೆನ್ನಿ, ಕರ್ನಾಟಕ ಜನಶಕ್ತಿಯ ಅನನ್ಯ ಶಿವು, ವಿಚಾರ ವೇದಿಕೆಯ ಆರ್. ಕುಮಾರ್, ಹುಸೇನ್, ಗಿರೀಶ್ ನಾಯ್ಕ ಬೆಳಲಕಟ್ಟೆ, ಸುರೇಶ್ ಅರಸಾಳು, ಮಂಜುನಾಥ ನವುಲೆ ಇತರರಿದ್ದರು.