ಶಿವಮೊಗ್ಗ:
ಪ್ರತಿ ಕಾರ್ಮಿಕರಿಗೂ ಕಾಲಿಗೆ ಗನ್ ಶೂ ಮತ್ತು ಗ್ಲೌಸ್ ಕೊಡಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಮತಿ ಪವಿತ್ರ ರಾಮಯ್ಯ ಕೆ.ಬಿ ಅವರು ಭರವಸೆ ನೀಡಿದರು.
ಅವರು ಗುರುವಾರ ಹಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಸೂಡಿ ಪಾರಂ ಗ್ರಾಮದ ಭದ್ರಾ ಎಡ ನಾಲೆಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಗಾಜು, ಹಾಗೂ ವಿಷ ಜಂತುಗಳಿಂದ ಎಚ್ಚರವಹಿಸುವುದು ಮುಖ್ಯ.
ಕೊಳಚೆ ನೀರಿನಿಂದ ಕಜ್ಜಿ, ತುರುಕೆ, ಜ್ವರ ಹೀಗೆ ಅನೇಕ ರೀತಿಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗ ಬಹುದು ಎಂದರು.
ಕಾರ್ಮಿಕರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸುಮಾರು 267 ಗ್ರಾಮ ಪಂಚಾಯತಿ ಗಳಿವೆ,
ಪ್ರತಿ ಗ್ರಾಮ ಪಂಚಾಯತಿ ಗೂ ಅಂದಾಜು 10000 ವೆಚ್ಚದಲ್ಲಿ,
ಕಾರ್ಮಿಕರಿಗೆ ಕಾಲಿಗೆ ಗನ್ ಶೂ ಮತ್ತು ಕೈಗೆ ಗ್ಲೌಸ್ ವಿತರಿಸಲು ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸರಕಾರದ ಯೋಜನೆಗಳಿಂದ ರೈತರು, ಕಾರ್ಮಿಕರು ಸಫಲತೆಯನ್ನು ಕಾಣುತ್ತಿದ್ದಾರೆ ಅದರ ಜೊತೆಗೆ ಅವರ ಆರೋಗ್ಯದ ಹಿತರಕ್ಷಣೆಯು ಸರಕಾರದ ಗಮನದಲ್ಲಿದೆ ಆದ್ದರಿಂದ ನಾವು ಸದಾ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಕಾರ್ಮಿಕರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ, ನೀರಾವರಿ ಇಲಾಖೆಯ ಅಭಿಯಂತರಾದ ಉಮೇಶ್ ರವರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೀರೇಶ್ ರವರು, ಹಸೂಡಿ ಗ್ರಾಮ ಪಂಚಾಯತಿ ಪಿಡಿಒ ರವರು ಹಾಗೂ ರೈತ ಮುಖಂಡರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.