ಶಿವಮೊಗ್ಗ,ಜೂ.23: ಮೀನುಗಾರಿಕೆ ಇಲಾಖಾ ವ್ಯಾಪ್ತಿಯ ಜಲಸಂಪನ್ಮೂಲ ಗಳನ್ನು 2022-23ನೇ ಸಾಲಿನ ಮೀನುಗಾರಿಕೆ ಫಸಲಿ ವರ್ಷದಿಂದ ಇ-ಟೆಂಡರ್ ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುವುದು.
ಸರ್ಕಾರದ ಆದೇಶ ಮತ್ತು ಒಳನಾಡು ಮೀನುಗಾರಿಕೆ ಕಾರ್ಯನೀತಿ-2014 ರನ್ವಯ ಮೀನುಗಾರಿಕೆ ಇಲಾಖಾ ವ್ಯಾಪ್ತಿಯ ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕನ್ನು ಮೀನುಗಾರರ ಸಹಕಾರ ಸಂಘಗಳಿಗೆ ನೇರ ಗುತ್ತಿಗೆ ಮೂಲಕ ವಿಲೇವಾರಿ ಮಾಡಿದ ನಂತರ ಮತ್ತು ಮೀನುಗಾರರಿಗೆ ಪರವಾನಿಗೆ ನೀಡುವ ಮುಖಾಂತರ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿರುವ ಜಲಸಂಪನ್ಮೂಲಗಳನ್ನು ಹೊರತುಪಡಿಸಿ ಇಲಾಖಾ ವ್ಯಾಪ್ತಿಯ ಉಳಿದ ಜಲಸಂಪನ್ಮೂಲಗಳನ್ನು 2022-23ನೇ ಸಾಲಿನ ಮೀನುಗಾರಿಕೆ ಫಸಲಿ ವರ್ಷದಿಂದ ಇ-ಟೆಂಡರ್ ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುವುದು.
ಆದ್ದರಿಂದ ಇನ್ನು ಮುಂದೆ ಮೀನುಗಾರಿಕೆ ಇಲಾಖೆಯ ವತಿಯಿಂದ ಹೊರಡಿಸಲಾಗುವ ಇ-ಟೆಂಡರ್ ಪ್ರಕಟಣೆಯನ್ವಯ ಇಲಾಖಾ ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಪಡೆಯಲಿಚ್ಚಿಸುವವರು ಕರ್ನಾಟಕ ಸರ್ಕಾರ, ಇ-ಸಂಗ್ರಹಣಾ ಪೋರ್ಟಲ್(ಇ-ಪ್ರೊಕ್ಯುರ್‍ಮೆಂಟ್ ಪೋರ್ಟಲ್)ನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಅಗತ್ಯ ಡಿಎಸ್‍ಸಿ ಕೀ ಹೊಂದುವುದು ಕಡ್ಡಾಯವಾಗಿರುತ್ತದೆ.
ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ ವೆಬ್‍ಸೈಟ್ https://eproc.karnataka.gov.in ಹಾಗೂ ಸಹಾಯವಾಣಿ ಕೇಂದ್ರ +91-8046010000, +91-8068948777 ನ್ನು ಸಂಪರ್ಕಿಸಬಹುದು. ಅಲ್ಲದೇ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ಇವರನ್ನು ಹಾಗೂ ಮೀನುಗಾರಿಕೆ ಉಪನಿರ್ದೇಶಕರು, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.