ಶಿವಮೊಗ್ಗ, ಆ.22:

ಮಾಜಿ ಶಾಸಕರು ಹಾಗೂ ಜೆಡಿಎಸ್ ಮುಖಂಡರೂ ಆದ ಎಂ.ಜೆ ಅಪ್ಪಾಜಿ ಅವರು ಇಂದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಎದುರು ಅಲ್ಲಿನ ಅವ್ಯವಸ್ಥೆ ವಿರೋಧಿಸಿ ಧರಣಿ ನಡೆಸಿದರು.
ಭದ್ರಾವತಿ ತಾಲೂಕಿನ ವ್ಯಕ್ತಿಯೋರ್ವರು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆ ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವುಕಂಡಿದ್ದರು. ಆತನ ಸಾವಿಗೆ ಆಸ್ಪತ್ರೆಯ ನಿರ್ಲಕ್ಷವೇ ಕಾರಣವೆಂಬುದು ಅಪ್ಪಾಜಿ ಗೌಡರ ಧರಣಿಗೆ ಕಾರಣ.
ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದ ನಂಜುಂಡಪ್ಪ (38) ಎಂಬುವರು ಆ.6 ರಂದು ನಡೆದುಕೊಂಡು ಹೋಗುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡ ವ್ಯಕ್ತಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂಜುಂಡಪ್ಪನವರ ಕುಟುಂಬ ಕೂಲಿ ನಂಬಿಕೊಂಡು ದುಡಿಯುವ ಬಡ ರೈತ ಕುಟುಂಬವೆನ್ನಲಾಗಿದೆ. ಇದುವರೆಗೂ ಆಸ್ಪತ್ರೆಯ 2 ಲಕ್ಷ ರೂ. ಬಿಲ್ ಹಣ ತುಂಬಿಸಲಾಗಿದೆ ಎಂಬುದು ಮೃತರ ಪತ್ನಿ ರೂಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಹಣ ಕಟ್ಟಿಸಿಕೊಂಡು ನಂತರ ನನ್ನ ಪತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂಜುಂಡಪ್ಪನ ಸಾವಿಗೆ ಆಸ್ಪತ್ರೆಯ ನಿರ್ಲಕ್ಷವೇ ಕಾರಣವೆಂಬುದು ರೂಪರವರ ಆರೋಪವಾಗಿದೆ.
ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ದ ಜನನಾಯಕರೇ ಪ್ರತಿಭಟನೆಗಿಳಿಯುವ ಪರಿಸ್ಥಿತಿ ಬಂದಿದೆಯೆಂದರೆ ಆ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂದು ಅರ್ಥವಾಗುತ್ತದೆಯಲ್ಲವೇ?
ನಂತರ ಮಾತುಕತೆ ನಡೆದು ಸೂಕ್ತ ಸಮಜಾಯಿಷಿ ನೀಡುವಲ್ಲಿ ಮ್ಯಾಕ್ಸ್ ಆಡಳಿತ ಮಂಡಳಿ ಮುಂದಾಯಿತೆನ್ನಲಾಗಿದೆ. ದರಣಿ ಮುಗಿದಿದ್ದು, ಅಂತಿಮ ನಿರ್ಣಯ ಇನ್ನೂ ತಿಳಿದುಬಂದಿಲ್ಲ.

By admin

ನಿಮ್ಮದೊಂದು ಉತ್ತರ

error: Content is protected !!