ಕರ್ನಾಟಕ ರಾಜ್ಯದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಮೂಲೆ-ಮೂಲೆಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇಂದಿನ ಯುವಕರ ಆನೇಕ ದುಶ್ಚಟಗಳಿಂದ ಮುಕ್ತಿಗೊಳಿಸಲಾಗಿದೆ ಎಂದು ಹೊಸನಗರ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಬೇಬಿ.ಕೆಯವರು ಹೇಳಿದರು.
ಹೊಸನಗರದ ರಾಮಕೃಷ್ಣ ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ವತಿಯಿಂದ ವಿಶ್ವ ತಂಬಾಕು ವಿರೋಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಬಿವೃದ್ಧಿಯಿಂದ ನಮ್ಮ ತಾಲ್ಲೂಕಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಅದರಲ್ಲಿ ತಂಬಾಕು ಮದ್ಯ ಸೇವನೆಯ ಚಟದಿಂದ ಯುವಕರನ್ನು ಮುಕ್ತಿಗೊಳಿಸುವುದೇ ನಮ್ಮ ಉದ್ದೇಶವಾಗಿದೆ ದುಶ್ಚಟ ಮುಕ್ತಿಗೊಳಿಸಲು ಶಾಲೆಕಾಲೇಜ್‌ಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ದುಶ್ಚಟ ಮುಕ್ತಗೊಳಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು ಇಡೀ ರಾಜ್ಯದಲ್ಲಿ ದಶ್ಚಟ ಮುಕ್ತಗೊಳಿಸಿಯೇ ಉತ್ತಮ ಸಮಾಜ ನಿರ್ಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕೊಡಚಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕಿಯಾದ ವಸುದಭಟ್‌ರವರು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ತಂಬಾಕು ವಿರೋಧಿ ದಿನದ ಆಚರಣೆಯ ಉದ್ಧೇಶ ತಂಬಾಕಿನಿಂದ ಮಾಡುವ ಉಪ ಉತ್ಪನ್ನಗಳು ಅದರ ಸೇವನೆ ಮಾಡಿದಾಗ ಅದರಿಂದ ಆಗುವ ದುಷ್ಪಾರಿಣಾಮಗಳು ದುಶ್ಚಟಗಳಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು..
ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಶಾಲೆಯ ಗಿರೀಶ್, ವಲಯ ಮೇಲ್ಪಿಚಾರಕರಾದ ಸುಬಾಷ್, ಸುಮಾಂತ್, ಜಯಲಕ್ಷ್ಮಿ ಹರ್ಷ ಹಾಗೂ ಸುಮಾರು ೨೦೦ಕಿಂತಲ್ಲೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ: ಹೊಸನಗರದ ರಾಮಕೃಷ್ಣ ಶಾಲೆಯ ಆವರಣದಲ್ಲಿ ದುಸ್ಚಟ ಮುಕ್ತ ಸಮಾಜ ನಿರ್ಮಿಸುವ ಬಗ್ಗೆ ಮಾತನಾಡುತ್ತಿರುವುದು.