ಶಿವಮೊಗ್ಗ, ಜೂ.01
ಸ್ಮಾರ್ಟ್ ಸಿಟಿ ಯೋಜನೆ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದು, ಇದರ ರೂವಾರಿ ಎನಿಸಿಕೊಂಡಿರುವ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ತುಂಬಾ ಆಶದೊಂದಿಗೆ ಜಾರಿಯಾಗಿತ್ತು. ಇದು ಜಾರಿಯಾಗುವಾಗ ನಾವು ಇಡೀ ಶಿವಮೊಗ್ಗ ನಗರದ ಎಲ್ಲಾ ವಾರ್ಡ್ ಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿ ಸಮಿತಿಗಳು ಕೊಟ್ಟ ಸಲಹೆಗಳನ್ನು ಪಡೆದು ಸ್ಮಾರ್ಟ್ ಸಿಟಿ ಯೋಜನೆ ಬರಮಾಡಿಕೊಂಡಿದ್ದೆವು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪು ತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗ ಳನ್ನು ಇನ್ನಾದರೂ ತಿದ್ದಿಕೊಳ್ಳಲಿ ಎಂದರು.


ಕೆ.ಎಸ್. ಈಶ್ವರಪ್ಪ ಅವರು ಶಾಸಕರೂ ಆಗಲಿ, ಮುಖ್ಯಮಂತ್ರಿಯೂ ಆಗಲಿ. ಆದರೆ, ಇದುವರೆಗೂ ತಮ್ಮ ಕಾಲದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ಅಪಖ್ಯಾತಿಯನ್ನು ಕೊನೆಗೊಳಿಸಲಿ. ಅವರು ಕೆಟ್ಟ ಹೆಸರಲಿನಲ್ಲಿ ಮನೆಗೆ ಹೋಗುವುದು ನಮಗೆ ಇಷ್ಟವಿಲ್ಲ. ಈಗಲಾದರೂ ತಮ್ಮ ಜವಾಬ್ದಾರಿ ಅರಿತು ನಮ್ಮ ಕಾಲದಲ್ಲಿ ರಚಿಸಿದ್ದ ಎಲ್ಲಾ ಸಮಿತಿಗಳನ್ನು ಪುನಃ ಕರೆದು ಅವರೊಂದಿಗೆ ಚರ್ಚಿಸಿ ಕಾಮಗಾರಿಗಳಲ್ಲಿ ಆದ ಲೋಪಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.


ನಗರದಲ್ಲಿ247 ಕುಡಿಯುವ ನೀರಿನ ಯೋಜನೆ ಇನ್ನೂ ಜಾರಿಯಾಗಿಲ್ಲ. 57ಜೋನ್ ಗಳಿವೆ. ಯಾವ ಜೋನ್ ಗಳೂ ಪರಿಪೂರ್ಣಗೊಂಡಿಲ್ಲ. ಅವ್ಯವಸ್ಥೆಯ ಆಗರವಾಗಿದೆ. ತಿಂಗಳಿಗೆ 175ರೂ. ನೀರಿನ ಶುಲ್ಕ ವಿಧಿಸುವುದಾಗಿ ಅವರು ಹೇಳುತ್ತಾರೆ. ಆದರೆ, ಈ ಸಲಹೆಯನ್ನು ಕಾಂಗ್ರೆಸ್ ಪಕ್ಷವೇ ನೀಡಿತ್ತು ಎಂದರು.
ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಈಶ್ವರಪ್ಪ ನಿಲ್ಲಿಸಬೇಕು. ನಾನು ಶಾಸಕನಾಗಿದ್ದಾಗ ಆಚಾರ್ಯತ್ರಯರ ಭವನವನ್ನು ನಿರ್ಮಿಸಿದ್ದು, ನಾಲ್ಕೂವರೆ ವರ್ಷ ವಾದರೂ ಅದಿನ್ನು ಉದ್ಘಾಟನೆಯಾಗಿಲ್ಲ. ಇದರ ಜೊತೆಗೆ ಆಂಜನೇಯ ಸ್ವಾಮಿ ದೇವಾಲಯದ ಪ್ರಸಾದ ಕೊಠಡಿ ಕೂಡ ಕೆಡವಿದ್ದಾರೆ. ಹಿಂದೂ ಧರ್ಮದ ಹೆಸರು ಹೇಳಿಕೊಳ್ಲುತ್ತಾರೆ ವಿನಹ ಯಾವ ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿಲ್ಲ. ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಲಿ. ಭ್ರಷ್ಟಾಚಾರಕ್ಕೆ ಕೊನೆಯಾಡಲಿ. ಆಮೇಲೆ ರಾಜಕಾರಣದ ಮಾತನಾಡಲಿ ಎಂದು ವ್ಯಂಗ್ಯವಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಟಿ. ಹಾಲಪ್ಪ, ಲಕ್ಷ್ಮಣ್, ದೀಪಕ್ ಸಿಂಗ್, ಪ್ರಸನ್ನ, ಶಿವಾನಂದ್, ಮಂಜು ನಾಥ್, ಸುವರ್ಣಾ, ಚಂದ್ರು, ರಘು, ಶಾಮ ಸುಂದರ್, ವೆಂಕಟೇಶ್, ಮಂಝುನಾಥ್ ಬಾಬು ಮೊದಲಾದವರಿದ್ದರು.

ಕೆ.ಎಸ್. ಈಶ್ವರಪ್ಪ ಅವರು ಶಾಸಕರೂ ಆಗಲಿ, ಮುಖ್ಯಮಂತ್ರಿಯೂ ಆಗಲಿ. ಆದರೆ, ಇದುವರೆಗೂ ತಮ್ಮ ಕಾಲದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ಅಪಖ್ಯಾತಿಯನ್ನು ಕೊನೆಗೊಳಿಸಲಿ. ಅವರು ಕೆಟ್ಟ ಹೆಸರಲಿನಲ್ಲಿ ಮನೆಗೆ ಹೋಗುವುದು ನಮಗೆ ಇಷ್ಟವಿಲ್ಲ. ಈಗಲಾದರೂ ತಮ್ಮ ಜವಾಬ್ದಾರಿ ಅರಿತು ನಮ್ಮ ಕಾಲದಲ್ಲಿ ರಚಿಸಿದ್ದ ಎಲ್ಲಾ ಸಮಿತಿಗಳನ್ನು ಪುನಃ ಕರೆದು ಅವರೊಂದಿಗೆ ಚರ್ಚಿಸಿ ಕಾಮಗಾರಿಗಳಲ್ಲಿ ಆದ ಲೋಪಗಳನ್ನು ಸರಿಪಡಿಸಬೇಕು. ಸ್ಮಾರ್ಟ್ ಸಿಟಿ ಯೋಜನೆ ಬರಮಾಡಿಕೊಂಡಿದ್ದೆವು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪು ತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗ ಳನ್ನು ಇನ್ನಾದರೂ ತಿದ್ದಿಕೊಳ್ಳಲಿ.
-ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕರು

By admin

ನಿಮ್ಮದೊಂದು ಉತ್ತರ

error: Content is protected !!