ಶಿವಮೊಗ್ಗ,
ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಕಾಂಗ್ರೆಸ್ ನಾಯಕ ಸಿದ್ಧರಾ ಮಯ್ಯ ಅವರು ಮುಸ್ಲಿಮರಿಗೆ ಒಂದು ರೀತಿಯಲ್ಲಿ ದ್ರೋಹ ಮಾಡುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ರಾಜ್ಯಸಭೆಗೆ ಒಬ್ಬರನ್ನು ಮಾತ್ರ ಕಳಿಸಬಹುದು. ಆದರೆ, ಎರಡನೇ ಅಭ್ಯರ್ಥಿ ಯನ್ನು ಮುಸ್ಲಿಮರಿಗೆ ನೀಡಿದ್ದಾರೆ. ಮುಸ್ಲಿಂ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಓಲೈಸುವ ನೆಪದಲ್ಲಿ ಮುಸ್ಲಿಮರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಒಂದು ಕಡೆ ಜೆಡಿಎಸ್ ಮುಖಂಡರು ಬಿಜೆಪಿಗೆ ಬೆಂಬಲ ನೀಡಬಹುದು. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಅತೃಪ್ತರು ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿದರೂ ಆಶ್ವರ್ಯವಿಲ್ಲ. ಹಾಗಾಗಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುತ್ತದೆ. ಕಾಂಗ್ರೆಸ್ ತನ್ನಲ್ಲಿರುವ ಉಳಿದ ಮತಗಳನ್ನು ಉಳಿಸಿಕೊಳ್ಳುತ್ತದೋ, ಜೆಡಿಎಸ್ ಗೆ ಕೊಡುತ್ತದೋ ಅದು ನಮಗೆ ಗೊತ್ತಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ, ಸೋಲುತ್ತಾರೆ ಎಂದು ಗೊತ್ತಿದ್ದೂ ಕೂಡ ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರನ್ನು ಕಣಕ್ಕಿಳಿಸಿರುವುದು ಆ ಜನಾಂಗಕ್ಕೆ ಮಾಡಿದ ಅವಮಾನ ಎಂದು ಹೇಳಿದರು.


ದೆಹಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸು ತ್ತೇವೆ ಎಂಬ ನಿಮ್ಮ ಹೇಳಿಕೆಗೆ ದೆಹಲಿಯ ಆಪ್ ರಾಜ್ಯಸಭಾ ಸದಸ್ಯ ದೂರು ಕೊಟ್ಟಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದು ಹಳೆಯ ವಿಚಾರವಾಗಿದೆ. ನಾನು ಈಗಲೂ ಸ್ಪಷ್ಟನೆ ನೀಡುತ್ತೇನೆ. ತ್ರಿವರ್ಣ ಧ್ವಜವನ್ನು ಗೌರವಿಸುತ್ತೇನೆ. ಅದು ಯಾರೇ ಅಪಮಾನ ಮಾಡಿದರೂ ಕೂಡ ಖಂಡನೀಯವಾ ದುದು. ನಾನು ಹೇಳಿದ್ದು, ಈಗಿನ ಮಾತಲ್ಲ. ಮುಂದೆ100 ವರ್ಷವೋ, ೨೦೦ ವರ್ಷವೋ ಅಥವಾ ೫೦೦ ವರ್ಷವೋ ಆದ ಮೇಲೆ ಕೇಸರಿ ಧ್ವಜ ಕೆಂಪುಕೋಟೆಯ ಮೇಲೆ ಹಾರಬಹುದು ಎಂದಷ್ಟೇ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ನ್ಯಾಯಾಲಯ ಯಾವ ತೀರ್ಮಾನ ತೆಗೆದುಕೊಳ್ಲುತ್ತದೆಯೋ ಅದಕ್ಕೆ ಬದ್ಧನಾಗಿದ್ದೇನೆ. ಅಥವಾ ದೂರು ಕೊಟ್ಟವರು ವಾಪಸ್ ತೆಗೆದುಕೊಳ್ಳುತ್ತಾರೋ ಅದೂ ನನಗೆ ಗೊತ್ತಿಲ್ಲ. ಇದು ರಾಜಕೀಯ ಪ್ರೇರಿತ ಹೊರತೂ ಬೇರೆನೂ ಅಲ್ಲ ಎಂದರು.


ಕೇಸದಿ ಧ್ವಜಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಕೂಡ ಸುಳ್ಳು ಆರೋಪ ಮಾಡಿದ್ದರು. ತ್ರಿವರ್ಣ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ. ಅವರ ಮಗ ಕೇಸರಿಧ್ವಜಗಳನ್ನು ಹಂಚಿದ್ದಾರೆ ಎಂದು ಸದನದಲ್ಲೂ ಕೂಡ ಆರೋಪಿಸಿದ್ದರು. ಧರಣಿ ನಡೆಸಿದ್ದರು. ಮುಖ್ಯಮಂತ್ರಿ ಗಳು ಸದನದಲ್ಲಿಯೇ ಸ್ಪಷ್ಟವಾಗಿ ಈಶ್ವರಪ್ಪನವರ ತಪ್ಪು ಇಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿದೆ. ಆದರೆ, ಕಾಂಗ್ರೆಸ್ ನವರು ಮತ್ತು ಆಪ್ ನವರು ಸಲ್ಲದ ವಿಚಾರವನ್ನು ಇಟ್ಟುಕೊಂಡು ಪ್ರಚಾರಕ್ಕಾಗಿ ಈ ರೀತಿಯ ರಾಜಕಾರಣ ಮಾಡುತ್ತಿ ರುವುದು ಖಂಡನೀಯ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!