ಶಿವಮೊಗ್ಗ, ಜೂ.1:
ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನವನ್ನು ನಡೆಸಿ ಪ್ರತಿ ವರ್ಷ ಪ್ರಪಂಚದಾದ್ಯಂತ ತಂಬಾಕು ಸೇವೆನೆಯಿಂದ 12 ದಶಲಕ್ಷ ಜನ ಅಕಾಲಿಕ ಮರಣ ಹೊಂದುತ್ತಿದ್ದಾರೆ. ತಂಬಾಕು ಸೇವೆನೆ ಒಂದು ವ್ಯಸನ ಅದೋಂದು ಚಟ. ನಮ್ಮ ಸಾವಿಗೆ ಹೆದ್ದಾರಿಯಾಗಿದೆ ಎಂದು ಶರಾವತಿ ದಂತ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ. ಮೇಘಶ್ಯಾಮ ಭಟ್ ರವರು ವಿಷಾದವ್ಯಕ್ತಪಡಿಸಿದರು .
ಅವರು ಇಂದು ಬೆಳಗ್ಗೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಎನ್. ಎಸ್. ಎಸ್. ಘಟಕ ೧, ೨ & ೩, ಐಕ್ಯೂಎಸಿ ವಿಭಾಗ, ಯುವ ರೆಡ್ ಕ್ರಾಸ್, ಶರಾವತಿ ದಂತ ಮಹಾವಿದ್ಯಾಲಯ ಹಾಗೂ ರಾಷ್ಟ್ರೀ ಯ ಶಿಕ್ಷಣ ಮಹಾವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ಹಾಗೂ ಉಚಿತ ದಂತ


ತಪಾಸಣಾ ಶಿಬಿರ-2022 ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ಸಮಾಜದಲ್ಲಿ ಇರುವ ಅನೇಕ ಪಿಡುಗುಗಳಲ್ಲಿ ತಂಬಾಕು ಸೇವನೆಯು ಕೂಡ ಒಂದಾಗಿದೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯವಿದ್ದರೆ ನಾವು ಏನನ್ನಾದರೂ ಸಾಧಿಸಬಹುದು. ತಂಬಾಕು ಸೇವನೆಯಿಂದ ಕಳೆಗುಂದಿದ ಮನಸ್ಥಿತಿ ನಿಸ್ತೇಜ ಬದುಕು ಎಳೆಯ ವಯಸ್ಸಿಯಲ್ಲಿಯೇ ನಾನಾರೀತಿಯ ಕಾಯಿಲೆಗಳಿಗೆ ತುತ್ತಾಗಿ ಬದುಕು ಅರಳುವ ಮೊದಲೇ ಮುದುಡಿ ಹೋಗುತ್ತಿರುವ ಉದಾಹರಣೆಗಳೇಷ್ಟೋ ನಮ್ಮ ಎದುರಿಗೆ ಇದೆ. ಆದ್ದರಿಂದ ಇಂದೇ ನಾವು ಸಂಕಲ್ಪ ಮಾಡೋಣ ತಂಬಾಕು ತ್ಯಜಿಸಿ ಸುಂದರ ಜೀವನವನ್ನು ನಿರ್ಮಾಣ ಮಾಡಿಕೊಳ್ಳೋಣ. ಎಂದು ನುಡಿದರು.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಚಿದಾನಂದ ಎನ್.ಕೆ ಪ್ರಾಂಶುಪಾಲರು, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ ಮಾತನಾಡುತ್ತಾ ಇಂದು ಯುವಕರಲ್ಲಿ ತಂಬಾಕು ಗುಟಕ ಸೇವನೆ ಹೆಚ್ಚು ತ್ತಿದೆ. ಇದರಿಂದ ಮುಕ್ತರಾಗಿ ಬದುಕಬೇಕು. ಸಮಾಜದಲ್ಲಿ ತಂಬಾಕು ಮಧ್ಯವ್ಯಸನ ಗಾಂಜಾ ಹಾಗೂ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮಗಳು ಕಲೇಜಿನಲ್ಲಿ ಹೆಚ್ಚಾಗಬೇಕು ಎಂದು ಸಾಕಷ್ಟು ಮಾಹಿತಿಗಳನ್ನು ತಿಳಿಸಿದರು.


ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘಗಳ ಸಹ ಕಾರ್ಯದರ್ಶಿ ರೋ.ವಿಜಯ್ ಕುಮಾರ ಜಿ ಮಾತನಾಡುತ್ತಾ ತಂಬಾಕಿನಂತಹ ಕೆಟ್ಟ ವಸ್ತುವಿನಲ್ಲಿ7.000 ವಿಷಕಾರಕ ವಸ್ತುಗಳು ಇವೆ. ಸಿಗರೇಟ್ ಸೇದುವವರ ಜೊತೆಗೆ ಅದರ ಹೊಗೆಯನ್ನು ಕುಡಿಯುವವರಿಗೆ ಇನ್ನೂ ಹೆಚ್ಚು ಸಮಸ್ಯೆಗಳು ಹೆಚ್ಚಾಗುತ್ತವೆ.

ಶರಾವತಿ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರಯ ವತಿಯಿಂದ ಶಿಬಿರಾರ್ಥಿಗಳಿ, ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ದಂತ ತಪಾಸಣೆ ನಡೆಸ ಲಾಯಿತು. ಹಾಗೂ ಹಲ್ಲು ಹಾಗೂ ವಸಡುಗಳ ಬಗ್ಗೆ ವಿಶೇಷ ಮಾಹಿತಿ ಹಾಗೂ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿಯನ್ನು ತಿಳಿಸಿದರು. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಪ್ರೊ.ಹೆಚ್ ಸುರೇಶರವರು ಮಾತನಾಡುತ್ತಾ ತಂಬಾಕು ಸೇವನೆಯಿಂದ ಕ್ಯಾನ್ಸರ್, ಲಕ್ವಾ, ಹೃಧಯ ಸಂಬಂಧಿ ರೋಗಗಳು, ಶ್ವಾಸಕೋಶದ ಕಾಯಿಲೆಗಳು, ಕಡಿಮೆ ತೂಕದ ಮಗುವಿನ ಜನನ ಕಣ್ನೀನ ಪೊರೆ, ವಸಡಿನ ಕಾಯಿಲೆ ಇನ್ನೂ ಹಲವಾರು ಕಾಯಿಲೆಗಳು ನಮ್ಮನ್ನು ಆವರಿಸುತ್ತದೆ.

ಆದ್ದರಿಂದ ತಾವು ತಂಬಾಕು , ದೂಮಪಾನ, ಕುಟಕಾ, ಮಧ್ಯಪಾನದಿಂದ ದೂರವಿ ರಬೇಕೆಂದು ತಿಳಿಸಿದರು.


ವೇದಿಕೆಯಲ್ಲಿ ಶರಾವತಿ ಕಾಲೇಜಿನ ವೈದ್ಯರಾದ ಡಾ.ನೇಹಾ, ಡಾ.ಸ್ನೇಹಾ ಹಾಗೂ ಎನ್ ಎಸ್ ಎಸ್ ಘಟಕದ ಪದಾಧಿಕಾರಿ ಗಳಾದ ಪ್ರೊ.ಕೆ.ಎಂ ನಾಗರಾಜು, ಜಗದೀಶ ಎಸ್, ಕಾಜೀಂ ಷರೀಫ್ ಹಾಗೂ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಂತತಪಾಸಣೆ ಮಾಡಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!