ಕಾಲ್ಪನಿಕ ಚಿತ್ರ
ಶಿವಮೊಗ್ಗ, ಜೂ.01:
ಹೆಣ್ಣುಮಕ್ಕಳೇ ಉಷಾರಾಗಿರಿ, ಎಲ್ಲೆಡೆ ಪೋಟೋ ಸೆಷನ್ ಬೇಡವೇಕೆ ಗೊತ್ತಾ? ಮದುವೆಗಿಂತ ಮುಂಚಿನ ಪೋಟೋಗಳು ಕೆಲ ವಿಕೃತ ಮನಸುಗಳಿಗೆ ಬ್ಲಾಕ್ ಮೇಲ್ ದಂಧೆಗೆಳೆಯುತ್ತೆ….!
ಇಂತಹದೊಂದು ದೂರು ಈಗ ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿದೆ.
ದೂರೇನು ಗೊತ್ತಾ…?
ಸ್ನೇಹದಲ್ಲಿ ಇದ್ದಾಗ ಬೆಳೆದ ಸಲುಗೆ ಮತ್ತು ಆಗ ತಗೆಸಿಕೊಂಡಿದ್ದ ಖಾಸಗಿ ಪೋಟೊಗಳು ಮದುವೆಯಾದ ಈ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿವೆ.
ಹಳೆಯ ಸ್ನೇಹಿತ ಬ್ಲಾಕ್ ಮೇಲರ್ ಆಗಿ ಜೀವಬೆದರಿಕೆ ಹಾಕಿರುವ ಬಗ್ಗೆ ಠಾಣೆಯಲ್ಲಿ ದೂರಾಗಿದೆ.
ಹಾಸನದ ಕೆಳವತ್ತಿ ಗ್ರಾಮದ ಗಿರೀಶ್ ಎಂಬ ಯುವಕ ಶಿವಮೊಗ್ಗದ ಯುವತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ.
ಕಳೆದ ಐದು ವರ್ಷದ ಹಿಂದೆ ಈ ಯುವಕ ಪರಿಚಯವಾಗಿದ್ದು, ಸ್ನೇಹಿತನಾಗಿಯೇ ಇದ್ದಾಗ ಈ ಯುವತಿ ಆರೇಳು ತಿಂಗಳ ಬಳ್ಳಾರಿ ಮೂಲದ ಯುವಕನನ್ನ ಮದುವೆಯಾಗಿದ್ದಾಳೆ.
ಇದನ್ನ ಅರಗಿಸಿಕೊಳ್ಳದ ಗಿರೀಶ ಯುವತಿಗೆ ಕರೆ ಮಾಡಿರುವ ನನ್ನನ್ನ ಬಿಟ್ಟು ಅವನನ್ನ ಮದುವೆಯಾಗಿದ್ದೀಯಾ?. ನೀನು ಹಾಸನಕ್ಕೆ ಬರಬೇಕು ಇಲ್ಲ ಅಂದರೆ ನನ್ನೊಂದಿಗೆ ಇರುವ ಖಾಸಗಿ ಫೊಟೊಗಳನ್ನ ನಿನ್ನ ಗಂಡ ಮತ್ತು ಅವರ ಸಂಬಂಧಿಕರಿಗೆ ಹಂಚಿಬಿಡುವುದಾಗಿ ಬೆದರಿಸಿದ್ದಾನೆ.
ಅವ್ಯಾಚ್ಯ ಶಬ್ದಗಳಿಂದ ಬೈದ ಹಾಗೂ ಜೀವಬೆದರಿಕೆ ಹಾಕಿರುವ ಗಿರೀಶ್ ವಿರುದ್ಧ ಸೂಕ್ತ ಕ್ರಮಜರುಗಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.