ಕ್ರೀಡಾ ವರದಿ
ಕ್ರಿಕೇಟ್ ಜಗತ್ತಿನ ನಕ್ಷತ್ರ ಎಂದೇ ಗುರುತಿಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಕೊರೊನಾದ ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಧೋನಿ ಎಲ್ಲರಿಗೂ ಇಷ್ಟವಾಗುವುದು ನಾಯಕನಾಗಿಯೂ ಅಲ್ಲ, ಬ್ಯಾಟ್ಸಮಾನ್ ಆಗಿಯೂ ಅಲ್ಲ ವಿಕೆಟ್ ಕೀಪರ್ ಆಗಿ ಧೋನಿ ಇಷ್ಟ. ನಯನ್ ಮೊಂಗಿಯಾ ನಿವೃತ್ತಿ ನಂತರ ಎಂ ಎಸ್ ಕೆ ಪ್ರಸಾದ್, ವಿಜಯ್ ದಹಿಯಾ, ಸಬಾರ್ ಕರೀಮ್, ಪಾರ್ಥೀವ್ ಪಾಟೀಲ್ ವಿಕೆಟ್ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ ಸ್ವತಃ ಗೋಡೆ ದ್ರಾವಿಡ್ ವಿಕೆಟ್ ಕೀಪರ್ ಮಾಡಿದರೂ ಭಾರತ ತಂಡಕ್ಕೆ ಸ್ಥಿರ ವಿಕೆಟ್ ಕೀಪರ್ ಸಿಗಲಿಲ್ಲ. ಧೋನಿ ಅಗಮನದ ನಂತರ ಇಲ್ಲಿವರೆಗೂ ಭಾರತ ತಂಡಕ್ಕೆ ಸ್ಥಿರ ವಿಕೆಟ್ ಕೀಪರ್ ಅನಿಸಿದ್ದು ಧೋನಿ ಮಾತ್ರ. ಅರ್ಧ ಸೆಕೆಂಡ್ ನಲ್ಲೂ ಸ್ಟಂಪ್ ಔಟ್ ಮಾಡಬಲ್ಲ ಚಾಣಾಕ್ಷತನ ಧೋನಿಗೆ ಮಾತ್ರ ಇದೆ. ಧೋನಿ ತಮ್ಮ ವಿಕೆಟ್ ಕೀಪಿಂಗ್ ನಿಂದ ಸಾಕಷ್ಟು ಪಂದ್ಯ ಗೆಲ್ಲಿಸಿ ಕೊಟ್ಟಿದ್ದಾರೆ ಕಳೆದ 20-20 ವಿಶ್ವಕಪ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಡೆಯ ಎಸೆತದಲ್ಲಿ ಧೋನಿ ಒಡಿ ಬಂದು ರನ್ ಔಟ್ ಮಾಡಿ ರೀತಿ ಹುಸೇನ್ ಬೋಲ್ಟ್ ಒಟಕ್ಕಿಂತ ವೇಗವಾಗಿತ್ತು ಭಾರತಕ್ಕೆ 2 ವಿಶ್ವಕಪ್ ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ಟ ಕೊಲ್ ಕ್ಯಾಪ್ಟನ್ ಧೋನಿ ಜೀವನ ಕೂಲ್ ಆಗಿಯೇ ಇರಲಿ
ಧೋನಿಗೆ ಇಚ್ಛೆ ಇದ್ದರೆ ವಿಕೆಟ್ ಕೀಪರ್ ಕೋಚಿಂಗ್ ಆಗಿಯೋ ಸೇವೆ ಸಲ್ಲಿಸಬಹುದು
ಪ್ರಸ್ತುತ ಭಾರತ ತಂಡದಲ್ಲಿ ರಿಷಭ್ ಪಂತ್, ದಿನೇಶ್ ಕಾರ್ತಿಕ್, ಲೋಕೇಶ್ ರಾಹುಲ್, ಸಂಜು ಸಾಮನ್ಸ್ ನಡುವೆ ಪೈಪೋಟಿ ಇದೆ ಯಾರು ಸ್ಥಿರವಾಗಿ ನಿಲ್ಲುತ್ತಾರೋ ಕಾದು ನೋಡಬೇಕು
ಸಂಗ್ರಹ ಬರಹ