ಭದ್ರಾವತಿ, ಆ.14:
ಲಂಚ ಸ್ವೀಕರಿಸುವ ಹೊತ್ತಿನಲ್ಲಿ ಎಸಿಬಿ ಬಲೆಗೆ ಬಿದ್ದಿರುವ ಭದ್ರಾವತಿಯ ನಗರಸಭೆ ಸಿಬ್ಬಂದಿ ಬಂದಿತನಾಗಿರುವ ಘಟನೆ ವರದಿಯಾಗಿದೆ.
ಭದ್ರಾವತಿ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಲೇಔಟ್ ನಲ್ಲಿ ಸೈಟ್ ಖರೀದಿದಾರನ ಖಾತೆ ಬದಲಾವಣೆಗೆ ನಗರಸಭೆ ಗುಮಾಸ್ತ ಕುಮಾರ್ ಎಂಬಾತ ಹಣದ ಬೇಡಿಕೆ ಇಟ್ಟಿದ್ದನು.
ಲೇ ಔಟ್ ನ ಸೈಟ್ ಮಾಲೀಕ ಸುಲ್ತಾನ್ ಎಂಬುವವರ ಬಳಿ ಗುಮಾಸ್ತ ಕುಮಾರ್ ಎಂಬಾತನು 5 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದನು.
ಈ ಹಣ ಪಡೆಯವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ ಸ್ಪೆಕ್ಟರ್ ಗಳಾದ ತಿಪ್ಪೇಸ್ವಾಮಿ, ವೀರೇಂದ್ರ ಸಿಬ್ವಂದಿಗಳಾದ ಯೋಗೀಶ್, ರಘು ಮತ್ತು ನಾಗರಾಜ್ ಮತ್ತಿತರರು ದಾಳಿ ನಡೆಯುವ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!