ಶಿವಮೊಗ್ಗ : ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆಯ ಹಳೆಯ ವಿದ್ಯಾರ್ಥಿಗಳ ಸಂಘ ಅಧಿಕೃತವಾಗಿ ನೋಂದಣಿಯಾಗಿದ್ದು, ಕಾಲೇಜಿನ ಅಭಿವೃದ್ಧಿಗಾಗಿ ಶ್ರಮಿ ಸಲಿದೆ ಎಂದು ಸಂಘದ ಗೌರವಾಧ್ಯಕ್ಷ ಹಾಗೂ ಕಾಲೇ ಜಿನ ಪ್ರಾಂಶುಪಾಲ ಬಿ.ಆರ್. ಧನಂಜಯ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲೇಜ್‌ಗೆ ನ್ಯಾಕ್ ಟೀಂ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಅಧಿಕೃತವಾಗಿ ಹಳೇ ವಿದ್ಯಾರ್ಥಿಗಳ ಸಂಘವನ್ನು ನೋಂದಣಿ ಮಾಡಲಾಗಿದೆ. ನ್ಯಾಕ್ ಕಮಿಟಿಯಿಂದ ಒಳ್ಳೆಯ ಗ್ರೇಡ್ ಸಿಗುವ ಹಿನ್ನಲೆಯಲ್ಲಿ ಕಾಲೇಜಿನ ಎಲ್ಲಾ ರೀತಿಯ ಬೆಳವಣಿಗೆಗಳನ್ನು ಕಮಿಟಿಯ ಮುಂದೆ ನೀಡಲಾಗುವುದು. ಹಳೇ ವಿದ್ಯಾರ್ಥಿಗಳ ಸಂಘ ಈಗಾ ಗಲೇ ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗ ಳನ್ನು ನಡೆಸುತ್ತ ಬಂದಿದೆ. ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅನೇಕರು ರಾಜ್ಯಾದ್ಯಂತ ಉತ್ತಮ ಹುದ್ದೆಗಳಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅವರೆಲ್ಲರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಕಾಲೇಜಿನಲ್ಲಿ ಓದಿರುವ ಹಳೇಯ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಪಡೆಯುವುದರೊಂದಿಗೆ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು. ಇದಕ್ಕಾಗಿ ಕಾಲೇಜಿನ ಪ್ರಾಂಶುಪಾಲರನ್ನು ಅಥವಾ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಸಂಘದ ಅಧ್ಯಕ್ಷ ಹೆಚ್.ಎಸ್. ಬಾಲಾಜಿ ಮಾತನಾಡಿ, ೨೦೦೬-೦೭ ರಲ್ಲಿ ಈ ಕಾಲೇಜು ಆರಂಭವಾಯಿತು. ಇಂದು ಸುಮಾರು ೨೫೦೦ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಕಾಲೇಜಿನಲ್ಲಿ ಒಳ್ಳೆಯ ವಾತವರಣ ಕಲ್ಪಿಸುವುದರ ಜೊತೆಗೆ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ಕೂಡ ಒದಗಿಸಲಾಗುವುದು ಎಂದರು.
ಸಂಘದ ಗೌರವಾಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರು ಇರುತ್ತಾರೆ. ಅಧ್ಯಕ್ಷರಾಗಿ ಹೆಚ್.ಎಸ್.ಬಾಲಾಜಿ, ಕಾರ್ಯದರ್ಶಿಯಾಗಿ ಬಿ.ಎಂ.ದಶರಥ್, ಸಹ ಕಾರ್ಯದರ್ಶಿ ಕೆ.ಆರ್.ಧನರಾಜ್, ಉಪಾಧ್ಯಕ್ಷರುಗಳಾಗಿ ಡಿ.ಎಸ್.ಸಚಿನ್, ಆರ್.ಹನುಮಂತ, ಬಿ.ಮಹೇಶ್, ಖಜಾಂಚಿಯಾಗಿ ಬಿ.ಎಸ್.ನಂದನ್, ಸದಸ್ಯರಾಗಿ ಶಿವಕುಮಾರ್ ಎ., ರವಿಕುಮಾರ್ ಜಿ. ಆಕಾಶ್, ಹೇಮಂತಕುಮಾರ್, ಅನಘ ಹೆಚ್.ಎಸ್., ಜಿ. ರೋಹಿತ್ ಅವರುಗಳು ಹಳೇ ವಿದ್ಯಾರ್ಥಿ ಸಂಘದ ಪದಾಧಿಗಳಾಗಿ ಆಯ್ಕೆಯಾಗಿದ್ದಾರೆ ಎಂದರು.


By admin

ನಿಮ್ಮದೊಂದು ಉತ್ತರ

error: Content is protected !!