ಶಿವಮೊಗ್ಗ,ಏ.27:
ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾಗಿದ್ದು, ಗಂಡನ ಸ್ನೇಹಿತನೊಂದಿಗೆ ಕಾಣೆಯಾಗಿರುವ ಅನುಮಾನವನ್ನು ಪತ್ನಿಯ ಕುಟುಂಬದವರು ವ್ಯಕ್ತ ಪಡಿಸಿದ್ದಾರೆ.

ಇದಕ್ಕೆ ಮನೆಯಲ್ಲಿದ್ದ ನಗದು, ಆಭರಣ ನಾಪತ್ತೆ ಜೊತೆ ಪತಿಯ ಗೆಳೆಯನ ನಾಪತ್ತೆಯು ಸಾಕ್ಷಿಯಾಗಿದೆ ಎನ್ನಲಾಗಿದೆ. ಭದ್ರಾವತಿಯ ಗ್ರಾಮಾಂತರ ಭಾಗದ ಹಳ್ಳಿಯೊಂದರಲ್ಲಿ ಕಳೆದ ವರುಷದ ಹಿಂದೆ 20 ವರ್ಷದ ಯುವತಿಯೊಂದಿಗೆ ಈ ಪತಿರಾಯರು ಮದುವೆಯಾಗಿದ್ದರು.

ಈ ಪತಿ ಗಾರೆ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ತಮ್ಮ ಜೊತೆ ಕೂಲಿಗೆ ಬರುತ್ತಿದ್ದ ಸ್ನೇಹಿತನೊಂದಿಗೆ ಪತ್ನಿ ಸಲುಗೆಯಿಂದ ಇರುವ ಕುರಿತು ಪತ್ನಿಗೆ ಮತ್ತು ಸ್ನೇಹಿತನಿಗೆ ಎರಡು ಮೂರು ಬಾರಿ ಎಚ್ಚರಿಕೆ ನೀಡಿದ್ದರು.
ಎಚ್ಚೆತ್ತುಕೊಳ್ಳದ ಪತ್ನಿ ಏ. 22 ರಂದು ಹೊಟ್ಟೆ ನೋವಾಗುತ್ತಿದೆ ಆಸ್ಪತ್ರೆಗೆ ಹೋಗಬೇಕು ಎಂದು ಪತಿಗೆ ಕರೆ ಮಾಡಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾಳೆ. ಆದರೆ ಕೆಲಸಕ್ಕಾಗಿ ಬೇರೆ ಗ್ರಾಮಕ್ಕೆ ತೆರಳಿದ ಕಾರಣ ದಯಾನಂದ್ ನನಗೆ ಬರಲು ಆಗ್ತಾಇಲ್ಲ ನೀನು ಹೋಗಿ ಬಾ ಎಂದಿದ್ದಾರೆ.
ಬೆಳಿಗ್ಗೆ ಆಸ್ಪತ್ರೆಗೆ ಹೋಗಿದ್ದ ಪತ್ನಿ ಸಂಜೆ 7 ಗಂಟೆಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಪತಿಗೆ ಶಾಕ್ ಆಗಿದೆ. ಬಂಧು ಬಳಗದವರಿಗೆಲ್ಲಾ ಪತ್ನಿಯ ನಾಪತ್ತೆಯ ಕುರಿತು ವಿಚಾರಿಸಿದ್ದಾರೆ,

ಎಲ್ಲೂ ಪತ್ನಿಯ ಪತ್ತೆಯ ಬಗ್ಗೆ ಕೇಳಿಬರಲಿಲ್ಲ. ಗೊತ್ತಿರುವ ಆಸ್ಪತ್ರೆಗಳಲ್ಲೂ ವಿಚಾರಿಸಿದರೂ ಪತ್ನಿ ಪತ್ತೆಯಾಗಿಲ್ಲ.
ಆದರೆ ಪತ್ನಿ ಹೋಗುವಾಗ ದಯಾನಂದ್ ಕೂಡಿಟ್ಟಿದ್ದ 30 ಸಾವಿರ ರೂ. ಎರಡು ಚೈನ್ ಸರ, ಬಂಗಾರದ ಕಿವಿ ಓಲೆಗಳೊಂದಿಗೆ ಹೋಗಿದ್ದಾಳೆ. ಇದೇವೇಳೆ ಸ್ನೇಹಿತನ ಮೊಬೈಲ್ ಸಹ ಸ್ವಿಚ್ ಆಫ್ ಬಂದಿದೆ. ಈ ಎಲ್ಲಾ‌ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪತ್ನಿಯ ನಾಪತ್ತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ಎಫ್ಐಆರ್ ದಾಖಲಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!