ಶಿವಮೊಗ್ಗ : ಜೆಡಿಎಸ್ ನ ‘ಜನತಾ ಜಲಧಾರೆ ಸಂಕಲ್ಪ ರಥಯಾತ್ರೆ’ ಏ. 22ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ತಲುಪಲಿದ್ದು, ಜಾಗೃತಿ ಸಮಾವೇಶ ಚಿಕ್ಕಕೂಡ್ಲಿ ಗ್ರಾಮದಲ್ಲಿ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ಕಾಂತರಾಜ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಜನತಾ ಜಲಧಾರೆ ಸಂಕಲ್ಪ ರಥಯಾತ್ರೆ ಜೆಡಿಎಸ್‌ನ ಕನಸಿನ ಕಾರ್ಯಕ್ರಮವಾಗಿದೆ. ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿಕೊಂಡು, ಕರ್ನಾಟಕದ ಜನತೆಗೆ ನೀಡಬೇಕೆನ್ನುವುದೇ ಇದರ ಮುಖ್ಯ ಉದ್ದೇಶವಾ ಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಸಂಕಲ್ಪಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಯಾತ್ರೆಯ ಮೂಲಕ ರಾಜ್ಯದ ಪ್ರಮುಖ ನದಿಗಳಿಂದ ೯೪ ಸ್ಥಳಗಳಲ್ಲಿ ಜಲಸಂಗ್ರಹ ಮಾಡಲಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಬರುವ ತುಂಗ ಭದ್ರ ನದಿಗಳ ಸಂಗಮ ಕ್ಷೇತ್ರ ಕೂಡಲಿಯಲ್ಲಿ ಜಲಸಂಗ್ರಹಣೆ ಮಾಡಲಾಗುವುದು ಮತ್ತು ಬೃಹತ್ ಬಹಿರಂಗ ಸಭೆಯನ್ನ ಏರ್ಪಡಿಸಲಾಗುವುದು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಆಗಮಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮ ಗಳು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಹಾಗೂ ಮಾಜಿ ಶಾಸಕರಾದ ಶಾರದಾ ಪೂರ್ಯಾ ನಾಯ್ಕ್ ನೇತೃತ್ವದಲ್ಲಿ ನಡೆಯಲಿದೆ ಎಂದರು.


ಈ ಕಾರ್ಯಕ್ರಮಕ್ಕೆ ಜೆಡಿಎಸ್ ಎಲ್ಲಾ ಪದಾಧಿ ಕಾರಿಗಳು, ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸತ್ಯನಾರಾಯಣ ರಾಜ್ (ಸತೀಶ್), ಪ್ರಮುಖ ರಾದ ಆನವೇರಿ ದಾನೇಶಪ್ಪ, ಮಡಿಕೆಚೀಲೂರು ಸತೀಶಗೌಡರು, ವೆಂಕಟೇಶ್, ಸುರೇಂದ್ರನಾಯ್ಕ್, ಕುಮಾರ್ ನಾಯ್ಕ್, ಕುಂಸಿ ಪ್ರಭಾಕರ್, ಯೋಗೀಶ್ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!