Tungataranga News, April 20, 2022 | Court News
ಬಾಲಕಿಗೆ ಲೈಂಗಿಕ ಕಿರುಕುಳ‌ನೀಡಿದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ದಂಡ ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ 9 ನೇ ತರಗತಿಯ ಬಾಲಕಿಯೊಬ್ಬಳ ಬಳಿ ಬೆಂಕಿಪೊಟ್ಟಣ ಕೇಳಲು ಹೋದಾಗ‌ ಪಕ್ಕದ ಮನೆಯ ಮಂಜಪ್ಪ ಲೈಂಗಿಕ ಕಿರುಕುಳ ನೀಡಿದ್ದನು. ಈತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಗಿನ ಮಹಿಳಾ ಠಾಣೆಯ ಪಿಎಸ್ಐ ಶಾಂತಲಾರವರು ಆರೋಪಿಯನ್ನ ಬಂಧಿಸಿ ಸಾಕ್ಷಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಯನ್ನ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಯಾನಂದ ವಿ.ಹೆಚ್.ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಮಂಜಪ್ಪನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ದಂಡ ಕಟ್ಟಲು ವಿಫಲನಾದರೆ 6 ತಿಂಗಳು ಸಾದಾ‌ಕಾರಗೃಹ ವಾಸದ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಅಭಿಯೋಜನಕರಾಗಿ ಹರಿಪ್ರಸಾದ್ ವಾದ ಮಂಡಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!