ಪತ್ರಿಕಾಗೋಷ್ಠಿಯಲ್ಲಿ ಸ್ಕೂಲ್‌ನ ವ್ಯವಸ್ಥಾಪಕ ಟ್ರಸ್ಟಿ ಕಿರಣ್ ಕುಮಾರ್ ವಿವರ

Tungataranga News , April,14, 2022 | Education News
ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಉದ್ಘಾಟನಾ ಸಮಾರಂಭ ಏ. ೧೫ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಸ್ಕೂಲ್ ನ ವ್ಯವಸ್ಥಾಪಕ ಟ್ರಸ್ಟಿ ಕಿರಣ್ ಕುಮಾರ್ ಕೆ. ಹೇಳಿದರು.


ಅವರು ತಮ್ಮ ಶಾಲೆ ಆವರಣ ದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಾ, ಹೊಳೆಹೊನ್ನೂರು ರಸ್ತೆಯಲ್ಲಿ ರುವ ಜಾವಳ್ಳಿಯ ಶಾಲಾ ಕ್ಯಾಂಪಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೂತನ ಕಟ್ಟಡ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿ ಥಿಗಳಾಗಿ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಸಂಸದರಾದ ಬಿ.ವೈ. ರಾಘ ವೇಂದ್ರ, ಜಿ.ಎಂ. ಸಿದ್ಧೇಶ್ವರ ಭಾಗವಹಿಸುವರು ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಎಸ್. ರುದ್ರೇಗೌಡ, ಮಾಡಾಳ್ ವಿರೂಪಾ ಕ್ಷಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಮುಖ್ಯಮಂತ್ರಿ ಗಳ ಜಂಟೀ ಕಾರ್ಯದರ್ಶಿ ಜಗದೀಶ್ ಜಿ. ಮಳಲಗದ್ದೆ, ಬಿಬಿಎಂಪಿ ಆಯುಕ್ತ ಕೆ.ಎ. ದಯಾನಂದ್, ಜಿಲ್ಲಾಧಿಕಾರಿ ಆರ್. ಸೆಲ್ವ ಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸುವರು ಎಂದರು
.

.


ಓಪನ್ ಮೈಂಡ್ಸ್ ಶಾಲೆ ವಿನೂತನ ವಾಗಿದ್ದು, ಮಕ್ಕಳು ಕಲಿಕೆಯ ಮೂಲಕವೇ ಪಾಠವನ್ನು ಗ್ರಹಿಸುತ್ತಾರೆ. ಅವರ ಕಲಿಕೆಯ ಕ್ಷೇತ್ರ ಹಾಗೂ ಮಾರ್ಗವನ್ನು ಮಕ್ಕಳೇ ಆಯ್ದುಕೊಳ್ಳುವ ಈ ವಿನೂತನ ಶಿಕ್ಷಣ ಸದ್ಯಕ್ಕೆ ನಮ್ಮ ಶಾಲೆಯಲ್ಲಿ ಮಾತ್ರವೇ ಇದೆ. ಇಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಒಟ್ಟಿಗೆ ಕಲಿಯುತ್ತಾರೆ. ಕಲಿಸುತ್ತಾರ. ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿರುತ್ತಾರೆ ಅಷ್ಟೇ. ಹೀಗಾಗಿ ಇದು ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಶಾಲೆಯಾಗಿದೆ ಎಂದು ತಿಳಿಸಿದರು.
ಸ್ಮರಣೆ, ಅರ್ಥಗ್ರಹಿಕೆ, ತೀರ್ಮಾನಿ ಸುವಿಕೆ, ಅನ್ವಯ, ಜ್ಞಾನವಾಗಿ ಮಾರ್ಪಡಿ ಸುವಿಕೆ ಇವೆಲ್ಲವನ್ನು ಇಲ್ಲಿ ಕಲಿಸಲಾಗುತ್ತದೆ. ಮುಖ್ಯವಾಗಿ ತಾರತಮ್ಯವಿಲ್ಲದ ಶಿಕ್ಷಣ ನೀಡ ಲಾಗುತ್ತದೆ. ೨೦೨೦ ರ ಶಿಕ್ಷಣ ನೀತಿಗಳು ಇಲ್ಲಿ ಸಾಕಾರಗೊಂಡಿವೆ. ಪ್ರತಿ ಮಗುವಿಗೆ ೩೨೦ ರೀತಿಯ ಕೌಶಲ್ಯಗಳನ್ನು ನಾವು ಇಲ್ಲಿ ಕಲಿಸುತ್ತೇವೆ. ಸ್ವತಂತ್ರವಾದ ಚಿಂತನೆ ತರ್ಕ ಶಕ್ತಿಯಿಂದಾಗಿ ಇಲ್ಲಿನ ಮಕ್ಕಳು ನಾಯಕತ್ವದ ಪಾತ್ರ ವಹಿಸುತ್ತಾರೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮೊದಲು ಸುಗಮ ಸಂಗೀತ, ಮುಖ್ಯವಾಗಿ ಸಂಗೀತ ನಾಟಕ ‘ಹಕ್ಕಿ ಹಾಡು’ ಪ್ರದರ್ಶನವಿರುತ್ತದೆ. ನಮ್ಮ ಶಾಲೆಯ ಮಕ್ಕಳು ಅಭಿನಯಿಸುವ ಈ ನಾಟಕವನ್ನು ಕೋಟಗಾನಹಳ್ಳಿ ರಾಮಯ್ಯ ರಚಿಸಿದ್ದು, ಸತೀಶ್ ತಿಪಟೂರು ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.
ದಾಖಲಾತಿ ಈಗಾಗಲೇ ಆರಂಭವಾ ಗಿದೆ. ೨ ರಿಂದ ೬ ವರ್ಷದೊಳಗಿನ ಮಕ್ಕಳು ಪ್ರೀ ಸ್ಕೂಲ್‌ಗೆ ಪ್ರವೇಶ ಪಡೆಯಬಹು ದಾಗಿದೆ. ಹಾಗೆಯೇ ೬ ರಿಂದ ೧೬ ವರ್ಷದ ಮಕ್ಕಳು ೧ ರಿಂದ ೧೦ ನೇ ತರಗತಿವರೆಗೆ ಪ್ರವೇಶ ಪಡೆಯಬಹುದಾಗಿದ್ದು, ೧೦ ನೇ ತರಗತಿಯನ್ನು ನೇರವಾಗಿ ಕಲಿಯಬಹು ದಾಗಿದೆ ಎಂದರು. ಹೆಚ್ಚಿನ ವಿವರಗಳಿಗೆ ೯೯೦೦೦ ೧೫೨೬೪ ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಶಾಲಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಡಾ. ಧನಂಜಯ ಸರ್ಜಿ, ನಿರ್ದೇಶಕ ವಿನಿತ್ ದುಬೆ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!