Site icon TUNGATARANGA

KPCCಗೆ ಮಂಜುನಾಥ್ ಭಂಡಾರಿ, ಮಧುಬಂಗಾರಪ್ಪ, ಪಿ.ಓ.ಶಿವಕುಮಾರ್ ನೇಮಕ

ಬೆಂಗಳೂರು 10: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಶಿವಮೊಗ್ಗ ಜಿಲ್ಲೆಯಿಂದ
ಐವರನ್ನು  ವಿವಿಧ ಪದಾಧಿಕಾರಿಗಳ ಹುದ್ದೆಗೆ ನೇಮಕ ಮಾಡಲಾಗಿದೆ.

ನೂತನ ಉಪಾಧ್ಯಕ್ಷರುಗಳಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ
ಹಾಗೂ ಸೊರಬದ ಮಾಜಿ ಶಾಸಕ ಮಧುಬಂಗಾರಪ್ಪನವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ
ಅಧ್ಯಕ್ಷರಾದ ಸೋನಿಯಗಾಂಧಿಯವರು ನೇಮಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಲಗೋಡ್ ರತ್ನಾಕರ್,
ನಿವೃತ್ತ ಪೋಲಿಸ್ ಅಧಿಕಾರಿ ಪಿ.ಓ.ಶಿವಕುಮಾರ್ ಹಾಗೂ ಕಾಗೋಡ್ ರಾಜನಂದಿನಿಯವರನ್ನು
ನೇಮಿಸಲಾಗಿದೆ. ಈ ಅದೇಶವನ್ನು ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣ ಗೋಪಾಲ್
ಹೊರಡಿಸಿದ್ದಾರೆ.

ಅಭಿನಂದನೆ: ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ
ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಭದ್ರಾವತಿ ಶಾಸಕರಾದ ಬಿ ಕೆ ಸಂಗಮೇಶ್, ರಾಜ್ಯ
ಕಾಂಗ್ರೆಸ್ ಮುಖಂಡರಾದ ಡಾ. ಆರ್ ಎಂ ಮಂಜುನಾಥ್ ಗೌಡ, ಸಾಗರದ ಮಾಜಿ ಶಾಸಕರಾದ ಬೇಳೂರು
ಗೋಪಾಲ ಕೃಷ್ಣ,  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾದ ರಮೇಶ್
ಇಕ್ಕೇರಿ,   ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ
ಅಧ್ಯಕ್ಷರಾದ ರಮೇಶ್ ಶಂಕರಘಟ್ಟ, ಶಿವಮೊಗ್ಗದ ಕಾಂಗ್ರೆಸ್ ಮುಖಂಡರಾದ ಜಿ ಡಿ ಮಂಜುನಾಥ್
ಅಭಿನಂದಿಸಿದ್ದಾರೆ.

Exit mobile version