Site icon TUNGATARANGA

ಕಸಕ್ಕಿಂತ ಕಡೆಯಾದ ಶಿವಮೊಗ್ಗ ಮಹಾನಗರ ಪಾಲಿಕೆ ಆದೇಶ, ರಾಜಾರೋಷವಾಗಿ ಇಲ್ಲಿ ಮಾಂಸ ಮಾರಾಟ!

ಶಿವಮೊಗ್ಗ,ಏ.10:
ಶ್ರೀ ರಾಮ, ಅಂಬೇಡ್ಕರ್ ಜಯಂತಿ ನಿಮಿತ್ತ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಯಾವುದೇ ಮಾಂಸ ಮಾರಾಟಾಡಬಾರದೆಂದು ಇಲ್ಲಿನ ಗ್ರೇಟ್ ಮಹಾ ನಗರ ಪಾಲಿಕೆ ಆದೇಶಿಸಿತ್ತು. ಈ ಆದೇಶ ನೆಪ ಮಾತ್ರದ್ದಾ? ಪಾಲಿಕೆ ಆದೇಶ ಶೋಕಿಗಾಗಿ ನೀಡಿದ್ದಾ ಅಥವಾ ಆದೇಶಕ್ಕೆ ಬೆಲೆಯೇ ಇಲ್ಲವಾ?


ಏಪ್ರಿಲ್ 10ರ ಇಂದು ಶ್ರೀರಾಮ ನವಮಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು ನಿಜವಷ್ಟೇ., ಆದರೆ ಶಿವಮೊಗ್ಗ ನಗರಪಾಲಿಕೆ ವ್ಯಾಪಿಯ ವಾರ್ಡ್‌ನಂ.1ರ ಸೋಮಿನಕೊಪ್ಪದಲ್ಲಿ ಪಾಲಿಕೆಯ ಆದೇಶ ಉಲ್ಲಂಘಿಸಿ ಮಾಂಸ‌ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ಇಂತಹ ಅದೆಷ್ಟೋ ಕಡೆ ರಾಜರೋಷವಾಗಿ ಮಾರಾಟ ನಡೆಯುತ್ತಿದೆಯೋ?

ತುಂಗಾತರಂಗ ದಿನಪತ್ರಿಕೆ ಓದುಗರೊಬ್ಬರು ಇಂದಿನ ರಾಮನವಮಿ ಹಾಗೂ ಇದೇ ವಿಚಾರವಾಗಿ ಆಯುಕ್ತರು ನೀಡಿದ್ದ ಮಾಂಸ ಮಾರಾಟ ನಿಷೇಧದ ಕುರಿತಾದ ಸುದ್ದಿ ಪ್ರಶ್ನಿಸಿ ಪಾಲಿಕೆ ಆದೇಶಕ್ಕೆ ಬೆಲೆಯೇ ಇಲ್ಲ ಎಂದಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸುವ ಎಲ್ಲಾ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದರು‌. ಈಗ ತಪ್ಪು ಯಾರು? ಏನು ಆದೇಶ?

Exit mobile version