ಶಿವಮೊಗ್ಗ,ಏ.೦೭:
ನವದೆಹಲಿ (ನೊಯಿಡಾ) ದ್ದಲ್ಲಿ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವಟೈಸಿಂಗ್ ನ ನವದೆಹಲಿ ನೊಯಿಡಾದ ವರ್ಲ್ಡ್ ಅಸೋಸಿ iಷನ್ ಸ್ಮಾಲ್ &ಮೀಡಿಯಂ ಎಂಟರ್ ಪ್ರೈಸಸ್ (ಡಬ್ಲು ಎ ಎಸ್ ಎಂ ಇ) ಆವರಣದ ಫ್ಲ್ಯಾಟ್ ನಂಬರ್ ೪ ರಲ್ಲಿ ನಡೆದ ಶಾಖಾ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್ ನಿರಾಣಿ ನಿರಾಣಿ ಅವರು ಉದ್ಘಾಟಿಸಿದರು.
ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಎಂಸಿಎ ಉತ್ತಮವಾದ ಕೆಲಸವನ್ನು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಉತ್ತಮವಾದ ಸೇವೆಯನ್ನು ನೀಡುತ್ತಿರುವ ಈ ಸಂಸ್ಥೆ ಇದಾಗಿದೆ. ನವದೆಹಲಿಯಲ್ಲಿ ಶಾಖಾ ಕಚೇರಿ ಆರಂಭಿಸುವುದರ ಮೂಲಕ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟು ಉತ್ತಮ ಕೆಲಸಗಳು ಮಾಡಿದಲ್ಲಿ ಸಂಸ್ಥೆ ಅಭಿವದ್ಧಿ ಸಾಧಿಸುತ್ತದೆಂದರು.
ಈ ನಿಟ್ಟಿನಲ್ಲಿ ಎಂಸಿಎ ಸಂಸ್ಥೆ ಈಗಾಗಲೇ ತಮ್ಮ ಕಾರ್ಯಕ್ರಮಗಳ ಮೂಲಕ ಸಾಬೀತುಪಡಿಸಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಸಂಸ್ಥೆ ಸಮಾಜದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವುದರ ಮೂಲಕ ಇನ್ನಷ್ಟು ಸಂಸ್ಥೆ ಬೆಳೆಯಲಿ ಎಂದರು.
ರಾಜ್ಯ ಸರ್ಕಾರದ ವತಿಯಿಂದ ನವೆಂಬರ್ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ೨೦೨೨ ರ ಹಮ್ಮಿಕೊಂಡಿದ್ದು, ಈ ಹೂಡಿಕೆದಾರರ ಸಮಾವೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸುವರು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಉತ್ತಮ ಸೇವೆಯ ಮೂಲಕ ಸಮಾವೇಶ ಯಶಸ್ಸಿಗೆ ಎಲ್ಲರೂ ಶ್ರಮ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಅಣ್ಣಾ ಸಾಹೇಬ್ ಜೊಲ್ಲೆ, ಸಿದ್ಧೇಶ್ವರ ಸ್ವಾಮೀಜಿ, ರಾಜ್ಯಸಭೆ ಸದಸ್ಯ ಈರಣ್ಣ ಕದಡಿ, ಹಿರಿಯ ಐ.ಎ.ಎಸ್. ಅಧಿಕಾರಿಗಳಾದ ಅಶೋಕ್ ದಳವಾಯಿ, ಸುಹಾಸ್ ಯತಿರಾಜ್, ಎಂ ಸಿ ಯು ನ ಅಧ್ಯಕ್ಷರಾದ ಮುನಿಕೃಷ್ಣ, ನಿರ್ದೇಶಕರಾದ ಹೆಚ್.ಆರ್,ತೀರ್ಥೇಶ್, ವ್ಯವಸ್ಥಾಪಕ ನಿರ್ದೇಶಕರಾದ, ಸಿದ್ಧಲಿಂಗಪ್ಪ ಬಿ ಪೂಜಾರಿ ಮತ್ತು ನಿರ್ದೇಶಕರಾದ ವೀರೇಶ ಸಂಗಳದ ಸೇರಿದಂತೆ ಇತರ ನಿರ್ದೇಶಕರುಗಳು ಮತ್ತು ಅಧಿಕಾರಿಗಳು ಪ್ರಮುಖರಿದ್ದರು.