Site icon TUNGATARANGA

ಕುಡಿದ ಅಮಲಿನಲ್ಲಿ ವೃದ್ಧನ ಮೇಲೆ ಹಲ್ಲೆ, ಬೊಮ್ಮನಕಟ್ಟೆಯ ಈ ಕರ್ಮ ಕಥೆ ಏನು?

TungaTaranga |Apri,07,2022 | Shimoga Crime News

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಾ, ರಸ್ತೆಯಲ್ಲಿ ಮಲಗಿದ್ದ ವೃದ್ಧನೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಬೊಮ್ಮನಕಟ್ಟೆಯಲ್ಲಿ ಆರು ಜನರ ವಿರುದ್ಧ ದೂರು ದಾಖಲಾಗಿದೆ.
ಮನೆಯೊಳಗೆ ಗಾಳಿ ಬರುವುದಿಲ್ಲ. ಸೆಕೆಯಾಗುತ್ತದೆ ಎಂದು ಸೊಳ್ಳೆ ಪರದೆ ಕಟ್ಟಿಕೊಂಡು ಹೊರಗಡೆ ಮಲಗಿದ್ದ ವೃದ್ಧನ ಜೊತೆ ಜಗಳ ಮಾಡಿದ ತಂಡ ಕೊಲೆ ಮಾಡಲು ಯತ್ನಿಸಿದೆ.
ಇಲ್ಲಿ ಬೊಮ್ಮನಕಟ್ಟೆ ಸಂದೀಪ ನಾಯ್ಕ, ರವಿ ಯಾನೆ ಬೆಕ್ಕು, ಶಿವು, ನಾಗ, ಕಾರ್ತಿಕ್ ಸೇರಿದಂತೆ ೬ ಜನರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಶಿವನಾಯ್ಕ್, ಎಂಬ ೬೩ ವರ್ಷದ ವೃದ್ಧ ಬೊಮ್ಮನಕಟ್ಟೆಯ ಎ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದು, ಬೇಸಿಗೆಯ ಇಂದಿನ ದಿನಗಳಲ್ಲಿ ಹೊರಗೆ ಮಲಗಿದ್ದಾರೆ ಕೆಎ ೧೭ ಎನ್ ೧೫೯೦ ಕ್ರಮ ಸಂಖ್ಯೆಯ ಓಮ್ನಿ ವಾಹನದಲ್ಲಿ ಬಂದ ಸಂದೀಪ್ ನಾಯ್ಕ್ ಜಾಗ ಬಿಡಲಿಲ್ಲವೆಂದು ಮಲಗಿದ್ದ ಶಿವಾನಾಯ್ಕ್ ಮೇಲೆ ವಾಹನ ಹತ್ತಿಸಲು ಯತ್ನಿಸಿದ್ದಾನೆ.


ವಾಹನವನ್ನ ಎರಡು ಮೂರು ಬಾರಿ ಹಿಂದೆ ಮುಂದೆ ತೆಗೆದುಕೊಂಡು ಆತನ ಮೇಲೆ ಹತ್ತಿಸಲು ಯತ್ನಿಸಿದಾಗ ಈ ರೀತಿ ಯಾಕೆ ಮಾಡುತ್ತಿದ್ದಾರೆ ಎಂದು ನೋಡಿದಾಗ ಅದೇ ಏರಿಯಾದ ಸಂದೀಪ್ ನಾಯ್ಕ್ ಎಂದು ತಿಳಿದುಬರುತ್ತದೆ. ಯಾಕೆ ಹೀಗೆ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ರಸ್ತೆ ಏನು ನಿಮ್ಮಪ್ಪನದಾ ಎಂದು ಪ್ರಶ್ನಿಸಿದ್ದಾನೆ ಅಗ ಗಲಾಟೆ ನಡೆದಿದೆ.
ಶಿವಾನಾಯ್ಕನನ್ನ ಬಜಾವ್ ಮಾಡಲು ಆತನ ಅಳಿಯ, ಮಗಳು ಬಂದರೂ ಸಹ ಕುಡಿದ ಮತ್ತಿನಲ್ಲಿ ಕಿರಾತಕ ಮನಸ್ಸು ಅವರಿಗೂ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದೆ. ಗಲಾಟೆ ಸದ್ದು ಕೇಳಿ ಪಕ್ಕದ ಮನೆಯ ಅಕ್ಬರ್ ಹಾಗೂ ಇತರರು ಬಂದು ಬಿಡಿಸಿದ್ದಾರೆ.
ಈ ವೇಳೆ ಶಿವ ಮತ್ತು ನಾಗನನ್ನ ಶಿವನಾಯ್ಕ್ ಮತ್ತು ಇತರರು ಹಿಡಿದುಕೊಂಡಿದ್ದಾರೆ. ಈ ವೇಳೆ ಕಾರ್ತಿಕ್ ಎಂಬುವನು ಓಡಿ ಬಂದು ಶಿವಾನಾಯ್ಕ್ ನನ್ನ ತಳ್ಳಿ ಇಬ್ಬರು ತಪ್ಪಿಸಿಕೊಂಡು ಹೋಗಲು ಸಹಕರಿಸಿದ್ದಾನೆ. ವಿನೋಬನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಮುಂದಾಗಿದ್ದಾರೆ.

Exit mobile version