Site icon TUNGATARANGA

ಶಿವಮೊಗ್ಗ | ಏಪ್ರಿಲ್ 10, 14 ರಂದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ, ಉಲ್ಲಂಘಿಸಿದರೆ ಕ್ರಮ

Tunga Taranga | April, 06, 2022, | SHIVAMOGGA News


ಶಿವಮೊಗ್ಗ : ಏಪ್ರಿಲ್ 10 ರಂದು ಶ್ರೀರಾಮ ನವಮಿ ಮತ್ತು ಏಪ್ರಿಲ್ 14 ರಂದು ಮಹಾವೀರ ಜಯಂತಿ ಹಾಗೂ ಡಾ|| ಅಂಬೇಡ್ಕರ್ ಜಯಂತಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು, ಮಾಂಸ ಮಾರಾಟ ಉದ್ದಿಮೆದಾರರು ಆಯಾ ದಿನಾಂಕಗಳಂದು ಮಾರಾಟ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ.


ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ

Exit mobile version