Site icon TUNGATARANGA

ಸರ್ವರ್ ಬಿಜಿ’ ಬಗೆಬಗೆಯ ‘ಎಣ್ಣೆ’ಗೆ ಕೊರತೆ : ಮದ್ಯ ಮಾರಾಟಗಾರರ ಪ್ರತಿಭಟನೆ

ಶಿವಮೊಗ್ಗ, ಏ.06:
ಪಾನೀಯ ನಿಗಮವು ಮದ್ಯ ಮಾರಾಟಗಾರರಿಗೆ ಹೊಸ ಇಂಡೆಂಟ್ ನ್ನ ಪರಿಚಯಿಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟಗಾರಿಗೆ ಮದ್ಯ ಕೊರತೆ ಉಂಟಾಗಿದೆ. ಶಿವಮೊಗ್ಗ ಮದ್ಯ ಮಾರಾಟಗಾರರು ಇಂದು ದೇವಕಾತಿಕೊಪ್ಪದಲ್ಲಿನ ಕರ್ನಾಟಕ ಪಾನೀಯ ನಿಮಗದ ಎದುರು ಪ್ರತಿಭಟಿಸಿದರು.
ಇಂಡೆಂಟ್ ಹೆಸರಿನಲ್ಲಿನ ಸರ್ವರ್ ತೊಂದರೆಯಿಂದ ಮದ್ಯ ಮಾರಾಟ ವಿಧಾನ ಬದಲಿಸಿರುವುದು ಈ ಕೊರತೆಗೆ ಕಾರಣವಾಗಿದೆ. ಇದರಿಂದ ಅಪಾರ ಸರ್ಕಾರದ ಆದಾಯ ನಷ್ಟವಾಗುತ್ತಿದೆ.
ಬಿಯರ್, ಆಫೀಸರ್ ಚಾಯ್ಸ್, ಓಲ್ಡ್ ಮಂಕ್ ಹೀಗೆ ಹಲವು ಮದ್ಯಗಳು ಮದ್ಯ ಮಾರಾಟದ‌ ಅಂಗಡಿಗಳಲ್ಲಿ ಸಿಗದೆ ಕೊರತೆ ಉಂಟಾಗಿದೆ.
ಏ. 1 ರಿಂದ ಪಾನೀಯ ನಿಗಮ ವೆಬ್ ಇಂಡೆಂಟ್ ಎಂದು ಹೊಸ ಇಂಡೆಂಟ್ ನ್ನ ಜಾರಿಗೊಳಿಸುತ್ತಿದೆ. ಈ ಮೊದಲು ಮದ್ಯದಂಗಡಿ ಮತ್ತು ಬಾರ್ ಗಳು ತಮಗೆ ಬೇಕಾದ ಬೇಡಿಕೆಯ ಮದ್ಯಗಳನ್ನ ಪಟ್ಟಿ ಮಾಡಿಕೊಂಡು ಪಾನೀಯ ನಿಗಮಕ್ಕೆ ತೆರಳಿ ಮದ್ಯ ತರಿಸಲಾಗುತ್ತಿತ್ತು.
ಏ.1 ರಿಂದ ಮಾ. 3 ರವರೆಗೆ ರಜೆ ಇರುವುದರಿಂದ ಸೋಮವಾರದಂದು ವೆಬ್ ಇಂಡೆಂಟ್ ನಲ್ಲಿ ಸರ್ವರ್ ಡೌನ್ ಆದ ಪರಿಣಾಮ ನಿರೀಕ್ಷೆ ಪ್ರಮಾಣದಲ್ಲಿ ಮದ್ಯ ಸಿಗಲಿಲ್ಲ. ಪರಿಣಾಮ ನಿನ್ನೆ ಮತ್ತು ಇಂದು ಮದ್ಯದ ಕೊರತೆ ಕಂಡು ಬಂದಿದೆ.
ಇಂದು ಮಧ್ಯ ಮಾರಾಟಗಾರರ ಸಂಘ ಜಿಲ್ಲಾ ಘಟಕ ದೇವಕಾತಿಕೊಪ್ಪದಲ್ಲಿರುವ ಪಾನೀಯ ನಿಗಮದ ಮ್ಯಾನೇಜರ್ ಗಳಿಗೆ ಮನವಿ ನೀಡಿದ್ದಾರೆ.

Exit mobile version