ಶಿವಮೊಗ್ಗ, ಆ.09:
ಶಿವಮೊಗ್ಗ ಕೋವಿಡ್ ಚೆಕ್ ಮಾಡಿಸಿಕೊಂಡ ಕೆಲವೇ ಜನರಿಗಷ್ಟೆ ನೆಗಿಟೀವ್ ಬಂದಿದ್ದು ಉಳಿದವರಿಗೆಲ್ಲಾ ಪಾಸೀಟೀವ್ ಬಂದಿದೆ.
ಇಂದು ಕೊರೊನಾ ಪರೀಕ್ಷೆ ಮಾಡಿಸಿಕೊಂಡ 449 ಜನರಲ್ಲಿ 164 ಜನರಲ್ಲಿ ನೆಗಿಟೀವ ಬಂದಿದ್ದರೆ 138 ಜನರಿಗೆ ಪಾಸಿಟೀವ್ ಬಂದಿರುವುದು ಭಯದ ವಾತಾವರಣ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ ನಾಲ್ವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 59 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 138 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ.
ರಾಜ್ಯದ ದೊರೆ ಯಡಿಯೂರಪ್ಪ ಅವರು ಕೊರೊನಾಗೆ ಹೆದರದೆ ತಮ್ಮ ಚಿಕಿತ್ಸೆ ನಡುವೆ ನಮ್ಮ ಇರುವಿಕೆಗಾಗಿ ಶ್ರಮಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಾಸಕರಿಗೆ, ಹಿರಿಯ ಅಧಿಕಾರಿಗಳಿಗೆಗೆ ಕೊರೊನಾ ಸೊಂಕು ಕಾಣಿಸಿಕೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ಕಛೇರಿಗೆ ನಿತ್ಯನಿರಂತರ ಎಂಬಂತೆ ಈ ಕೊರೊನಾ ದಾಳಿ ಇಡುತ್ತಿದೆ. ಇದು ಜಿಲ್ಲಾಡಳಿತದ ಕಛೇರಿಗೆ ದಾಳಿಯಿಟ್ಟಿದೆ. ಇದು ಜನಸಾಮಾನ್ಯರಿಗಿಂತ ಹೆಚ್ಚು ಅನ್ಯರಿಗೆ ನಮ್ಮ ವ್ಯವಸ್ಥೆಯ ಬುಡಗಳಿಗೆ ಟಾರ್ಗೇಟ್ ಮಾಡುತ್ತಿರುವುದು ಆತಂಕಕಾರಿ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 164 ನೆಗಿಟೀವ್ ಇದ್ದರೆ 138 ಪಾಸಿಟಿವ್ ಬಂದಿದೆ.
ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
ಇವತ್ತು 51 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 2847 ಸೋಂಕಿತರಲ್ಲಿ 1731 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗದಲ್ಲಿ 83, ಶಿಕಾರಿಪುರದಲ್ಲಿ 14, ಭದ್ರಾವತಿಯಲ್ಲಿ 33, ಸಾಗರದಲ್ಲಿ 02, ಸೊರಬ, ತೀರ್ಥಹಳ್ಳಿಯಲ್ಲಿ 03 ಪ್ರಕರಣಗಳು ಪತ್ತೆಯಾಗಿವೆ. ಹೊರಜಿಲ್ಲೆಯ 03 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 59 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ನಮ್ಮ ಜಾಗೃತೆ ಮಾತ್ರ ನಮ್ದಾಗಿದೆ.
- ತುಂಗಾತರಂಗ ದಿನಪತ್ರಿಕೆ