Site icon TUNGATARANGA

ಶಿವಮೊಗ್ಗ | ಕ್ಷುಲ್ಲಕ ಕಾರಣಕ್ಕೆ ಮನನೊಂದು ಅರಹತೊಳಲಿನ ಯುವಕ ಆತ್ಮಹತ್ಯೆ

TUNGA TARANGA | April, 05, 2022

ಹೊಳೆಹೊನ್ನೂರು,ಏ.5:
ಕ್ಷುಲ್ಲಕ ಕಾರಣಕ್ಕೆ ಮನನೊಂದ ಯುವಕವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ತಾ. ಅರಹತೊಳಲಿನಲ್ಲಿ ನಡೆದಿದೆ.


ಅಲ್ಲಿನ ಗಂಗಪ್ಪ ಎಂಬುವರ ಪುತ್ರ ಎಂ.ಜಿ.ನರೇಂದ್ರ (29) ಮೃತಪಟ್ಟ ಯುವಕ.
ಮೃತ ಯುವಕ ನರೇಂದ್ರ ತನ್ನ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಇದರಿಂದ ಬೇಸರಗೊಂಡು ಭತ್ತಕ್ಕೆ ಸಿಂಪಡಿಸುವ ಔಷಧ ಕುಡಿದಿದ್ದಾನೆ.
ಸ್ವಲ್ಪ ಹೊತ್ತಿನ ನಂತರ ಸ್ನೇಹಿತರಿಗೆ ಕರೆ ಮಾಡಿ ಹೊಟ್ಟೆ ಉರಿ ಕಾಣಿಸಿಕೊಂಡಿದೆ ಎಂದು ವಿಷಯ ತಿಳಿಸಿದ್ದಾನೆ.


ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತನಿಗೆ ತಾಯಿ, ಇಬ್ಬರು ಅಣ್ಣ ಇದ್ದಾರೆ.

Exit mobile version