Site icon TUNGATARANGA

ಅಕ್ಕಿ ಕೆಜಿಯೊಂದಕ್ಕೆ ಕೇವಲ 450 ರೂ…., ಹೊಟ್ಟೆಗೆ ಪರದಾಡುತ್ತಿರುವ ಬದುಕು ನೋಡಿ

ವಿಶೇಷ ಮಾಹಿತಿ ವರದಿ
ಇಲ್ಲಿ ಸಕ್ಕರೆ, ಗೋಧಿಹಿಟ್ಟಿಗಿಂತ ಅಕ್ಕೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸಕ್ಕರೆ ಹಾಗೂ ಗೋದಿಹಿಟ್ಟಿನ ಬೆಲೆ ಸುಮಾರು 140 ರ ಆಸುಪಾಸಿನಲ್ಲಿದ್ದರೆ ಅಕ್ಕಿ ಬೆಲೆ ಕೆಜಿಗೆ 450 ರ ಹತ್ತಿರ ನಿಂತಿದೆ.
ಇದೆಲ್ಲಿ ಎಂದು ಅಚ್ಚರಿಯಾಗದಿರಿ. ನಿತ್ಯ ಬಳಕೆಯ ಅಕ್ಕಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ನಮ್ಮ ಮಗ್ಗುಲ ಶ್ರೀಲಂಕದಲ್ಲಿ ಮುಗಿಲು ಮುಟ್ಟಿದೆ.


ಅಲ್ಲಿನ ಆರ್ಥಿಕ ಬಿಕ್ಕಟ್ಟು ಜನರ ತುತ್ತು ಅನ್ನಕ್ಕೂ ಕೊಕ್ಕೆಹಾಕಿ ಪರದಾಡುವಂತೆ ಮಾಡಿದೆ. ನಿರಂತರ ಬೆಲೆಯೇರಿಕೆಯಿಂದ‌ ಜನರಿಗೆ ಆಹಾರ ವಸ್ತುಗಳು ಸಿಗದಂತಾಗಿದೆ‌.
ಶ್ರೀಲಂಕಾದಲ್ಲಿ ಒಂದು ಕಪ್ ಟೀ ಬೆಲೆ 100 ರೂ. ಗೆ ತಲುಪಿದೆ. ಹಾಲಿನ ಬದಲಿಗೆ ಶ್ರೀಲಂಕಾದಲ್ಲಿ ಹಾಲಿನ ಪುಡಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಅತ್ಯಗತ್ಯ ಆಹಾರ ವಸ್ತುವಾಗಿ ಗುರುತಿಸಲ್ಪಟ್ಟಿದೆ.

ಶ್ರೀಲಂಕಾದಲ್ಲಿ ಅಗತ್ಯ ವಸ್ತುವಾದ ಹಾಲಿನ ಪುಡಿಯ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.


ಈ ಮೊದಲು 400 ಗ್ರಾಂ ಹಾಲಿನ ಪುಡಿಗೆ 250 ರೂಪಾಯಿ, 1 ಕೆಜಿ ಪ್ಯಾಕ್​ಗೆ 600 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಬೆಲೆ ಏರಿಕೆಯ ನಂತರ 400 ಗ್ರಾಂ ಪ್ಯಾಕ್ 790 ರೂಪಾಯಿಗಳಿಗೆ ಮಾರಾಟವಾಗಲಿದ್ದು, 1 ಕೆಜಿ ಪ್ಯಾಕ್ 1,945 ರೂಪಾಯಿಗಳಿಗೆ ತಲುಪಿದೆ.
ಒಂದು ಕಪ್ ಚಹಾ 100 ರೂ. ಹಾಲಿನ ಪುಡಿ (1 ಕೆಜಿ ಪ್ಯಾಕ್) 1945 ರೂ., ಕೆಜಿ ಅಕ್ಕಿ ಬೆಲೆ 448 ರೂ, ಕೆಜಿ ಸಕ್ಕರೆ 148 ರೂ., ಕೆಜಿ ಗೋಧಿಹಿಟ್ಟು 145 ರೂ., ಕೆಜಿ ಉಪ್ಪು 65 ರೂ., ಕೋಳಿಮೊಟ್ಟೆ 36 ರೂ., ಲೀಟರ್ ನೀರಿನ ಬಾಟಲ್ 70 ರೂ., ಲೀಟರ್ ಅಡುಗೆ ಎಣ್ಣೆ 900 ರೂ., ಕೆಜಿ ಆಲೂಗಡ್ಡೆ 348 ರೂ., ಕೆಜಿ ಈರುಳ್ಳಿ 340 ರೂ., ಕೆಜಿ ಬಾಳೆಹಣ್ಣು 195 ರೂ., ಲೀಟರ್ ಪೆಟ್ರೋಲ್ 303 ರೂ.ಗೆ ತಲುಪಿದೆ. ಇದು ನಿನ್ನೆಯ ಬೆಲೆ.

ಇಂದು ಈ ಬೆಲೆ ಇನ್ನೂ ಹೆಚ್ಚಳವಾಗುವ ಸಾದ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Exit mobile version