Site icon TUNGATARANGA

ಶಿವಮೊಗ್ಗ/ ಹಣದ ವ್ಯವಹಾರ: ಗೆಳೆಯನನ್ನೇ ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ,ಏ.01:
ಹಣಕಾಸಿನ ವ್ಯವಹಾರದ ಇಕ್ಕಟ್ಟು ಬಿಕ್ಕಟ್ಟಿನ ಹಲವರನ್ಮು ಸೇರಿಸಿಕೊಂಡು ಗೆಳೆಯನನ್ನೇ ಕೊಂದ ಆರೋಪಿ ಹಾಗೂ ಆತನೊಂದಿಗೆ ಸಹಕರಿಸಿದ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ಇಪ್ಪತ್ತು ಸಾವಿರ ದಂಡ ವಿಧಿಸಿದ ತೀರ್ಪನ್ನು ಮಾ. 31ರಂದು ಜಿಲ್ಲಾ ಹೆಚ್ಚುವರಿ ನ್ಯಾಯಾದೀಶರು ನೀಡಿದ್ದಾರೆ


ಘಟನೆಯ ವಿವರ ಹಾಗೂ ನ್ಯಾಯಾಲಯದ ಶಿಕ್ಷೆ ವಿವರ ಇಂತಿದೆ. ಕಳೆದ ಒಂಬತ್ತು ವರುಷದ ಹಿಂದೆ ನಡೆದ ಘಟನೆಯ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಮೃತ ವ್ಯಕ್ತಿಯ ಕುಟುಂಬ ತೃಪ್ತಿಪಟ್ಟುಕೊಂಡಿದೆ.


ರಾಘವೇಂದ್ರ, 28 ವರ್ಷ, ಗಾಜನೂರು, ಇಂದಿರಾನಗರ, ಶಿವಮೊಗ್ಗ ಮತ್ತು ದುರ್ಗಪ್ಪ, 29 ವರ್ಷ, ಗಾಜನೂರು ಇಂದಿರಾನಗರ ಶಿವಮೊಗ್ಗ ಅವರುಗಳು ಸ್ನೇಹಿತರಾಗಿದ್ದು, ಇಬ್ಬರಿಗೂ ಹಣಕಾಸಿನ ವಿಚಾರವಾಗಿ ವೈಯಕ್ತಿಕ ದ್ವೇಷವಿದ್ದು, ಈ ಹಿನ್ನೆಲೆಯಲ್ಲಿ ದಿನಾಂಕ 29/05/2013 ರಂದು ರಾತ್ರಿ ರಾಘವೇಂದ್ರ ಈತನು ಗಾಜಾನೂರಿನ ಇಂದಿರಾನಗರ ಚಾನಲ್ ಏರಿಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಅವನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ದುರ್ಗಪ್ಪನು ತನ್ನೊಂದಿಗೆ ಗಾಜನೂರಿನ ಇಂದಿರಾನಗರದ ವಾಸಿಗಳಾದ 1)ಉಮೇಶ, 30 ವರ್ಷ, 2)ಸುರೇಂದ್ರ, 30 ವರ್ಷ, 3)ಶಿವಶಂಕರ, 24 ವರ್ಷ, 4)ಲೋಕೆಶಪ್ಪ, 35 ವರ್ಷರವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು ರಾಘುವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಎಡಕುತ್ತಿಗೆಗೆ, ಕಿವಿಯ ಕೆಳಭಾಗಕ್ಕೆ ಮತ್ತು ಎರಡು ಕಾಲುಗಳಿಗೆ ಹರಿತವಾದ ಆಯುಧಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ಪರಿಣಾಮ ರಾಘವೇಂದ್ರನು ಮೃತಪಟ್ಟಿರುತ್ತಾನೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0248 / 2013 ಕಲಂ 341, 504, 120(B), 302 ಸಹಿತ 34 ಐಪಿಸಿ ಮತ್ತು 3 (2) (5) SC, ST ACT 1989 ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ರಾಮನಾಯ್ಕ್ DYSP ಶಿವಮೊಗ್ಗ ಉಪ ವಿಭಾಗರವರು ತನಿಖೆ ಕೈಗೊಂಡು ದಿನಾಂಕ:28/06/2013ರಂದು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಸರ್ಕಾರದ ಪರವಾಗಿ ಶ್ರೀಮತಿ ಪುಷ್ಪ, ಸರ್ಕಾರಿ ಅಭಿಯೋಜರವರು ವಾದ ಮಂಡಿಸಿದ್ದರು
.

ಮಾನ್ಯ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶಿವಪ್ರಸಾದ್ ರವರು ದಿನಾಂಕ 31ರ ಗುರುವಾರ ಆರೋಪಿತರಾದ 1) ದುರ್ಗ @ ದುರ್ಗಪ್ಪ, 29 ವರ್ಷ, ಗಾಜನೂರು, ಶಿವಮೊಗ್ಗ, 2)ಉಮೇಶ, 30 ವರ್ಷ, ಗಾಜನೂರು, ಶಿವಮೊಗ್ಗ, 3)ಸುರೇಂದ್ರ @ ಸುರೇಶ @ ಸೂರಿ, 30 ವರ್ಷ, ಗಾಜನೂರು, ಶಿವಮೊಗ್ಗ ಮತ್ತು 4)ಶಂಕರ @ ಶಿವಶಂಕರ, 24 ವರ್ಷ, ಗಾಜನೂರು, ಶಿವಮೊಗ್ಗ ರವರ ವಿರುದ್ಧ ಕಲಂ 302 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ಕು ಜನ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ಮತ್ತು 20,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 06 ತಿಂಗಳುಗಳ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

Exit mobile version