ಜಿಲ್ಲಾಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಗಮನಿಸಿ, ಶಾಶ್ವತ ಕಾಮಗಾರಿ ಮಾಡಿ: ಸಾಮಾಜಿಕ ಜಾಲತಾದಲ್ಲಿ ಬಾಲಕೃಷ್ಣ ಅವರ ಸಲಹೆ ಸಖತ್ ವೈರಲ್
ಶಿವಮೊಗ್ಗ, ಮಾ.30:
ಶಿವಮೊಗ್ಗ ಸ್ಮಾರ್ಟ್ ಬಸ್ಟ್ ಸ್ಟಾಪ್ ವಿನ್ಯಾಸದ ಬಗ್ಗೆ ಇಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಬಾಲಕೃಷ್ಣ ಶ್ರೀನಿವಾಸ್ ಸರ್ ಒಂದಿಷ್ಟು ಸೂಕ್ತ ಸಲಹೆ ನೀಡಿದ್ದು ಅದನ್ನು ಸ್ಮಾರ್ಟ್ ಸಿಟಿ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಗಮನಿಸಲು ಬಾಲಕೃಷ್ಣ ಅವರೊಂದಿಗೆ ತುಂಗಾತರಂಗ ದಿನಪತ್ರಿಕೆ ವಿನಂತಿಸುತ್ತದೆ.
ಅವರ ಸಲಹೆ ಕೇಳಿ:
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಶಿವಮೊಗ್ಗ, ಮಂಗಳೂರು ಸೇರಿದಂತೆ, ಆಯ್ದ ಪಟ್ಟಣಗಳಲ್ಲಿ, ಪ್ರಯಾಣಿಕರ ಸೌಲಭ್ಯ ಕ್ಕಾಗಿ ‘ಸ್ಮಾರ್ಟ್ ಬಸ್ ಶೆಲ್ಟರ್ ‘ ನಿರ್ಮಿಸುತ್ತಿದ್ದಾರೆ. ಶಿವಮೊಗ್ಗ ಪಟ್ಟಣದಲ್ಲೂ, 100 ‘ಸ್ಮಾರ್ಟ್ ಬಸ್ ಶೆಲ್ಟರ್’ ಗಳನ್ನು ನಿರ್ಮಿಸುತ್ತಿರುವುದಾಗಿ, ಪತ್ರಿಕೆಯಲ್ಲಿ ಓದಿದೆ. ಪ್ರಸ್ತಾಪಿತ ಬಸ್ ಶೆಲ್ಟರ್ ಚಿತ್ರವನ್ನೂ ಗಮನಿಸಿದೆ. ಒಂದು ವೇಳೆ, ಅದೇ ಚಿತ್ರ, ಪ್ರಸ್ತಾಯಿತ ಬಸ್ ಶೆಲ್ಟರ್ ಆಗಿದ್ದಲ್ಲಿ, ಖಂಡಿತ ಆದರ ಡಿಸೈನ್ ಅನ್ನು, ಈ ಕೆಳಗೆ ತಿಳಿಸಿದ ಕಾರಣ ಗಳಿಂದ ಮತ್ತೊಮ್ಮೆ ಪರಿಶೀಲಿಸುವುದು ಅವಶ್ಯ ಎಂಬುದು ನನ್ನ ಭಾವನೆ.
1.ಯಾವುದೇ ಸಾರ್ವಜನಿಕ ಕಟ್ಟಡ, ಸೌಕರ್ಯ, ಬಸ್ ಶೆಲ್ಟರ್ ನಿರ್ಮಿಸುವಾಗ, ಆದರ ಡಿಸೈನ್, ಲುಕ್, ಬಣ್ಣ, ಆಕಾರ, ಸುತ್ತ ಮುತ್ತಲಿನ ಪರಿಸರ (surrounding), ಕಲ್ಚರ್, ಟೇಸ್ಟ್ ಗೆ ಸ್ವಲ್ಪವಾದರೂ ಹೊಂದು ವಂತಿರ ಬೇಕು.
- ಅದರ ಒಟ್ಟಾರೆ ಅಂದ, ಲುಕ್,ಉಪಯೋಗಿಸುವವರ ಗಮನ ಸೆಳೆಯುವಂತಿರಬೇಕು. It should have soothing, pleasing effect on the user.
3.ಅದನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು, ದೀರ್ಘ ಕಾಲ ಬಾಳುವಂತೆ, ಕಡಿಮೆ ನಿರ್ವವಣೆ ಒಳಗೊಂಡಿರಬೇಕು - ಮಳೆ, ಬಿಸಿಲಿನಲ್ಲಿ, ಅಲ್ಲಿ ತಾತ್ಕಾಲಿಕ ತಂಗುವ ಪ್ರಯಾಣಿಕರಿಗೆ ರಕ್ಷಣೆ ಕೊಡುವಂತಿರಬೇಕು
- ಕಡಿಮೆ ವೆಚ್ಚದಲ್ಲಿ, ಉತ್ತಮ ಸೇವೆ ಒದಗಿಸುವಂತೆ ಇರಬೇಕು.
- ಆದರ ಒಳಗೆ ಏನೇ ಆದುನಿಕ ಸೌಲಭ್ಯ ಗಳಿದ್ದರೂ, ನೋಡಲು, ಉಪಯೋಗಿಸಲು, ಯೋಗ್ಯವಾಗಿರಬೇಕು.
In fact, it should be a ‘ master piece’ in its own way. If the image, i have seen, is the proposed ‘smart bus shelter’, it satisfies none of the above requirements.
ಅದು ಯಲ್ಲಿಯೂ ಬಸ್ ಸ್ಟಾಪ್ ಆಗಲು ಸೂಕ್ತವಲ್ಲ, ಎನ್ನುವುದು ನನ್ನ ಅಭಿಪ್ರಾಯ .
ತೀರ್ಥಹಳ್ಳಿ ರಸ್ತೆ ನಿರ್ಮಿಸುವಾಗ, ನಾನು ಆಸ್ಟ್ರೇಲಿಯಾಕ್ಕೆ ಹೋದಾಗ, ಅಲ್ಲಿನ ಒಂದು ಬಸ್ ಶೆಲ್ಟರ್ ಗಮನಿಸಿ,ತೀರ್ಥಹಳ್ಳಿ ಯಲ್ಲಿಯೂ, ಅದೇ ಮಾದರಿಯ ಶೆಲ್ಟರ್ ನಿರ್ಮಿಸುವಂತೆ, ಬೆಂಗಳೂರಿನ ಒಬ್ಬರು ಅರ್ಕಿಟೆಕ್ಟ್ ಮತ್ತು ಫಾಬ್ರಿಕೇಟರ್ ಗೆ ತಿಳಿಸಿದೆ.
ಅವರು ಬೆಂಗಳೂರಿಂದ ಮಾಡಿಕೊಂಡು, ರಸ್ತೆ ಉದ್ಘಾಟನೆಯ 5 ದಿನ ಮೊದಲು, ತೀರ್ಥಹಳ್ಳಿ ಯಲ್ಲಿ ಜೋಡಿಸಿದರು. ನಾನು ಅದನ್ನು ಪರೀಕ್ಷಿಸಿದಾಗ, ಅದು, ನನ್ನ ನಿರೀಕ್ಷೆಗೆ ಇರಲಿಲ್ಲ. ಕೂಡಲೇ, ಫ್ರೇಮ್ ಒಂದನ್ನು ಬಿಟ್ಟು, ಉಳಿದುದನ್ನು ಸಂಪೂರ್ಣ ತೆಗೆಸಿ, ಶ್ರೀ ರಾಜೇಶ್ ಶೆಟ್ಟಿ ಯವರಿಗೆ, ಕಂಟೆಂಪೋರರಿ ಮತ್ತು ಸಂಪ್ರದಾಯಿಕ ಮಿಶ್ರ ಮಾದರಿಯಲ್ಲಿ ರಚಿಸುವಂತೆ ಕೇಳಿ ಕೊಂಡಾಗ, ಮೂರು ದಿನದಲ್ಲಿ ಕೆಲಸ ಮಾಡಿದ್ದರು.
ಆದ್ದರಿಂದ ನಾನು ಸಾಮಾಜಿಕ ತಾಣದಲ್ಲಿ ನೋಡಿದ ಚಿತ್ರವೇ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯ ಹೈಟೆಕ್ ಬಸ್ ಶೆಲ್ಟರ್ ವಿನ್ಯಾಸ
ಆಗಿದ್ದರೆ, ಜಿಲ್ಲಾಧಿಕಾರಿ ಯವರು ಇದನ್ನು, ಪುನರ್ ಪರಿಶೀಲಿಸುವುದು ಖಂಡಿತಾ ಒಳ್ಳೆಯದು. ಶಿವಮೊಗ್ಗ ನಗರ ಉತ್ತಮ ಬಸ್ ಶೆಲ್ಟರ್ ಗಳನ್ನು ಹೊಂದಲಿ ಎಂದು ಆಶಿಸುತ್ತೇನೆ. (‘Design guidelines for accessible bus-stops in muncipal limits’ ಎಂಬ 27 ಪುಟಗಳ ಡಾಕ್ಯುಮೆಂಟ್ ಅನ್ನೂ ಗಮನಿಸಬಹುದು).