Site icon TUNGATARANGA

Shimoga/ ಅಕ್ರಮ ಮರಳು ಸಾಗಾಣಿಕೆ ಲಾರಿಗಳಿಂದ ಹಣ ವಸೂಲಿ, ಏಳು ಪೊಲೀಸರು ಸಸ್ಪೆಂಡ್…, ವಸೂಲಿ ಎಲ್ಲಿ ಹೇಗೆ ಗೊತ್ತಾ?

ಶಿವಮೊಗ್ಗ, ಮಾ.29:
ಪೊಲೀಸ್ ಇಲಾಖೆಯಲ್ಲಿ ಹಲವು ಮಹತ್ತರ ಹುದ್ದೆಗಳಿವೆ. ಅವು ಅಕ್ರಮ ಪತ್ತೆ ಹಚ್ಚುವ ಜೊತೆ ಹಣದ ವ್ಯವಹಾರ ಮಾಡುವ ಸಲೀಸಾದ ಹುದ್ದೆಗಳು. ಕಣ್ಣಿಗೆ ಕಾಣುವ ಹೆಲ್ಮೆಟ್ ಪರಿಶೀಲನೆಯೂ ಅದರ ಒಂದು ಸಣ್ಣ ಭಾಗವಷ್ಟೇ..!

ಪೀಠಿಕೆಗೆ ಕಾರಣ ಇತ್ತೀಚೆಗೆ ಶಿವಮೊಗ್ಗ ವಲಯದಲ್ಲಿ ಏಳು ಪೊಲೀಸ್ ಸಿಬ್ಬಂದಿಗಳು ಸಸ್ಪೆಂಡ್ ಆಗಿದ್ದಾರೆ. ಸುದ್ದಿ ಸದ್ದಾಗಿಲ್ಲ. ಅವರು ಹಗಲು ರಾತ್ರಿ ಅಕ್ರಮ ವ್ಯವಹಾರದ ವಾಹನಗಳ ತಪಾಸಣೆ ನಡೆಸುವುದಾಗಿದೆ. ಅಂದರೆ ಪೆಟ್ರೊಲಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಏಳು ಪೊಲೀಸ್ ಕಾನ್ಸ್ ಸ್ಟೇಬಲ್ಸ್ ಗಳು ಹಣ ವಸೂಲಿ ಮಾಡಿದ ವಿಚಾರ ಸಾಕ್ಷಿ ಸಹಿತ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರ ಕೈಗೆ ಸಿಕ್ಕಿದೆ.

ಯಾವುದೇ ಮುಲಾಜಿಲ್ಲದೇ ಎಸ್ಪಿ ಅವರನ್ಬು ಮನೆಗೆ ಕಳುಹಿಸಿದ್ದಾರೆ.
ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಬರುವ ಅಕ್ರಮ ಸಾಗಾಣಿಕೆಯ ಮರಳು ಲಾರಿಗಳ ತಪಾಸಣೆಯಲ್ಲಿ ಹಣ ಪಡೆದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ.
ಪೆಟ್ರೋಲಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಾದ ಸುರೇಶ್, ಸುದರ್ಶನ್, ನಾಗರಾಜ್, ಗಂಗಾಧರ್, ಲೋಕೇಶ್, ಬಸವಲಿಂಗಪ್ಪ ಹಾಗೂ ಕುಮಾರ್ ಅವರನ್ಬು ಸಸ್ಪೆಂಡ್ ಮಾಡಿದ್ದಾರೆ. ಮಾ.14 ರ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೃಹಸಚಿವರ ತವರು ಜಿಲ್ಲೆಯಲ್ಲಿ ತವರು ಕ್ಷೇತ್ರದ ಮರಳು ಅಕ್ರಮ ಸಾಗಾಣಿಕೆ ವಿರುದ್ದ ಸಚಿವ ಆರಗ ಜ್ಞಾನೇಂದ್ರ ಅವರೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

Exit mobile version