ಸ್ಥಳಕ್ಕೆ ಜಿಪಂ ಸಿಇಓ ಎಂ.ಎಲ್. ವೈಶಾಲಿ ಬೇಟಿ, ಪರಿಶೀಲನೆ, ಸೂಕ್ತ ಕ್ರಮಕ್ಕೆ ಸೂಚನೆ
ಶಿವಮೊಗ್ಗ, ಮಾ.28:
ಇಂದು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಗೊಂಡಿದ್ದು, ಸಸೂತ್ರ ಪರೀಕ್ಷೆಗೆ ಆಯಾ ಜಿಲ್ಲಾಡಳಿತಗಳು ಕ್ರಮ ಕೈಗೊಂಡಿವೆ.
ಶಿವಮೊಗ್ಗ ಜಿಲ್ಲೆಯಲ್ಲೂ ಸಸೂತ್ರವಾಗಿ ಇಂದಿನ ಪರೀಕ್ಷೆಗೆ ಮಕ್ಕಳು ಹಾಜರಾಗಿದ್ದಾರೆ.
ದುರಾದೃಷ್ಟವಶಾತ್ ಬಿ.ಹೆಚ್. ರಸ್ತೆಯ ಮೇರಿ ಇಮ್ಯಾಕ್ಯುಲೇಟ್ ಶಾಲೆಯ ಪಕ್ಕದಲ್ಲಿಯೇ ಇದ್ದ ಜೇನುಗಳು ಎದ್ದಿವೆ.
ಪರೀಕ್ಷೆಗೆ ಹಾಜರಾಗುತ್ತಿದ್ದ ಮಕ್ಕಳಿಗೆ, ಅವರ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಬೆನ್ನತ್ತಿವೆ. ಸುಮಾರು 9.20ರಿಂದ 9.30 ರ ವರೆಗೆ ಇಡೀ ಶಾಲಾ ಆವರಣದಲ್ಲಿ ಆತಂಕ ಸೃಷ್ಟಿಯಾಗಿದೆ.
ಶಾಲಾ ಕಟ್ಟಡದೊಳಗೇ ಸುಮಾರು ಏಳೆಂಟು ಜೇನು ಗೂಡುಗಳಿವೆ. ಎಂದೂ ಯಾರಿಗೂ ತೊಂದರೆ ನೀಡಿಲ್ಲ. ಶಾಲಾ ಮಕ್ಕಲಲ್ಲೇ ಇದ್ದ ಗೂಡಿಗೆ ಯಾರೂ ಕಲ್ಲು ಹೊಡೆದಿರಬೇಕೆಂದು ಹೇಳಲಾಗುತ್ತಿದೆ. ಸಿಸಿ ಕ್ಯಾಮರಾ ವೀಕ್ಷಣೆ ನಡೆಯುತ್ತಿದ್ದು, ವಿಕೃತ ಮನಸಿನವ ಪತ್ತೆಯಾಗಲಿದ್ದಾನೆ.
ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಆ ಕ್ಷಣದಲ್ಲಿ ಪರಿಸ್ಥಿತಿ ನಿಬಾಯಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಮಾಹಿತಿ ಪಡೆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಎಲ್. ವೈಶಾಲಿ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಸಿ ಇಂದು ರಾತ್ರಿ ಆತಂಕ ಸೃಷ್ಟಿಸಬಹುದಾದ ಜೇನುಗೂಡುಗಳ ತೆರವಿಗೆ ಸೂಚಿಸಿದ್ದಾರೆ.
ಯಾವುದಾದರೂ ಮಕ್ಕಳಿಗೆ ಜೇನು ಕಚ್ಚಿದ್ದರೆ ಅವರಿಗೆ ಕೂಡಲೇ ಪರಿಶೀಲಿಸಿ ಪರೀಕ್ಷೆ ಬರೆಯಲು ಅನುಕೂಲವಾಗುವಂತಹ ಚಿಕಿತ್ಸೆ ನೀಡಲು ಡಿಡಿಪಿಐಗೆ ಸೂಚಿಸಿದರು.
ಸ್ಥಳಕ್ಕೆ ಡಿಡಿಪಿಐ ರಮೇಶ್, ಬಿಇಓ ನಾಗರಾಜ್ ಹಾಗೂ ಇತರರು ಬೇಟಿ ನೀಡಿದ್ದರು.