Site icon TUNGATARANGA

ಇಂದೂ 121ಜನರಿಗೆ ಸೊಂಕು…, ಮೂರು ಸಾವು, ಶಿವಮೊಗ್ಗದಲ್ಲೇ 78!


ಶಿವಮೊಗ್ಗ, ಆ.07:
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ ಮೂವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 52 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 121 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ.
ರಾಜ್ಯದ ದೊರೆ ಯಡಿಯೂರಪ್ಪ ಅವರು ಕೊರೊನಾಗೆ ಹೆದರದೆ ಚಿಕಿತ್ಸೆ ನಡುವೆ ನಮ್ಮ ಇರುವಿಕೆಗಾಗಿ ಶ್ರಮಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಾಸಕರಿಗೆ, ಹಿರಿಯ ಅಧಿಕಾರಿಗಳಿಗೆಗೆ ಕೊರೊನಾ ಸೊಂಕು ಕಾಣಿಸಿಕೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ಕಛೇರಿಗೆ ನಿತ್ಯನಿರಂತರ ಎಂಬಂತೆ ಈ ಕೊರೊನಾ ದಾಳಿ ಇಡುತ್ತಿದೆ. ಇದು ಜನಸಾಮಾನ್ಯರಿಗಿಂತ ಹೆಚ್ಚು ಅನ್ಯರಿಗೆ ನಮ್ಮ ವ್ಯವಸ್ಥೆಯ ಬುಡಗಳಿಗೆ ಟಾರ್ಗೇಟ್ ಮಾಡುತ್ತಿರುವುದು ಆತಂಕಕಾರಿ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 583 ನೆಗಿಟೀವ್ ಇದ್ದರೆ 121ಪಾಸಿಟಿವ್ ಬಂದಿದೆ.
ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
ಇವತ್ತು 157 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 2598 ಸೋಂಕಿತರಲ್ಲಿ 1532 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 78, ಶಿಕಾರಿಪುರದಲ್ಲಿ 17, ಭದ್ರಾವತಿಯಲ್ಲಿ 10, ಸಾಗರ 05, ತೀರ್ಥಹಳ್ಳಿ 8, ಹೊಸನಗರದಲ್ಲಿ 03 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 52 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ನಾವು ನಾವಾಗಿರದಿದ್ದರೆ ಕೊರೊನಾ ಬೆದರಿಸುತ್ತೆ. ಎಚ್ಚರಿಕೆಯೊಂದೇ ನಮಗೆ ಪಾಠ
ತುಂಗಾತರಂಗ ದಿನಪತ್ರಿಕೆ

Exit mobile version