ನಿತ್ಯ ನಿರಂತರ ಎಂಬಂತೆ ಪ್ರತಿ ವರುಷ ತುಂಬಿದ ತುಂಗೆಯಲ್ಲಿ ತೇಲುವ ಮೂಲಕ ಜನಪರ, ಸಾಮಾಜಿಕ ಕಳಕಳಿಯ ಅಹವಾಲನ್ನಿಡುವ ಸಾಹಸಿಗರ ತಂಡವಿಂದಿ ಇಂದು ತುಂಬಿದ ತುಂಗೆಯಲಿ ಪಯಣಿಸಿತು.
ಈ ಬಾರಿ ಸಾಮಾಜಿಕವಾಗಿ ವಿಷಯವಾಗಿ ರಾಂಪುರ ದನಗಳ ಜಾತ್ರೆ, ಮತ್ತು ವಿಪತ್ತಿನ ಸಮಯದಲ್ಲಿ ರಕ್ಷಣಾ ದೃಷ್ಟಿಯಿಂದ ತರಬೇತಿಗಾಗಿ ಈ ಪಯಣ ಹಮ್ಮಿಕೊಳ್ಳಲಾಗಿದೆ.
ಭೋರ್ಗರೆಯುತ್ತಿರುವ ತುಂಗೆಯಂಗಳದ ನೀರಿನಲ್ಲಿ 50 ಕಿಮೀ ಬೋಟಿಂಗ್ ನಡೆಸಿದ ಸಾಹಸಿಗರಿಗೆ ಸಿಹೊಮೊಗೆ ಜೈಕಾರ ಹಾಕಿ ಶುಭಕೋರಿತು.
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ನಗರದ ಕೆಲವು ಸಾಹಸಿಗರು 50 ಕಿಮೀ ದೂರ ಬೋಟಿಂಗ್ ನಡೆಸಿದ್ದಾರೆ.
ಸಾಹಸಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್’ನ ರಾಷ್ಟ್ರೀಯ ಸದಸ್ಯ ವಿಜೇಂದ್ರ ಮತ್ತು ತಂಡದಿಂದ ಸಾಹಸ ಯಾತ್ರೆ ನಡೆದಿದ್ದು, ಶಿವಮೊಗ್ಗದ ಹೊಸ ಸೇತುವೆಯಿಂದ ಸುಮಾರು 50 ಕಿಮೀ ಕಯಾಕ್ ಬೋಟ್’ನಲ್ಲಿ ಸಾಹಸ ಪ್ರಯಾಣ ನಡೆಸಿದ್ದಾರೆ.
ಶಿವಮೊಗ್ಗದಿಂದ ಹೊನ್ನಾಳಿ ತಾಲೂಕಿನ ರಾಂಪುರದವರೆಗೆ ಮೂರು ಬೋಟ್’ನಲ್ಲಿ 5 ಜನ ಸಾಹಸಿಗರು ಪ್ರಯಾಣ ಮಾಡಿದ್ದು, ಈ ತಂಡ ಪ್ರತಿವರ್ಷ ಇಂತಹ ಸಾಹಸ ಮಾಡುತ್ತದೆ.
ಕಳೆದ 15 ವರ್ಷಗಳಿಂದ ಸ್ಥಗಿತಗೊಂಡಿರುವ ಶ್ರೀರಾಂಪುರದ ಇತಿಹಾಸ ಪ್ರಸಿದ್ಧ ದನಗಳ ಜಾತ್ರೆ ನಿಂತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಈ ತಂಡ ಸಾಹಸ ಪಯಣ ನಡೆಸಿದೆ.
ಅ.ನಾ.ವಿಜಯೇಂದ್ರ ರಾವ್, ಶ್ರೀನಾಥ್ ನಗರಗದ್ದೆ, ಸಾಸ್ವೇಹಳ್ಳಿ ಸತೀಶ್, ಹರೀಷ್ ಪಟೇಲ್, ಅ.ನಾ.ಶ್ರೀಧರ ಈ ಸಾಹಸ ನಡೆಸಿದ್ದು, ನಿರ್ವಹಣ ತಂಡದಲ್ಲಿ ದಿಲೀಪ್ ನಾಡಿಗ್ ಮತ್ತು ಪವನ್ ಸಿ.ಎಚ್. ಕಾರಿನಲ್ಲಿ ತೆರಳಿದರು.
ಸಾಹಸಕ್ಕೆ.. ಸಾಹಸಿಗರಿಗೆ ಸದಾ ಜೈಕಾರ.