Site icon TUNGATARANGA

ಕೃಷಿಯಲ್ಲಿ ಪ್ಲಾಸ್ಪೆಟ್, ರಾಸಾಯನಿಕ ಬಳಕೆ ಕುರಿತು ಸರ್ಕಾರದ ಗಮನಸೆಳೆದ ಶಾಸಕ ರುದ್ರೇಗೌಡರು

ಬೆಂಗಳೂರು:
ಕೃಷಿಯಲ್ಲಿ ವ್ಯಾಪಕವಾಗಿ ಗ್ಲೈಕೊ ಪಾಸ್ಪೆಟ್, ರಾಸಾಯನಿಕ ಬಳಕೆಯನ್ನು ತಡೆಯುವಲ್ಲಿ ಕೃಷಿ ಇಲಾಖೆ ಸಂಪೂರ್ಣ ಸೋತಿದೆ ಎಂಬ ಮಹತ್ತರ ವಿಚಾರವನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶಿವಮೊಗ್ಗ ವಿಧಾನಪರಿಷತ್ ಶಾಸಕ ರುದ್ರೇಗೌಡರು ಯಶಸ್ವಿಯಾಗಿದ್ದಾರೆ.
ಅದರ ಕಾರ್ಯವೈಖರಿಯ ಬಗ್ಗೆ ಇಂದಿನ ಅಧಿವೇಶನದ ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ ಶಾಸಕ ಎಸ್ ರುದ್ರೇಗೌಡ ಅವರು ಮಲೆನಾಡು ಪ್ರದೇಶದ ಹಲವು ಜಿಲ್ಲೆಗಳಲ್ಲಿ ಇಂದು ಗ್ಲೈಕೊ ಪಾಸ್ಪೇಟ್ ಎಂಬ ಕಳೆನಾಶಕ ಬಳಕೆಯನ್ನು, ಭಾರಿ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ. ಮನುಷ್ಯ, ಜಾನುವಾರುಗಳ ಮತ್ತು ಪ್ರಕೃತಿಯ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದಿದ್ದಾರೆ.


ಇದರ ಬಗ್ಗೆ ಕೃಷಿ ಇಲಾಖೆ ಗಮನ ಹರಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ ಎಂದು ಅವರು ಅಧಿವೇಶನದ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನವನ್ನು ಹರಿಸಿದ್ದಾರೆ.
ಈ ಸಂದರ್ಭದಲ್ಲಿ ಇದರ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ ಇವರು ಕೇರಳದಲ್ಲಿ 2019 ರಲ್ಲಿ ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಕೃಷಿ ಇಲಾಖೆ ಇದನ್ನ ಬಗ್ಗೆ ಗಮನಹರಿಸದೆ, ಲಂಗು ಲಗಾಮು ಇಲ್ಲದ ಧೋರಣೆಯನ್ನು ಅನುಸರಿಸುತ್ತಿದೆ. ಹೀಗಾಗಿ ಕೇರಳ ಶುಂಠಿ ಬೆಳೆಗಾರರು ವ್ಯಾಪಕವಾಗಿ ಈ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಒಮ್ಮೆ ಒಂದು ಕಡೆ ಜಮೀನಿನಲ್ಲಿ ಶುಂಠಿ ಬೆಳೆದ ಮೇಲೆ ಬಳಿಕ ಅವರು ಮತ್ತೊಂದು ಕಡೆ ಬೆಳೆಯುತ್ತಾರೆ. ಕೇರಳದ ಶುಂಠಿ ಬೆಳೆಗಾರರ ಸಂಘದ ಅಧಿಕೃತ ಮಾಹಿತಿಯ ಪ್ರಕಾರ 2020 – 21 ರ ಸಾಲಿನಲ್ಲಿ ಕೇರಳದ ಮಲೆನಾಡು, ಕಣ್ಣೂರು ಪಾಲಕ್ಕಾಡ್ ಮತ್ತು ಇತರೆ ಜಿಲ್ಲೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಗಳಲ್ಲಿ ಶುಂಠಿ ಕೃಷಿ ನಡೆಸಿದ್ದರು. ಕೇರಳದ ರೈತರು ಪ್ರತಿ ಎಕರೆ ಭೂಮಿಯನ್ನು 3.ಲಕ್ಷದಿಂದ 7ಲಕ್ಷ ದವರೆಗೆ ಗುತ್ತಿಗೆ ಪಡೆದು ಶುಂಠಿ ಬೆಳೆಯುತ್ತಾರೆ. ಒಂದು ಅಂದಾಜಿನ ಪ್ರಕಾರ 10 ಎಕರೆ ಭೂಮಿಯಲ್ಲಿ 60 ಲಕ್ಷದಿಂದ 70 ಲಕ್ಷ ಬಂಡವಾಳ ತೊಡಗಿಸುತ್ತಾರೆ. ಇವರು ಕಳೆ ನಾಶಕ್ಕಾಗಿ ಗ್ಲೈಕೊ ಪಾಸ್ಪೇಟ್ ಯಥೇಚ್ಛವಾಗಿ ಬಳಕೆ ಮಾಡುತ್ತಾರೆ ಎಂದು ಹೇಳಿದರು.
ಶುಂಠಿಗೆ ಕೊಳೆರೋಗ ರೋಗ ಕಾಣಿಸಿಕೊಂಡರೆ ವಿವಿಧ ರೀತಿಯ ರಾಸಾಯನಿಕಗಳನ್ನು ಸಿಂಪಡಣೆ ಮಾಡುತ್ತಾರೆ ಇದರಿಂದ, ಮಾನವ ಮತ್ತು ಜಾನುವಾರುಗಳಿಗೂ,ಪ್ರಾಣಿ ಪಕ್ಷಿಗಳಿಗೂ ಹಾನಿಕರ. ಈ ರಾಸಾಯನಿಕ ವಸ್ತು ಬಳಕೆಯಿಂದ ಚರ್ಮ,ಕಣ್ಣುಗಳ ಮೇಲೆ ಹಾನಿಯಾಗುವುದಲ್ಲದೆ ಉಸಿರಾಟಕ್ಕೂ ತೊಂದರೆಯಾಗುತ್ತದೆ. ಮತ್ತು ಕ್ಯಾನ್ಸರ್ ನಂತಹ ರೋಗ ಬರುವ ಸಂಭವ ಇರುತ್ತದೆ. ಯಾವುದೇ ಸಸ್ಯಗಳ ಮೇಲೆ ಇದ್ದ ಈ ರಾಸಾಯನಿಕ ಮೈಗೆ ಸೋಕಿದರೂ ಸಾಕು ಮಯೂರಿ ಕಾಣಿಸಿಕೊಳ್ಳುತ್ತದೆ. ಇದರ ಅಂಶ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಹೋದರೆ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ವಾದವೂ ಇದೆ ಎಂದಿದ್ದಾರೆ.


ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆ ನಾಶಕ ಸಿಂಪಡಣೆ ಇಂದ ಅತ್ಯಂತ ಅಪಾಯಕಾರಿಯಾಗಿದೆ. ರಾಸಾಯನಿಕವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುವುದರಿಂದ ಅಮೂಲ್ಯ ಜೀವ ವೈವಿಧ್ಯಗಳ ಭಂಡಾರ ನಾಶವಾಗುತ್ತದೆ. ಭೂಮಿಯ ಒಡಲು ಮತ್ತು ಅಂತರ್ಜಲ ವಿಷಮಯವಾಗುತ್ತದೆ. ಜೊತೆಗೆ ಭೂಮಿ ಬರಡಾಗುತ್ತದೆ ನೆರೆಯ ಕೇರಳದ ಕೃಷಿಕರು ಕರ್ನಾಟಕ ದಲ್ಲಿ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದು.ಅಪಾರ ಪ್ರಮಾಣದಲ್ಲಿ ಶುಂಠಿ ಬೆಳೆಯುತ್ತಿರುವ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು. ದಕ್ಷಿಣ ಕನ್ನಡ. ಉಡುಪಿ. ಉತ್ತರ ಕನ್ನಡ. ಕೊಡಗು. ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ರಾಸಾಯನಿಕವನ್ನು ಭಾರಿ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಈ ಸಮಸ್ಯೆ ತಲೆದೋರುತ್ತಿದೆ. ಆದರೆ ಇದರ ಬಗ್ಗೆ ಗಮನ ಹರಿಸದೆ ಕೃಷಿ ಇಲಾಖೆ ಕೈಕಟ್ಟಿ ಕೂತಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಶಾಸಕ ಎಸ್ ರುದ್ರೇಗೌಡರು ಸರ್ಕಾರದ ಗಮನ ಸೆಳೆದರು.

Exit mobile version