Site icon TUNGATARANGA

ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಇನ್ಸ್ ಸ್ಪೆಕ್ಟರ್ ಗುರುರಾಜ್ ಸಸ್ಪೆಂಡ್, ಕಂಡೀಷನ್ ಗಳೇನು…?!

ಶಿವಮೊಗ್ಗ, ಮಾ.21:
ವಕೀಲರ ಮೇಲೆ ಅತೀವ ದುರ್ನಢತೆ ತೋರಿದ ಶಿಕಾರಿಪುರ ಸರ್ಕಲ್ ಇನ್ಸ್‌ಪೆಕ್ಟರ್ ಗುರುರಾಜ್ ಎಸ್.ಮೈಲಾರ್ ಅವರನ್ನು ಅಮಾ ನತ್ತುಗೊಳಿಸಿ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ಡಾ.ಕೆ.ತ್ಯಾಗರಾಜ್ ಆದೇಶ ಹೊರಡಿಸಿದ್ದಾರೆ.


ಕಳೆದ ಮಾ.13ರಂದು ಶಿಕಾರಿಪುರ ತಾಲ್ಲೂಕು ತೋಗರ್ಸಿ ಗ್ರಾಮದ ಶ್ರೀಮಲ್ಲಿ ಕಾರ್ಜುನ ಸ್ವಾಮಿಯ ರಥೋತ್ಸವ ಸಮಯದಲ್ಲಿ ಆಗಮಿಸಿದ್ದ ಹೋಳ್‌ಪೇಟೆ ಹಂಸಬಾವಿ ಗ್ರಾಮದ ವಕೀಲ ಜಯದೇವಪ್ಪ ಎಂಬುವವರನ್ನು ಸರತಿ ಸಾಲಿನಲ್ಲಿದ್ದಾಗ ಜೋರುಧ್ವನಿಯಲ್ಲಿ ಇಲಾಖೆಯ ಬಂದೊಬಸ್ತ್‌ನಲ್ಲಿದ್ದ ಇನ್ಸ್‌ಪೆಕ್ಟರ್ ಗುರುರಾಜ್ ವಾಗ್ವಾದಕ್ಕಿಳಿದಿದ್ದರು. ಕಾನೂನು ಹಾಗೂ ಸುಭದ್ರತೆ ನೋಡಿಕೊಳ್ಳಬೇಕಾದ ಈ ಅಧಿಕಾರಿ ವಕೀಲರನ್ನು ಹಾಗೂ ಇತರರನ್ನು ಶಾಂತಿಯುತವಾಗಿ ದೇವರ ದರ್ಶನ ಮಾಡಲು ಬಿಡದೇ ಅನುಚಿತವಾಗಿ ವರ್ತಿಸಿ ದ್ದಾರೆ. ಮತ್ತು ವಕೀಲರ ಮೇಲೆ ಹಲ್ಲೆ ಮಾಡಿದ್ದರು.


ಈ ಹಿನ್ನೆಲೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಸಿಪಿಐ ಗುರುರಾಜ್, ಬೇಜವಾಬ್ದಾರಿ ತನ ಮತ್ತು ಕರ್ತವ್ಯದಲ್ಲಿ ಘೋರ ನಿರ್ಲಕ್ಷ್ಯತನ ತೋರಿದಲ್ಲದೇ. ಸಾರ್ವಜನಿಕವಾಗಿ ಇಲಾಖೆಯ ಘನತೆಗೆ ಮುಜುಗರ ಉಂಟಾಗುವಂತೆ ವರ್ತಿಸಿರುವುದನ್ನು ಅಲ್ಲಿನ ಸಿಸಿ ಕ್ಯಾಮೆರಾಗಳ ಮೂಲಕ ವೀಕ್ಷಿಸಿದ ಜಿಲ್ಲಾ ರಕ್ಷಣಾ ಧಿಕಾರಿ ಲಕ್ಷ್ಮೀ ಪ್ರಸಾದ್ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.
ಈ ವರದಿಯ ಆಧಾರದಲ್ಲಿ ಐಜಿಪಿ ಅವರು ಗುರು

ರಾಜ್ ಅವರನ್ನು ಸೇವೆಯಿಂ ಅಮಾ ನತ್ತುಗೊಳಿಸಿದ್ದಾರೆ. ಅಮಾನತ್ತಿನ ಆರು ತಿಂಗಳ ಅವಧಿಯಲ್ಲಿ ನಿಯಮಾನುಸಾರ ಅರ್ಧ ತಿಂಗಳ ವೇತನ ಪಡೆಯಬಹುದಾಗಿದ್ದು, ಈ ಅವಧಿಯಲ್ಲಿ ಬೇರೆ ಯಾವುದೇ ಸ್ವತಂತ್ರ ಉದ್ಯೋಗ ಮಾಡುವಂತಿಲ್ಲ. ಪ್ರತಿ ತಿಂಗಳು ಇದರ ಪ್ರಮಾಣ ಪತ್ರ ನೀಡಬೇಕು. ಕೇಂದ್ರ ಸ್ಥಾನ ಬಿಟ್ಟು ಬೇರೆಕಡೆ ಹೋಗುವುದಾದರೆ ಯಾರ ಅಧೀನದಲ್ಲಿರುವಿರೋ ಅವರಿಗೆ ಮತ್ತು ವಿಚಾರಣಾಧಿಕಾರಿಗಳಿಗೆ ತಿಳಿಸಿ ಅನುಮತಿ ಪಡೆದು ಹೋಗಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

Exit mobile version