Site icon TUNGATARANGA

ನಾಳೆ ತುಂಬಿದ ತುಂಗೆಯಲಿ ತೇಲುವ ಸಾಹಸದಲ್ಲಿ ಅನಾವಿ ತಂಡ

ಮಳೆಗಾಲದಲ್ಲಿ ಅದೂ ಈ ಶಿವಮೊಗ್ಗದಂಗಳದಲ್ಲಿ ಬಾರೀ ಮಳೆಯ ನಡುವೆ ತುಂಬಿದ ತುಂಗೆಯಲ್ಲಿ ಸಾಹಸ ತೋರುವ ಸಾಹಸಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ನ ರಾಷ್ಟ್ರೀಯ ಸದಸ್ಯ ಅ. ನಾ.ವಿ. ತಂಡ ಈಗ ಮತ್ತೊಮ್ಮೆ ಈ ಬಾರಿ ತುಂಗೆಯಲಿ ತೇಲಲಿದೆ.


ಪ್ರತಿ ವರ್ಷ ಹೊಳೆ ತುಂಬಿದಾಗ ರಕ್ಷಣಾ ದೃಷ್ಟಿಯಿಂದ ತರಬೇತಿ, ಅವಲೋಕನ ಹಾಗೂ ಸಾಮಾಜಿಕವಾಗಿ ಒಂದು ವಿಷಯವನ್ನು ತೆಗೆದುಕೊಂಡು ತುಂಗಾ ನದಿಯಲ್ಲಿ ಕಯಾಕಿಂಗ್ (ಎರಡು ಜನ ಕೂಡುವ ದೋಣಿಯಲ್ಲಿ) ಶಿವಮೊಗ್ಗದ ಹೊಸ ಸೇತುವೆಯಿಂದ ೪೦-೫೦ ಕಿ.ಮಿ. ಪ್ರಯಾಣಿಸುತ್ತಿದ್ದ ಈ ಅ. ನಾ. ವಿಜಯೇಂದ್ರರಾವ್ ನೇತೃತ್ವದ ತಂಡ ಈ ಬಾರಿ ಸುಮಾರು 5೦ ಕಿ.ಮಿ.ರಾಂಪುರದವರೆಗೆ ಸಾಹಸ ಮೆರೆಯಲಿದೆ.


ನಾಳಿನ ಆಗಸ್ಟ್ 7ರ ಶುಕ್ರವಾರ ಬೆಳಿಗ್ಗೆ ಸರಿಯಾಗಿ 7 ಗಂಟೆಗೆ ಹೊರಟು ಮದ್ಯಾಹ್ನ ಸುಮಾರು 2 ರಿಂದ 3 ಗಂಟೆಯ ಒಳಗೆ ರಾಂಪುರ ತಲುಪಲಿದೆ.
ಈ ಬಾರಿ ಹೊರಡಲಿರುವ ಸಾಹಸಿಗಳು:- ಅ.ನಾ.ವಿಜಯೇಂದ್ರ ರಾವ್, ಶ್ರೀನಾಥ್ ನಗರಗದ್ದೆ, ಸಾಸ್ವೇಹಳ್ಳಿ ಸತೀಶ್, ಹರೀಷ್ ಪಟೇಲ್, ಅ.ನಾ.ಶ್ರೀಧರ ಸೇರಿ ಒಟ್ಟು ೫ ಜನ,
ನಿರ್ವಹಣ ತಂಡದಲ್ಲಿ ದಿಲೀಪ್ ನಾಡಿಗ್ ಮತ್ತು ಪವನ್ ಸಿ.ಹೆಚ್. ಕಾರಿನಲ್ಲಿ ಆಗಮಿಸಲಿದ್ದಾರೆ.
ನಾಳೆ ಬೆಳಿಗ್ಗೆ 7.೦೦ ಕ್ಕೆ ಹೊಸ ಸೇತುವೆಯಿಂದ ಕೋಟೆ ರಸ್ತೆಯಲ್ಲಿರುವ ಮಂಟಪದ ಬಳಿಯವರೆಗೆ ಕಯಾಕ್ ನಲ್ಲಿ ಕೋಟೆ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ರವರು ಅಗಮಿಸಿ ಬೀಳ್ಕೊಡಿಗೆ ಮಾಡಿಕೊಡಲಿದ್ದಾರೆ. ಸಾಹಸಿಗಳಿಗೆ ಸದಾ ಶುಭವಾಗಲಿ💐💐
ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ.

Exit mobile version