Site icon TUNGATARANGA

ಹೊಸನಗರದ 9 ದಿನದ ಮಾರಿಜಾತ್ರೆ ಶುಭಾರಂಭಗೊಂಡಿದ್ದು ಹೇಗಿತ್ತು…!

ಹೊಸನಗರ,ಮಾ.15:
ಹೊಸನಗರ ತಾಲ್ಲೂಕಿಗೆ ಪ್ರಸಿದ್ಧಿ ಪಡೆದಿರುವ ಮಾರಿಕಾಂಬಾ ಜಾತ್ರೆಯು ಮಾರ್ಚ್ 15ರ ಇಂದಿನ ಮಂಗಳವಾರದಿಂದ ಪ್ರಾರಂಭಗೊಂಡಿದೆ.
ಬೆಳಿಗ್ಗೆ ಹೊಸನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ಮಾರಿಕಾಂಬೆ ಮೂರ್ತಿಗೆ ಅಲಂಕರಗೊಳಿಸಿ ಪೂಜೆ ಸಲ್ಲಿಸಿ ನಂತರ ಮಾರಿಕಾಂಬೆಯ ತಾಯಿ ಮನೆಯೆಂದೆ ಪ್ರಸಿದ್ಧಿ ಪಡೆದಿರುವ ದುರ್ಗಾಂಭಾ ದೇವಸ್ಥಾನದಲ್ಲಿ ಮಾರಿಕಾಂಬೆ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.


ಹೊಸನಗರದ ನವಚಂಡಿಯಾಗ ಸಮಿತಿಯ ವತಿಯಿಂದ ಸುಮಾರು 5 ಸಾವಿರ ಭಕ್ತರಿಗೆ ಉಚಿತ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಎರ್ಪಡಿಸಲಾಗಿದ್ದು, ಇಂದು ಮದ್ಯ ರಾತ್ರಿ ಸುಮಾರು 12 ಗಂಟೆಗೆ ಹೊಸನಗರ ಮಾರಿಗುಡ್ಡದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ 8 ದಿನಗಳ ಕಾಲ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿದೆ.


ಮಾರ್ಚ್ 12ರ ಬುಧವಾರ ರಾತ್ರಿ ಮಾರಿಕಾಂಬಾ ಮೂರ್ತಿಯನ್ನು ವಿಸರ್ಜಿಸಲಾಗುವುದು.
ಹೊಸನಗರದ ಮಾರಿ ಜಾತ್ರೆಯ ಪ್ರಯುಕ್ತ ಪೀಜೆಯ ಜೊತೆಗೆ ರಾತ್ರಿ 8 ಗಂಟೆಯಿಂದ ಮನರಂಜನಾ ಕಾರ್ಯಕ್ರಮಗಳಾದ ಆರ್ಕೇಸ್ಟ್ರಾ, ನಗೆ ನಾಟಕಗಳನ್ನು ಎರ್ಪಡಿಸಲಾಗಿದೆ.
ಒಟ್ಟಾರೆ 9 ದಿನಗಳ ಜಾತ್ರೆ ಅದ್ದೂರಿಯಾಗಿ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಜಾತ್ರಾ ಕಮಿಟಿ ಅಧ್ಯಕ್ಷರು, ಸದಸ್ಯರುಗಳು ವಿನಂತಿಸಿದ್ದಾರೆ.

Exit mobile version