ಶಿವಮೊಗ್ಗ, ಆ.6:
ದಾಖಲೆ ರಹಿತವಾಗಿ ಲಕ್ಷಗಟ್ಟಲೇ ಹಣ ಸಾಗಿಸುತ್ತಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾವುದೆ ದಾಖಲೆಗಳಲ್ಲಿದೆ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 38,00,000/- ರೂ (ಮುವತ್ತೆಂಟು ಲಕ್ಷ) ನಗದು ಹಣ ಹಾಗೂ ಒಂದು ಕಾರು ಅಮಾನತ್ತು ಪಡಿಸಿಕೊಂಡು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾಗಾಂದಿ ಕಾಲೇಜಿನ ಹತ್ತಿರ ಆರೋಪಿತನು ಯಾವುದೆ ದಾಖಲೆಗಳಲ್ಲಿದೆ ಅಕ್ರಮವಾಗಿ ಹಣವನ್ನು ಕಾರ್ ನಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಾಗರ ಡಿಎಸ್ಪಿ ವಿನಾಯಕ್ ಶೆಟಗೇರಿರವರ ಮಾರ್ಗದರ್ಶನದಲ್ಲಿ, ಅಶೋಕ್ ಕುಮಾರ್. PI ಸಾಗರ ಟೌನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಯಾವುದೆ ದಾಖಲೆಗಳಲ್ಲಿದೆ ಅಕ್ರಮವಾಗಿ ಹಣ ಸಾಗಾಣಿಕೆ ಮಡುತ್ತಿದ್ದ ಆರೋಪಿ ಸಯ್ಯದ್ ಆಸಿಫ್ 42 ವರ್ಷ ವಾಸ ಎಸ್.ಎನ್. ನಗರ ಸಾಗರ ಟೌನ್ ನಿವಾಸಿಯನ್ನು ಬಂಧಿಸಿ, ಆರೋಪಿತನಿಂದ ರೂ 38,00,000/- (ರೂಪಾಯಿ ಮುವತ್ತೆಂಟು ಲಕ್ಷ) ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಸ್ವಿಪ್ಟ್ ಕಾರನ್ನ ಅಮಾನತ್ತು ಪಡಿಸಿಕೊಂಡು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಪೊಲೀಸ್ ಅಧೀಕ್ಷಕರಾದ ಶಾಂತರಾಜ್ ಅವರು ಸಾಗರ ಪೊಲೀಸರ ಕ್ರಮವನ್ನು ಅಭಿನಂಧಿಸಿದ್ದಾರೆ.