Site icon TUNGATARANGA

ಉದ್ಯೋಗ ಖಾತರಿ ಯೋಜನೆಯಲ್ಲಿನ ಸಾಧನೆಗೆ ಸಾಗರ ತಾ.ಪಂ. E O ಪುಷ್ಪಾ ಕಮ್ಮಾರ್ ಅವರಿಗೆ ರಾಜ್ಯ ಪ್ರಶಸ್ತಿ

ಶಿವಮೊಗ್ಗ, ಮಾ.14:
2021-22 ರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನಲೆಯಲ್ಲಿ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ ಕಮ್ಮಾರ್ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.


ಈ ಪ್ರಶಸ್ತಿಯನ್ನ ಇಂದು ಬೆಂಗಳೂರಿನ ವಿಧಾನ ಸಭಾ‌ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆಯುವ ನರೇಗಾ ಹಬ್ಬದಲ್ಲಿ ಈ ಪ್ರಶಸ್ತಿ ಪಡೆಯಲಿದ್ದಾರೆ. ಈ ಪ್ರಶಸ್ತಿ ಪಡೆದ ಪುಷ್ಪರಿಗೆ ಸೊರಬ ಶಾಸಕ ಕುಮಾರ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.
ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯಲ್ಲಿ ಅತ್ಯಧಿಕ ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ಯಶಸ್ವಿಯಾಗಿ  ಅಧಿಕಾರಿಗಳಾದ ಪುಷ್ಪಾ ಎಂ ಕಮ್ಮಾರ್ ರವರಿಗೆ ಲಭಸಿರುವುದು ಅತ್ಯಂತ ಸಂತಸದ ವಿಷಯ. ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸಿರುವ ಅವರು ಶುಭವಾಗಲಿ ಎಂದಿದ್ದಾರೆ.

Exit mobile version