Site icon TUNGATARANGA

HIV ಬಾಧಿತರಿಗೆ ಮನೋಬಲ ತುಂಬುವುದು ಪುಣ್ಯದ ಕೆಲಸ: ಸುರೇಖಾ ನೇತೃತ್ವದಲ್ಲಿ ಅಭಯಧಾಮದ ಜಯಲಕ್ಷ್ಮೀ ಅವರಿಗೆ ಸನ್ಮಾನ

ಶಿವಮೊಗ್ಗ, ಮಾ.೧೪:
ಹೆಚ್‌ಐವಿ ಬಾಧಿತರಿಗೆ ಮೊನೋಬಲ ತುಂಬುವುದು ಪುಣ್ಯದ ಕೆಲಸ ಎಂದು ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುರೇಖಾ ಮುರುಳೀಧರ್ ಹೇಳಿದರು.
ಅವರು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಹೆಚ್‌ಐವಿ ಭಾದಿತೆಯಾಗಿದ್ದರೂ ಎದೆಗುಂದದೆ ಹಲವಾರು ವರ್ಷಗಳಿಂದ ಸಮಾಜದ ಎಚ್‌ಐವಿ ಪೀಡಿತರಿಗೆ ಆತ್ಮಬಲವನ್ನು ತುಂಬುತ್ತಿರುವ ಅಭಯಧಾಮ ಕೇಂದ್ರದ ಜಯಲಕ್ಷ್ಮಿ ರವರನ್ನು ಗೌರವಿಸಿ ಮಾತನಾಡಿದರು.


ದುರ್ಗಿಗುಡಿಯಲ್ಲಿರುವ ಅಭಯಧಾಮ ಸಂಸ್ಥೆಯು, ೨೦೦೬-೦೭ ರಿಂದ ಸೊಂಕಿತರಿಗೆ ಬೆಂಬಲವಾಗಿ ಕೆಲಸ ನಿರ್ವಹಿಸುತ್ತಿದೆ. ಸೊಂಕಿಗೆ ಒಳಗಾಗಿರುವ ವ್ಯಕ್ತಿಗಳಿಗೆ ಚಿಕಿತ್ಸೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯ ಅತ್ಯಂತ ಪುಣ್ಯದ ಹಾಗೂ ಶ್ಲಾಘನಿಯ ಕಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮೋಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ, ಜಿಲ್ಲಾ ಕಾರ್ಯದರ್ಶಿ ಸುಮಾ ಭೂಪಾಳಂ, ಮಾಧ್ಯಮ ಪ್ರಮುಖರಾದ ಉಷಾ, ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ರಾಧಾ ಗುರುದತ್ತ್, ಸುಧಾಮಣಿ, ಅನಿಲ, ಯಶೋಧ, ಸುನೀತಾ ಮೋಹನ್ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮಿ ಗಿರೀಶ್ ನಾಯಕ್ ಉಪಸ್ಥಿತರಿದ್ದರು.

Exit mobile version