ಶಿವಮೊಗ್ಗ :
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಯಲ್ಲಿ ಹೊಟ್ಟೆ ನೋವಿನಿಂದ ನವವಿವಾಹಿತೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಐಶ್ವರ್ಯ (18) ಸಾವು ಕಂಡ ದುರ್ದೈವಿ.
ಘಟನೆಯ ವಿವರ
ಶಿವಮೊಗ್ಗ ನಗರದ ಐಶ್ವರ್ಯ ಅವರನ್ನು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಹರೀಶ್ ಗೆ ಎರಡು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ಐಶ್ವರ್ಯ ಅವರು ಕಳೆದ ಎರಡು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಫುಡ್ ಪಾಯಿಸನ್ ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಚಿಕಿತ್ಸೆ ನೀಡಿ ಕಳುಹಿಸಿದ್ದರು.
ಹೊಟ್ಟೆ ನೋವು ಕಡಿಮೆಯಾಗದ ಕಾರಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕುವಾರ ಮೃತಪಟ್ಟಿದ್ದಾಳೆ