Site icon TUNGATARANGA

ಚಾಲಾಕಿ ಕಳ್ಳನನ್ನು ಪತ್ತೆಹಚ್ಚಿದ ಭದ್ರಾವತಿ ಪೇಪರ್ ಟೌನ್ ಪೊಲೀಸರು, 12 ಲಕ್ಷ ಬೆಲೆಯ ನಗದು- ಆಭರಣ ವಶ

ಭದ್ರಾವತಿ, ಮಾ.11:
ಭದ್ರಾವತಿ ಕಾಗದ ನಗರ ಪೊಲೀಸ್ ಇನ್ಸ್ ಸ್ಪೆಕ್ಟರ್ ಮಂಜುನಾಥ್ ಹಾಗೂ ಅವರ ತಂಡ ಚಾಲಾಕಿ ಕಳ್ಳನೊಬ್ಬನನ್ನ ಬಂಧಿಸಿದೆ. ಮದ್ಯವ್ಯಸನಿಯಾಗಿ ನಂತರ ಅದನ್ನು ಬಿಟ್ಟು ಮದ್ಯವ್ಯಸನದ ಬಗ್ಗೆ ಶಿಬಿರಗಳಲ್ಲಿ ಬಾಗವಹಿಸಿ ಜನಜಾಗೃತಿ ಮೂಡಿಸುತ್ತಿದ್ದಾತ ಸದ್ದು ಮಾಡದೇ, ಮನೆಯಲ್ಲಿರುವ ತಾಯಿಗೂ ಗೊತ್ತಿಲ್ಲದೇ ಬಾರೀ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.ಅವನ ವಿವರಗಳು ಹಾಗೂ ಮಾಹಿತಿಗಳು ತೀರಾ ವಿಚಿತ್ರ.


ವಿವರ:
ದಿನಾಂಕ 13-01-2022 ರಂದು ಬೆಳಗ್ಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರಬ್ಬರ್ ಕಾಡು ಗ್ರಾಮದ ವಾಸಿಯೊಬ್ಬರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮನೆಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಭಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಮನೆಯ ಒಳಗಡೆ ಅಲ್ಮೆರಾದಲ್ಲಿ ಮನೆ ಕಟ್ಟುವ ಸಲುವಾಗಿ ತಂದಿಟ್ಟಿದ್ದ ರೂ 6,00,000/- ನಗದು ಹಣ ಮತ್ತು ಸುಮಾರು 5,66,000/- ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0008/2022 ಕಲಂ 454, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಪಿ.ಐ. ಪೇಪರ್ ಟೌನ್ ಪೊಲೀಸ್ ಠಾಣೆ, ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ನಿನ್ನೆ ಪ್ರಕರಣದ ಚಾಲಾಕಿ ಆರೋಪಿ ಚೇತನ್ ಎಸ್, 27 ವರ್ಷ, ರಬ್ಬರ್ ಕಾಡುಗ್ರಾಮದ ನಿವಾಸಿಯನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿತನಿಂದ ರೂ 5,60,000/- ನಗದು ಹಣ ಹಾಗೂ ರೂ 6,43,000/- ಅಂದಾಜು ಮೌಲ್ಯದ ಒಟ್ಟು 134.44 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.


ಪಿಐ ಮಂಜುನಾಥ್ ಹಾಗೂ
ಪೊಲೀಸ್ ತಂಡದ ಈ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಡಿವೈಎಸ್ ಪಿ ಉಮೇಶ್ ಈಶ್ವರಚಂದ್ರ ಅವರು ಶ್ಲಾಘಿಸಿದ್ದಾರೆ.

Exit mobile version