ಶಿವಮೊಗ್ಗ. ಮಾ.08:
ಕೊನೆ ಉಸಿರು ಇರುವವರೆಗೂ ರೈತರಿಗೆ ಹಾಗೂ ಪಕ್ಷಕ್ಕೆ ಋಣಿಯಾಗಿರುವೆ ಎಂದು ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಹೇಳಿದರು.
ಅವರು ಇಂದು ಸ್ವಂತಃ ಖರ್ಚಿನಿಂದ ನಾಲೆಯ ಹೂಳು ತೆಗೆಸಿದ ಚಂದ್ರಶೇಖರ ಪೂಜಾರ್ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕೊರೊನಾ ಮಹಾಮಾರಿಯಿಂದ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸರಿಯಾದ ಕೆಲಸ ಹಾಗೂ ಕಾಮಗಾರಿಗಳನ್ನು ಮಾಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ತಮಗೇನು ಲಾಭ ಸಿಗುತ್ತದೆ ಎಂಬುವವರ ಮಧ್ಯದಲ್ಲಿ ಚಂದ್ರಶೇಖರ್ ಪೂಜಾರ್ ಎಂಬುವವರು ಶಿವಮೊಗ್ಗ ಹರಿಹರ ಮುಖ್ಯ ರಸ್ತೆಯಿಂದ ಡಿ.ಬಿ ಕೆರೆ ಡ್ಯಾಂನವರೆಗಿನ ಸುಮಾರು ಒಂಭತ್ತು ಕಿ.ಲೋ.ಮೀಟರ್ ನಾಲೆಯ ಹೂಳನ್ನು ಸ್ವತಃ ಖರ್ಚಿನಿಂದ ತೆಗೆಸಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾಪರಶುರಾಮ್ ಹಾಗೂ ರೈತಮುಖಂಡರು ಭಾಗವಹಿಸಿದ್ದರು.