Site icon TUNGATARANGA

ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ‘ಮಹಿಳೆ ಅಬಲೆಯಲ್ಲ ಸಬಲೆ- ಹೆಣ್ಣೆಂದರೆ ಆಳತೆಯಲ್ಲ, ಹೆಣ್ಣೆಂದರೆ ಜಗನ್ಮಾತೆ-ಜಗದ ಸೃಷ್ಟಿದಾತೆ’ ವಿಶೇಷ ಲೇಖನ


ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ “ಹೆಣ್ಣೆಂದರೆ ಆಳತೆಯಲ್ಲ, ಹೆಣ್ಣೆಂದರೆ ಜಗನ್ಮಾತೆ-ಜಗದ ಸೃಷ್ಟಿದಾತೆ” ಎಂಬ ವಿಚಾರದೊಂದಿಗೆ ಮಹಿಳೆಯ ಕುರಿತು ಅತಿಥಿ ಉಪನ್ಯಾಸಕಿ, ಕವಿ, ಲೇಖಕಿ ಬಿಂದು ಆರ್.ಡಿ. ರಾಂಪುರ ಅವರ ವಿಶೇಷ ಲೇಖನ ಇಂದಿನ ನಿಮ್ಮ ತುಂಗಾತರಂಗ ದಿನಪತ್ರಿಕೆಯಲ್ಲಿ ಪ್ರಕಟ. ಇದರಲ್ಲಿ ಇಂದಿರಾಜೀ ಅವರ ಅಪರೂಪದ ಚಿತ್ರ ಅಂತರ್ಜಾದಿಂದ ಪಡೆಯಲಾಗಿದೆ. -ಸಂ.

ಲೇಖಕಿ ಬಿಂದು ಆರ್.ಡಿ. ರಾಂಪುರ

ಮಹಿಳೆಯರನ್ನು ಇನ್ನೂ ಒಂದು ಭೋಗದ ವಸ್ತುವನ್ನಾಗಿ ನೋಡುತ್ತಿದ್ದವು. ಅದರಿಂದ ಸಮಾಜದ ಮುಖ್ಯವಾಹಿನಿಯಿಂದ ಅವಳನ್ನು ದೂರ ಇಟ್ಟು ಕಡೆಗಣಿಸಿದ್ದರಿಂದ ಮತ್ತು ಮಹಿಳೆಯರು ಇನ್ನೂ ಅಶಕ್ತರು ಇರುವದರಿಂ ದಲೇ ಮಹಿಳಾ ಸಶಕ್ತಿಕರಣ ಎಂಬ ವಿಷಯವು ಹೆಚ್ಚು ಪ್ರಾಮುಖ್ಯತೆ ಪಡೆದಕೊಂಡಿದೆ. ಮತ್ತು ಅವರು ಸಶಕ್ತರಾಗುವ ತನಕ ಮುಂದುವರಿ ಯುತ್ತಲೇ ಇರುತ್ತದೆ. ಅನಾದಿ ಕಾಲದಿಂದಲೂ ಭಾರತೀಯ ಮಹಿಳೆ ವೈಶಿಷ್ಟ್ಯಪೂರ್ಣವಾಗಿ ಇರುವಳು. ಸ್ನೇಹ, ಸಹನಶೀಲತೆ, ಮಮತೆ ಮುಂ ತಾದ ಸದ್ಗುಣಗಳ ಗಣಿಯಾಗಿರುವ ಮನೆಯ ಸರ್ವತೋಮುಖ ಏಳಿಗೆಗಾಗಿ ಪರಿಶ್ರಮ ಪಡುತ್ತಾ ಆರ್ಥಿಕವಾಗಿ ಪುರುಷನ ಸಮಾನವಾಗಿ ದುಡಿಯುತ್ತಿದ್ದಾರೆ.
“ಮಹಿಳಾಸಬಲೀಕರಣ” ಎಂದರೆ ಮಹಿಳೆ ಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀ ಕರಣ, ಸಶಕ್ತತೆ ಎನ್ನುತ್ತಾರೆ. ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯ ವನ್ನು ಹೆಚ್ಚಿಸುವುದೇ ಆಗಿರುತ್ತದೆ. ಸಬಲೀಕರಣ ಸಶಕ್ತತೆ ಎಂದರೆ, ಕೆಳಗೆ ಕಾಣಿಸಿದ ಅಂಶಗಳಲ್ಲಿ ಒಟ್ಟಾರೆಯಾಗಿ ಅವರ ಅರ್ಹತೆ ಸಾಮರ್ಥ್ಯ ವನ್ನು ಹೆಚ್ಚಿಸುವುದು. ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು.
ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು. ಅವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶಗಳನ್ನು ಹೊಂದುವುದು.
ಒಟ್ಟಿಗೇ ಅಥವಾ ಗುಂಪು ನಿರ್ಣಯ ತೆಗೆದು ಕೊಳ್ಳುವುದರಲ್ಲಿ ವಿಶ್ವಾಸದಿಂದ ಧೃಡಪಡಿಸುವ ಸಾಮರ್ಥ್ಯವನ್ನು ಹೊಂದುವುದು. ಬದಲಾವಣೆ ಯನ್ನು ಮಾಡುವುದರಲ್ಲಿ ಧನಾತ್ಮಕ ಭಾವನೆಯನ್ನು ಹೊಂದುವುದು. ಸ್ವಯಂ ಮತ್ತು ಗುಂಪು ಪ್ರಾಬಲ್ಯ ವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು. ಪ್ರಜಾ ಪ್ರಭುತ್ವದ ಮಾರ್ಗದಲ್ಲಿ ಇತರರ ಗ್ರಹಿಕೆ ಶಕ್ತಿಯನ್ನು ಬದಲಾಯಿಸುವಂತೆ ಮಾಡುವುದು. ಸ್ವಯಂ ಪ್ರೇರೇಪಿತರಾಗಿ ನಿರಂತರ ಬದಲಾ ವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.
ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗಿಕೊಳ್ಳುವುದು. ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ.


ಭಾರತೀಯ ಸಂವಿಧಾನವು ಮಹಿಳೆಯರೆಲ್ಲ ರಿಗೂ ಸಮಾನತೆ ರಾಜ್ಯದಿಂದ ತಾರತಮ್ಯ ವಿರಕೂಡದು ಸಮಾನ ಅವಕಾಶಗಳನ್ನು ನೀಡಿದೆ. ಇಷ್ಟಲ್ಲದೆ ರಾಜ್ಯಗಳು ಮಹಿಳೆಯರು ಮತ್ತು ಮಕ್ಕಳ ಪರವಾಗಿ ಹಲವು ಸವಲತ್ತುಗಳನ್ನು ಒದಗಿಸಿದೆ, ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀ ಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಳನ್ನು, ಭದ್ರತೆ ನೀಡುವಂತಹ ಅವಕಾಶಗಳನ್ನು ಕಲ್ಪಿಸಿದೆ.
ಮಹಿಳಾ ಸಬಲೀಕರಣದ ಇತಿಹಾಸ ಮಹಿಳಾ ಸಬಲೀಕರಣದ ಇತಿಹಾಸವು ನಿಖರ ವಾಗಿ ಹೇಳಲು ಆಗುವುದಿಲ್ಲ, ಇದು ಕೆಲವು ಚಳವಳಿಗಳು, ಪ್ರತಿಭಟನೆಗಳು, ಕ್ರಾಂತಿಗಳು ಮಹಿಳಾ ಸಬಲೀಕರಣದ ಕಾರಣ ವನ್ನು ಹೆಚ್ಚು ವೇಗವಾಗಿ ಹೆಚ್ಚಿಸಿವೆ. ೨೦ ನೇ ಶತಮಾನ ದಿಂದ ಮಹಿಳೆಯರು ಉದ್ಯೋಗ ಅವಕಾಶಗಳನ್ನು ಪಡೆದರು. , ಸಮಾಜದ ಕೆಳಸ್ತರದಲ್ಲಿರುವ ಮಹಿಳೆ ಯರು ಸಬಲೀಕರಣಗೊಳ್ಳದಿದ್ದರೆ ಮಹಿಳಾ ಸಬಲೀಕರಣ ಯಶಸ್ವಿಯಾಗಲು ಸಾಧ್ಯವಿಲ್ಲ. ೨೧ ನೇ ಶತಮಾನದ ಆರಂಭದ ನಂತರ, ತಳ ಮಟ್ಟಕ್ಕೆ ಸೇರಿದ ಮಹಿಳೆಯರು ಪುರುಷರಿಗೆ ಮಾತ್ರ ಮೀಸಲಾದ ಅನೇಕ ವೃತ್ತಿಪರ ಕೆಲಸಗಳನ್ನು ಕಂಡುಕೊಂಡಿದ್ದಾರೆ. ಇಂದು ಅನೇಕ ಮಹಿಳಾ ಮೇಸ್ತ್ರಿಗಳು, ಬಸ್ ಚಾಲಕರು, ಪೆಟ್ರೋಲ್ ಪಂಪ್ ಅಟೆಂಡರ್‌ಗಳು, ರೈತರು ಇತ್ಯಾದಿ. ಮತ್ತು ಈ ಎಲ್ಲಾ ಮಹಿಳೆಯರು ತಮ್ಮ ಕೆಲಸವನ್ನು ಅತ್ಯಂತ ಉತ್ತಮವಾಗಿ ಮಾಡುತ್ತಿದ್ದಾರೆ.
ಭಾರತದಲ್ಲಿ ಮಹಿಳಾ ಸಬಲೀಕರಣವನ್ನು ಇತರ ದೇಶಗಳಲ್ಲಿ ಹೋಲಿಸಲಾಗುವುದಿಲ್ಲ. ವೈದಿಕ ಯುಗದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಗೌರವವಿತ್ತು. ಮಹಿಳಾ ಶಿಕ್ಷಣದತ್ತ ಗಮನ ಹರಿಸಲೇ ಇಲ್ಲ. ‘ಸಹಧರ್ಮಿಣಿ’ ಎಂಬ ಪದವು ವೇದಕಾಲ ದಿಂದಲೂ ತಿಳಿದಿತ್ತು. ಸಹಧರ್ಮಿಣಿ ಎಂದರೆ? ಸಮಾನ ಪಾಲುದಾರ. ದೇಶವು ತನ್ನ ಮಹಿಳಾ ಪ್ರಧಾನ ಮಂತ್ರಿ ಮತ್ತು ಅಧ್ಯಕ್ಷರನ್ನು ಕಂಡಿತು, ದೇಶವು ಸೈನಾ ನೆಹ್ವಾಲ್ ಅಥವಾ ಪಿ.ಟಿ ಉಷಾ ಅವರಂತಹ ಅನೇಕ ಪ್ರಖ್ಯಾತ ಮಹಿಳಾ ಕ್ರೀಡಾಪಟುಗಳನ್ನು ಹೊಂದಿದೆ, ದೇಶವು ಎ. ಚಟರ್ಜಿ ಅಥವಾ ಬಿ ವಿಜಯಲಕ್ಷ್ಮಿ ಅವರಂತಹ ಪ್ರತಿಭಾವಂತ ಮಹಿಳಾ ವಿಜ್ಞಾನಿಗಳಿಂದ ಕೂಡಿದೆ ಭಾರತದಲ್ಲಿ ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ಯುದ್ಧ ಪಡೆಗಳನ್ನು ಸೇರು ತ್ತಿದ್ದಾರೆ. ಆದಾಗ್ಯೂ, ಭಾರತದಲ್ಲಿ ಪಿತೃಪ್ರಭುತ್ವದ ಹಿಡಿತದಿಂದ ಹೊರಬರಲು ಇನ್ನೂ ಕಷ್ಟ ಪಡುತ್ತಿರುವ ಅನೇಕ ಮಹಿಳೆಯರು ಇದ್ದಾರೆ? ವಿಶೇಷವಾಗಿ ಗ್ರಾಮೀಣ ವಲಯದಲ್ಲಿ.
ಮಹಿಳೆಯರ ಸಬಲೀಕರಣಕ್ಕೆ ಸ್ವಾತಂತ್ರ್ಯಕ್ಕಾಗಿ, ನಡೆಸಿದ ಅನೇಕ ಮಹನೀಯರ ಬಗ್ಗೆ ತಿಳಿದು ಬರುತ್ತದೆ.

ಅವರಲ್ಲಿ ಪ್ರಮುಖರಾದವರೆಂದರೆ ಬುದ್ಧ, ಬಸವಣ್ಣ, ರಾಜಾರಾಮ್ ಮೋಹನ್ ರಾಯ್, ಈಶ್ವರ್ ಚಂದ್ರ ವಿದ್ಯಾಸಾಗರ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಜವಾ ಹರಲಾಲ್ ನೆಹರು ಮುಂತಾದವರು. ಇವರಲ್ಲದೇ ಬ್ರಿಟಿಷ್ ಸರಕಾರವು ಕೂಡ ಮಹಿಳೆಯರ ಸಶಕ್ತಿಕರಣ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿತು. ಆದರೆ ಮಹಿಳೆಯರನ್ನು ಸಬಲೀಕರಣ ಗೊಳಿಸಬೇಕು ಎಂಬ ಇಚ್ಚೆ ಬಂದಿದ್ದ ಜನರಿಂದ ಮಾತ್ರ ಮಹಿಳೆಯರ ಸಶಕ್ತಿಕರಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಸ್ವಂತ ತಾವೇ ಮುಂದೆ ಬಂದು ಯಾವುದೇ ಜಾತಿ ಧರ್ಮ ಎಂದು ಭೇದ ಮಾಡದೆ ತಮ್ಮ ಸಶಕ್ತೀಕರಣದ ಕಡೆಗೆ ಒಗ್ಗಟ್ಟಾಗಿ ಮುಂದೆ ಸಾಗಬೇಕು ಸಾಮಾನ್ಯ ಮಹಿಳೆಯರು ಈಗಾಗಲೇ ಸಶಕ್ತಿಕರಣ ಗೊಂಡು ಮಹತ್ವದ ಸಾಧನೆ ಮಾಡಿದ ಮಹಿಳೆಯರಿಂದ ಪ್ರಭಾವಿತರಾಗಿ ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು. ಇಂತಹ ಪ್ರಭಾವಿ ದಿಟ್ಟ ಮಹಿಳೆಯರಲ್ಲಿ ಪ್ರಮುಖರಾದವರೆಂದರೆ. ಭಾರತದ ಪ್ರಥಮ ಮಹಿಳಾ ಪ್ರಧಾನಿ ಮತ್ತು ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾಗಾಂಧಿ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ನೊಬೆಲ್ ಶಾಂತಿ ಪುರಸ್ಕಾರ ಪಡೆದ ಸಮಾಜಸೇವಕಿ ಮದರ್ ತೆರೇಸಾ, ಗಾನಕೋಗಿಲೆ ಸರೋಜಿನಿ ನಾಯ್ಡು, ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತ ಕೃಪಲಾನಿ, ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಮೀರಾಕುಮಾರಿ, ಐಶ್ವರ್ಯ ರೈ, ಲತಾಮಂಗೇಶ್ಕರ್, ಸೋನಿಯಾಗಾಂಧಿ ಸುಷ್ಮಾಸ್ವರಾಜ್, ಉಮಾಭಾರತಿ ಮುಂತಾದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಿರ್ಮಲಾ ಸಿತಾರಾಂ, ಮಾಯವಾತಿ, ಜಯಲಿಲಿತಾ, ಸುನೀತಾ ವಿಲಿಯಮ್ಸ್, ಇನ್ಫೋಸಿಸ್ ಸುಧಾ ಮೂರ್ತಿ, ಬಚೇಂದ್ರಿಪಾಲ್ , ಪದ್ಮಶ್ರೀ ಜೋಗತಿ ಮಂಜಮ್ಮ, ಇನ್ನೂ ಹಲವಾರು ಸಾಧಕಿ ಮಹಿಳೆಯರಿದ್ದಾರೆ.
ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನು ಗ್ಗುತ್ತಿದ್ದಾರೆ. ಅವರ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ ಮತ್ತು ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಬೆಳೆದಿದ್ದಾಳೆ. ಮಹಿಳೆಯರು ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಸರ್ಕಾರವು ಹಿಂದುಳಿದ ವರ್ಗದ ಮಹಿಳೆಯರಿ ಗಾಗಿ ವಿಶೇಷ ಸವಲತ್ತುಗಳನ್ನು ಮತ್ತು ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.
ಮಹಿಳಾ ಸಬಲೀಕರಣದಲ್ಲಿ ಸರ್ಕಾರದ ಪಾತ್ರ
೧೯೮೭ ರಲ್ಲಿ ಮಹಿಳಾ ತರಬೇತಿ ಮತ್ತು ಉದ್ಯೋಗಕ್ಕೆ ನೆರವು ನೀಡುವ ಯೋಜನೆಯನ್ನು, ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಜಾರಿಗೆ ತರಲಾಯಿತು. ೧೯೮೨ರ ಎರಡರಲ್ಲಿ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಯಿತು. * ೧೯೮೮ ರಲ್ಲಿ ರಾಷ್ಟ್ರೀಯ ಮಹಿಳಾ ಸಮೃದ್ಧಿ ಯೋಜನೆ ೧೯೯೫ ರಲ್ಲಿ ಇಂದಿರಾ ಮಹಿಳಾ ಯೋಜನೆಯನ್ನು ಮತ್ತು ೨೦೦೧ರಲ್ಲಿ ಸ್ವಯಂಸಿದ್ದ ಯೋಜನೆಗಳನ್ನು ಜಾರಿಗೆ ತರಲಾಯಿತು. ಗ್ರಾಮೀಣ ಜನತೆಗೆ ಉದ್ಯೋಗ ಒದಗಿಸುವ ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆ ಅಡಿಯಲ್ಲಿ ಶೇಕಡಾ ೪೦ರಷ್ಟು ಫಲಾನುಭವಿಗಳು ಮಹಿಳೆಯರಿದ್ದಾರೆ.


ಕರ್ನಾಟಕದಲ್ಲಿ ಸ್ತ್ರೀಶಕ್ತಿ ಯೋಜನೆ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ೧/೩ ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ೨೦೦೧ನೇ ವರ್ಷವನ್ನು” ಮಹಿಳಾ ಸಶಕ್ತಿಕರಣ ವರ್ಷ “ಎಂದು ಘೋಷಿಸಲಾಗಿದೆ ಮಹಿಳೆಯರ ಸಶಕ್ತಿಕರಣ ದಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ವಯಂಸೇವಾ ಸಂಸ್ಥೆಗಳು ಬಹಳ ಮಹತ್ವದ ಪಾತ್ರ ವಹಿಸಿವೆ.
ಮಹಿಳಾ ಸಬಲೀಕರಣ ಮಾಡುವುದು ಹೇಗೆ?
ಮಹಿಳೆಯು ಸುರಕ್ಷತೆ ಮತ್ತು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ, ಬೌದ್ಧಿಕ, ಶೈಕ್ಷಣಿಕ, ಮಾನಸಿಕ ಹಾಗೂ ದೈಹಿಕವಾಗಿ ಸಶಕ್ತ ಗೊಳ್ಳುವ ಅಗತ್ಯವಿದೆ. ಮಹಿಳೆಯರ ಸುರಕ್ಷತೆಗೋಸ್ಕರ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನು ಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾ ಗಿದೆ. ಕಾನೂನುಗಳನ್ನು ಯಾವುದೇ ಪಕ್ಷಪಾತ ವಿಲ್ಲದೆ ಸಮರ್ಪಕವಾಗಿ ಜಾರಿಗೆ ತರುವ ತನಕ ಮಹಿಳೆಯರ ವಿರುದ್ಧದ ಅಪರಾಧಗಳು ನಿರಂ ತರವಾಗಿ ನಡೆಯುತ್ತಿರುತ್ತವೆ. ಅಭಿವೃದ್ಧಿಯಲ್ಲಿ ರಾಜಕೀಯವನ್ನು ಮಾಡಬಾರದು. ಮಹಿಳೆಯರ ವಿರುದ್ಧದ ಸಾವಿರಾರು ಪ್ರಕರಣಗಳು ನ್ಯಾಯಾ ಲಯಗಳಲ್ಲಿ ಬಾಕಿ ಉಳಿದಿವೆ. ಎಷ್ಟು ಪ್ರಕರಣ ಗಳನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿದೆ. ಅನೇಕ ಪ್ರಕರಣಗಳು ದೀರ್ಘಕಾಲ ನಡೆಯುತ್ತಿವೆ. ನಮ್ಮ ಕಾನೂನುಗಳಲ್ಲಿಯ ಕೆಲವೊಂದು ಲೋಪದೋಷಗಳಿಂದ ಆರೋಪಿ ಗಳು ಪಾರಾಗುತ್ತಿದ್ದಾರೆ ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಮರಣ ದಂಡನೆಯನ್ನು ವಿಧಿಸಬೇಕು.
ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು. ಪುರುಷರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸರಕಾರವು ಮಹಿಳೆಯರಿಗೆ ಉಚಿತ ಪ್ರಾಥಮಿಕ ಕಂಪ್ಯೂಟರ್ ತರಬೇತಿಯನ್ನು ಕೊಡಬೇಕು. ಒಳ್ಳೆಯ ಶಿಕ್ಷಣ ಮತ್ತು ಉತ್ತಮ ಉದ್ಯೋಗವಕಾಶಗಳು ಮಹಿಳೆಯರ ಮನೋ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಶಿಷ್ಯವೇತನ ಕೊಡಬೇಕು. ಪದವಿಯವರಿಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು.
ಭಾರತ ಸರ್ಕಾರವು ೨೦೦೧ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷ ಎಂದು ಘೋಷಿ ಸಿತ್ತು. ರಾಷ್ಟ್ರೀಯ ಮಹಿಳಾ ಸಬಲೀಕರಣ ರಾಜ್ಯ ನೀತಿಯು ೨೦೦೧ರಲ್ಲಿ ಜಾರಿಗೆ ಬಂದಿತು.

ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು : ಸಾಂತ್ವನ ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, ಮಹಿಳೆಯರಿಗೆ ಆರ್ಥಿಕ ನೆರವು, ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ವಿಶೇಷ ಘಟಕ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ, ಸ್ವಾಧಾರ, ಸಾಂತ್ವನ, ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಕ್ಷಣ ಆರ್ಥಿಕ ನೆರವು ಅವಶ್ಯಕತೆ ಇದ್ದಲ್ಲಿ ೨೦೦೦ ರೂಪಾಯಿಂದ ಗರಿಷ್ಥ ೧೦,೦೦೦ ರೂಪಾಯಿಗಳವರೆಗೆ ನೆರವು ನೀಡಲಾಗುವುದು.
ಪ್ರಸ್ತುತ ರಾಜ್ಯದಲ್ಲಿ ಒಟ್ಟು ೧೭೨ ಸಾಂತ್ವನ ಕೇಂದ್ರಗಳು ಕಾರ್ಯನಿರತವಾಗಿವೆ. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿವೆ.
ಒಟ್ಟಾರೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಬೆನ್ನುಲುಬಾಗಿ ನಿಲ್ಲುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಸಾಮಾಜಿಕ ಜವಾಬ್ದಾರಿಯಾಗಿದೆ. ಆಕೆಗೆ ಆತ್ಮಸ್ಥೈರ್ಯ ಮತ್ತು ತನನ್ನು ತಾನು ಕಾಪಾಡಿಕೊಳ್ಳುವ ಕಿತ್ತೂರು ರಾಣಿ, ಚೆನ್ನಮ್ಮ ಝಾನ್ಸಿ ರಾಣಿ, ಲಕ್ಷ್ಮೀಬಾಯಿಯಂತಹ ಈಗಿನ ಯುದ್ದಕಲೆಗಳ ಅವಶ್ಯಕತೆ ಇದೆ. ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಾಕಿಕೊಳ್ಳವುದು, ಮಹಿಳೆಯ ಆತ್ಮರಕ್ಷಣೆಯ ಯೋಜನೆ ರೂಪಿಸು ವುದು ಸರ್ಕಾರದ ಕರ್ತವ್ಯವಾಗಿದೆ. ಇಂದಿನ ಮಹಿಳೆಯರು ತಮ್ಮ ಗುರುತು ಇತಿಹಾಸ ಪುಟಗಳಲ್ಲಿ ಸೇರುವಂತಾಗಬೇಕಾದರೆ ಯಾವ ತೊಂದರೆಗಳಿಗೆ ಹೆದರದೇ ಮುನ್ನುಗ್ಗಬೇಕು, ಇಲ್ಲಿ ಯಾರು ತಪ್ಪೇ ಮಾಡದ ವ್ಯಕ್ತಿಗಳು ಇಲ್ಲ. ನಮ್ಮ ದಾರಿ ನ್ಯಾಯ ನಿಷ್ಠೆ ಪ್ರಾಮಾಣಿಕತೆಯಿಂದ ಇದ್ದರೆ ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ. ಹೆಣ್ಣು ಮನಸು ಮಾಡಿದರೆ ಗಡಿ ಕಾಯುವ ಕೆಲಸದಿಂದ ಇಡಿದು ಮನೆ ನಿಭಾಯಿಸುವ ಚಲದಂಕೆ ಮಲ್ಲೇ ಆಗಬಹುದು. ಎಲ್ಲಿಯವರೆಗೆ ಹೆಣ್ಣು ಮಕ್ಕಳು ಗೆರೆ ತಮಗೆ ತಾವೇ ಎಳೆದುಕೊಂಡು, ಬೇರೆಯ ಹೆಣ್ಣು ಮಕ್ಕಳನ್ನು ಸಹ ಮುಂದೆ ಹೋಗಲು ಬಿಡುವುದಿಲ್ಲವೊ ಅಲ್ಲಿಯವರೆಗೆ ಮಹಿಳಾ ಸಬಲೀಕರಣ ಸಾಧ್ಯವಿಲ್ಲ. ನಾರಿಗೆ ನಾರಿನೇ ಶತ್ರುವಾಗಿರುವಾಗಿರುತ್ತಾರೆ. ನಾರಿಗೆ ನಾರಿ ಶಕ್ತಿಯಾದಾಗ ಮಾತ್ರ ಪ್ರಪಂಚದ ಇತಿಹಾಸದಲ್ಲಿ ಹೆಣ್ಣಾಗಿ ಒಂದು ಸ್ಥಾನ ಪಡೆಯಬಹುದು. ನಿಮ್ಮ ಯೋಚನೆಗಳು, ಹವ್ಯಾಸ, ಜ್ಞಾನ, ಛಲ, ಗುರಿ, ಸಾಧನೆಯ ಗುರುತು ನಿಮ್ಮ ಭವಿಷ್ಯವಾಗಿರುತ್ತವೆ. ಪ್ರತಿ ಹೆಣ್ಣಿನಲ್ಲಿ ಒಬ್ಬಳು ಸಾಧಕಿ ಇರುತ್ತಾಳೆ. ಅದನ್ನು ಮೊದಲು ನಾವು ಗುರುತಿಸಿಕೊಂಡು ಕಾರ್ಯ ಪ್ರವೃತ್ತಿರಾಗಬೇಕು. ಸತ್ತ ಮೇಲೆ ಮಲಗುವುದು ಇದ್ದದ್ದೆ ಬದುಕಿದ್ದಾಗ ಸಾಯಬಾರದು. ಸತ್ತ ಮೇಲೂ ನಮ್ಮ ಕೆಲಸ ಉಳಿಯಬೇಕು ಅದೇ ನಿಜವಾದ ಸಾಧನೆ. ಪ್ರತಿ ಹೆಣ್ಣು ಹುಲಿಯಾಗಿ ಜೀವಿಸಬೇಕು, ನೊಂದವರಿಗೆ ಆಶಾಕಿರಣವಾಗಬೇಕು.

Exit mobile version