ಶಿವಮೊಗ್ಗ,ಆ.04:
ಜಿಲ್ಲಾ ಪೊಲೀಸ್ ಕಚೇರಿಯ DCIB ತಂಡ ಇಸ್ಪೀಟು ಜೂಜಾಟ ಹಾಗೂ ಶಿವಮೊಗ್ಗದ ಹೃದಯ ಭಾಗದಲ್ಲಿ ಮಟ್ಕಾ ಜೂಜಾಡುತ್ತಿದ್ದ 07 ಜನ ಆರೋಪಿತರ ಬಂಧನ ಹಾಗೂ ಜೂಜಾಟಕ್ಕೆ ಬಳಸಿದ ರೂ 83, 530 ರೂಪಾಯಿ ನಗದು ಹಣ ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುರದಾಳು ಗ್ರಾಮದ ಮೂರ್ತಿ ರವರ ಅಡಿಕೆ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪು ಸೇರಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ನಿರ್ಧೇಶನದಂತೆ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ ರವರ ನೇತೃತ್ವದಲ್ಲಿ, ಸಿಬ್ಬಂದಿಗಳನ್ನೊಳಗೊಂಡ ಜಿಲ್ಲಾ ಪೊಲೀಸ್ ಕಛೇರಿಯ DCIB ತಂಡ ದಾಳಿ ಮಾಡಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 06 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 64,640/- (ರೂಪಾಯಿ ಅರವತ್ತ ನಾಲ್ಕು ಸಾವಿರದ ಆರು ನೂರ ನಲವತ್ತು) ನಗದು ಹಣ, 4 ಮೊಬೈಲ್ ಫೋನ್ ಗಳನ್ನು ಹಾಗೂ ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
ಹೃದಯ ಭಾಗದಲ್ಲೇ ಓಸಿ
ಮಟ್ಕಾ ಜೂಜಾಟ ಆರೋಪಿತನ ಬಂಧನ ಹಾಗೂ ರೂ 18,890/- (ರೂಪಾಯಿ ಹದಿನೆಂಟು ಸಾವಿರದ ಎಂಟು ನೂರ ತೊಂಬತ್ತು) ನಗದು ಹಣ ವಶ ಪಡಿಸಿಕೊಂಡಿದೆ.
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಎ. ಸರ್ಕಲ್ ನ ಸುಲ್ತಾನ್ ಮರ್ಕೆಟ್ ನ ಹತ್ತಿರ ಆರೋಪಿತನು ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಐಬಿ ತಂಡ ದಾಳಿ ಮಾಡಿದೆ.
ಕಾರ್ಯಾಚರಣೆಯಲ್ಲಿ ಆರೋಪಿ ಅಪ್ಸರ್ ಪಾಷ, ವಾಸ ಟಿಪ್ಪುನಗರ ಶಿವಮೊಗ್ಗ ಈತನನ್ನು ಬಂಧಿಸಿ, ಆರೋಪಿತನಿಂದ ರೂ 18,890/- (ರೂಪಾಯಿ ಹದಿನೆಂಟು ಸಾವಿರದ ಎಂಟು ನೂರ ತೊಂಬತ್ತು) ನಗದು ಹಣ ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಅಮಾನತ್ತು ಪಡಿಸಿಕೊಂಡು, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.