Site icon TUNGATARANGA

ರಾಷ್ಟ್ರೀಯ ಸೇವಾ ಯೋಜನೆ ದೇಶಪ್ರೇಮ ಬೆಳೆಸುತ್ತದೆ: ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧ


ಶಿವಮೊಗ್ಗ : ರಾಷ್ಟ್ರೀಯ ಸೇವಾ ಯೋಜನೆ ದೇಶಪ್ರೇಮ ಬೆಳೆಸುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧ. ಜಿ. ಹೇಳಿದರು.


ಅವರು ಕುವೆಂಪು ವಿಶ್ವವಿದ್ಯಾಲಯದ ೨೦೧೯-೨೦ಮತ್ತು ೨೦೨೦-೨೧ನೇಸಾಲಿನ. ವಿ.ವಿ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಮಾತನಾಡುತ್ತಾ, ಎನ್‌ಎಸ್‌ಎಸ್. ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಎನ್. ಎಸ್. ಎಸ್. ಕಾರಣವಾಗುತ್ತದೆ ಎಂದರು.


ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ರೇವಣಕರ್ ಮಾತನಾಡಿ, ಎನ್‌ಎಸ್‌ಎಸ್ ಹಲವು ವಿಧದ ಕೆಲಸ ನಿರ್ವಹಿಸುವಂತೆ ಮಾಡಿದೆ ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದರು.


ಕುಲಪತಿ ಬಿ. ಪಿ. ವೀರಭದ್ರಪ್ಪ ಮಾತನಾಡಿ, ನಾನು ಕೂಡಾ ೪೦ ವರ್ಷದ ಹಿಂದೆ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ. ನಮ್ಮ ವಿಶ್ವವಿದ್ಯಾಲಯ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ. ಇಲ್ಲಿ ಮೇಲು ಕೀಳು ಯಾವುದು ಇಲ್ಲ. ಎಲ್ಲಾಪ್ರಶಸ್ತಿ ವಿಜೇತರು ಗಳಿಗೆ ಅಭಿನಂದನೆಗಳು ಎಂದರು.


ವಿವಿಯ ಎನ್‌ಎಸ್‌ಎಸ್. ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿ.ವಿ ಗೆ ಪ್ರತಿ ವರ್ಷ ಅನೇಕ ಪ್ರಶಸ್ತಿಗಳನ್ನು ನಮ್ಮ ಅಧಿಕಾರಿಗಳೂ, ಸ್ವಯಂಸೇವಕರೂ ತಂದುಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ಇತರರಿಗೆ ಸ್ಪೂರ್ತಿಯಾಗುತ್ತಿದ್ದಾರೆ ಎಂದು ತಿಳಿಸಿ ಸರ್ವರನ್ನು ಸ್ವಾಗತಿಸಿದರು.


ಸಾಧಕರಾದ ಮಾರುತಿ, ಡಾ. ಅಣ್ಣಪ್ಪ ಎನ್., ಡಾ.ಉಮೇಶ್ ಕು.ಭಾರ್ಗವಿ, ಡಾ.ಎಂ.ವೆಂಕಟೇಶ್ ಮಾಲತೇಶ ಎಚ್. ಹರ್ಷ ಅವರುಗಳು ವಿಶ್ವ ವಿದ್ಯಾಲಯ ಮಟ್ಟದ ಪ್ರಶಸ್ತಿಗಳನ್ನು ಪಡೆದರು.


ಇದೇ ಸಂದರ್ಭದಲ್ಲಿ ರಾಜ್ಯ ಎನ್. ಎಸ್. ಎಸ್. ಪ್ರಶಸ್ತಿ ಪಡೆದ , ಡಾ. ನಾಗರಾಜ ನಾಯ್ಕ್, ಡಾ. ಮೋಹನ್ ಹೆಚ್. ಎಸ್., ಪ್ರೊ. ಕೆ. ಎಮ್. ನಾಗರಾಜು, ಪ್ರಾಂಶುಪಾಲರಾದ ಪ್ರೊ. ಹೆಚ್. ಎಸ್. ಸುರೇಶ್, ಪ್ರೊ. ಬಿ. ಜಿ. ಧನಂಜಯ, ಸ್ವಯಂ ಸೇವಕರಾದ ಮಮತಾ, ಮಾರುತಿ ಇವರನ್ನು ಸನ್ಮಾನಿಸಲಾಯಿತು.


ಹಣಕಾಸು ಅಧಿಕಾರಿ ಶ್ರೀ ರಾಮಕೃಷ್ಣ. ಎಸ್ ಉಪಸ್ಥಿತರಿದ್ದರು.

Exit mobile version